ಕರೀಂಗಂಜ್: ಪೋಷಕರು ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ ಎಂದು ಹೇಳುತ್ತಾರೆ. ಅಲ್ಲದೇ ಪೋಷಕರಿಗೆ ತಮ್ಮ ಮಕ್ಕಳು ಹೇಗೆ ಇದ್ದರು ಅದು ಚೆನ್ನ. ಮಕ್ಕಳಿಗೆ ಯಾವುದೇ ಸಂಕಟ ಬರದಂತೆ ನೋಡಿಕೊಳ್ಳುತ್ತಾರೆ. ವಿಶೇಷವಾಗಿ ಪೋಷಕರು ತಮ್ಮ ಮಕ್ಕಳು ವಿಕಲಚೇತನರು ಆಗಿದ್ದರೆ ಅವರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಾರೆ. ಅವರು ಬದುಕಿರುವ ತನಗೆ ಅವರ ರಕ್ಷಣೆ ಮಾಡುತ್ತಾರೆ. ಅಂತಹದರಲ್ಲಿ ಇಲ್ಲೊಂದು ಕುಟುಂಬ ಮಾನಸಿಕ ಅಸ್ವಸ್ಥನಾದ ಮಗನನ್ನು ತಮಗೆ ಹೊರೆಯಾದ ಎಂದು ಕೊಂದು ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
Parents are believed to be caring and nurturing towards their children, especially when they are differently-abled or need extra care. But what if they become the reason for their child's death?
— The Assam Tribune (@assamtribuneoff) August 3, 2024
A shocking incident unfolded in Assam’s Karimganj district on Friday where a… pic.twitter.com/bNW35VphrI
ಮಾನಸಿಕ ಅಸ್ವಸ್ಥ ಯುವಕನನ್ನು ಪೋಷಕರು ಹಾಡಹಗಲೇ ನಿರ್ದಯವಾಗಿ ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯನ್ನು ನೋಡುಗರು ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಅದರಲ್ಲಿ ಯುವಕನ ತಾಯಿ ಅವನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಖುದ್ ಪುರಹುರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 32 ವರ್ಷದ ಸುಹೈಲ್ ಅಹಮ್ಮದ್ ಚೌಧರಿ ಬಲಿಪಶುವಾಗಿದ್ದು, ತಾಯಿ ದಿಲುವಾರಾ ಬೇಗಂ, ಚಿಕ್ಕಮ್ಮ ಹಸ್ನಾ ಬೇಗಂ ಮತ್ತು ತಂದೆ ಅಬ್ದುಲ್ ಶಾಹಿದ್ ಎಂಬುವವರು ಆತನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ ಎನ್ನಲಾಗಿದೆ. ನಂತರ ಇಷ್ಟಕ್ಕೆ ಸುಮ್ಮನಾಗದ ಪೋಷಕರು ಅವನನ್ನು ಒಂದು ಕೋಣೆಯಲ್ಲಿ ಬಂಧಿಸಿ ಸುಟ್ಟು ಹಾಕಿ ಶವವನ್ನು ಸ್ಥಳೀಯ ಕೊಳದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ.
ಕುಟುಂಬಕ್ಕೆ ಆತ ಹೊರೆಯಾದ ಕಾರಣ ಕುಟುಂಬವು ಈ ರೀತಿ ಯುವಕನನ್ನು ಕೊಂದಿದೆ ಮತ್ತು ಸಂತ್ರಸ್ತ ಸಣ್ಣ ಕಳ್ಳತನ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಯುವಕನ ಶವ ಕೊಳದಲ್ಲಿ ತೇಲುತ್ತಿದ್ದ ಹಿನ್ನಲೆಯಲ್ಲಿ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೊಳದಿಂದ ಶವವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವಕನ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಅಧಿಕ ರಕ್ತಸ್ರಾವವಾಗಿದೆ. ಹಾಗೇ ಅವನ ಕೈಕಾಲಿನ ಮೂಳೆ ಮುರಿದಿದೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇಂತಹ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.