Site icon Vistara News

Viral Video: ದಿಲ್ಲಿ ಮೆಟ್ರೊದಂತೆ ʼನಮ್ಮ ಮೆಟ್ರೊʼದಲ್ಲೂ ಬಡಿದಾಡಿಕೊಂಡ ಪ್ರಯಾಣಿಕರು! ವಿಡಿಯೊ ನೋಡಿ

Viral Video


ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಪ್ರಯಾಣಿಕರು ಹೆಚ್ಚಾಗಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಯಾಕೆಂದರೆ ಇದರಲ್ಲಿ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ. ಹಾಗೇ ಇದರಲ್ಲಿ ಸ್ಥಳಾವಕಾಶ ಕೂಡ ಹೆಚ್ಚಾಗಿರುವುದರಿಂದ ಆರಾಮದಾಯಕವಾಗಿ ಪ್ರಯಾಣಿಸಬಹುದು ಎಂದು ಜನರು ಹೆಚ್ಚು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಆದರೆ ಎಲ್ಲರೂ ಮೆಟ್ರೊದಲ್ಲಿಯೆ ಪ್ರಯಾಣಿಸಲು ಶುರು ಮಾಡಿದ್ದರಿಂದ ಮೆಟ್ರೊದಲ್ಲಿ ಸ್ಥಳಗಳ ಅಭಾವ ಉಂಟಾಗಿದೆ. ಹಾಗಾಗಿ ಇಲ್ಲಿ ಕಿಕ್ಕಿರಿದ ಜನಸಂದಣೆಯನ್ನು ನೋಡಬಹುದು. ಈ ಸಮಸ್ಯೆ ದೆಹಲಿ ಮೆಟ್ರೋದಲ್ಲಿ ಮಾತ್ರವಲ್ಲ ಇದು ಈಗ ಬೆಂಗಳೂರು ನಮ್ಮ ಮೆಟ್ರೋದಲ್ಲಿಯೂ ಕೂಡ ಶುರುವಾಗಿದೆ. ಈ ಮಧ್ಯೆ ಇದೀಗ ಬೆಂಗಳೂರು ನಮ್ಮ ಮೆಟ್ರೋದಲ್ಲಿ ಜನಸಂದಣಿಯ ನಡುವೆ ಜನರು ಜಗಳವಾಡಲು ಕೂಡ ಶುರುಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video )
ಆಗಿದೆ.

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕಿಕ್ಕಿರಿದ ಜನಸಂದಣೆ ಇದ್ದು, ಈ ನಡುವೆ ಇಬ್ಬರು ಪ್ರಯಾಣಿಕರು ವಾಗ್ವಾದ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಒಬ್ಬರಿಗೊಬ್ಬರು ಹೊಡೆದಾಡಿದ್ದಾರೆ. ಆ ದಟ್ಟ ಜನಸಂದಣಿಯ ನಡುವೆ ಅವರಿಬ್ಬರು ಹೊಡೆದಾಡುವುದನ್ನು ನೋಡಿ ಸಹಪ್ರಯಾಣಿಕರು ಗಾಬರಿಯಾಗಿದ್ದಾರೆ. ಅವರ ಜಗಳ ನಿಲ್ಲಿಸಲು ಸಹ ಪ್ರಯಾಣಿಕರು ಪ್ರಯತ್ನಿಸಿದರೂ ಕೂಡ ಅವರು ಸಮಾಧಾನಗೊಳ್ಳಲಿಲ್ಲ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಗಲಾಟೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ನೂಕುನುಗ್ಗಲಿನಿಂದ ಒಬ್ಬರನೊಬ್ಬರು ತಳ್ಳಿದ ಕಾರಣ ಈ ಜಗಳ ಶುರುವಾಗಿದೆ ಮತ್ತು ಈ ಜಗಳ ಸಾಮಾನ್ಯವಾಗಿರಲಿಲ್ಲ, ಇಬ್ಬರು ಸಿಕ್ಕಾಪಟ್ಟೆ ಹೊಡೆದಾಡಿಕೊಂಡರು ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ. ಈ ಘಟನೆ ನಡೆದ ಸ್ಥಳ ಮತ್ತು ದಿನಾಂಕ ಕೂಡ ತಿಳಿದಿಲ್ಲ. ಈ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ‘ChristinMP_’ ಹ್ಯಾಂಡಲ್ ಹಂಚಿಕೊಳ್ಳಲಾಗಿದೆ ಮತ್ತು ಬೆಂಗಳೂರಿನಲ್ಲಿ ಜನದಟ್ಟಣೆಯಿಂದ ತುಂಬಿದ ಮೆಟ್ರೋ ರೈಲಿನಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆದಿದೆ. ಬಿಎಂಆರ್ ಸಿಎಲ್ ವೀಡಿಯೊವನ್ನು ಪರಿಶೀಲಿಸುತ್ತಿದೆ ಮತ್ತು ಹೆಚ್ಚಿನ ವಿವರಗಳನ್ನು ತನಿಖೆ ನಡೆಸುತ್ತಿದೆ” ಎಂದು ಮಾಹಿತಿ ಬರೆದಿದ್ದಾರೆ.

ಈ ಘಟನೆಯನ್ನು ಪರಿಶೀಲಿಸಿದ ಮೆಟ್ರೋ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮತ್ತು ಈ ಸಮಸ್ಯೆಯನ್ನು ಪರಿಹರಿಸಲು, ಭವಿಷ್ಯದಲ್ಲಿ ಇಂತಹ ವಾಗ್ವಾದಗಳನ್ನು ತಪ್ಪಿಸಲು ರೈಲುಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಅವರು ನಿರ್ಧಾರ ಮಾಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮೊದಲೇ ಈ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಣವೀರ್‌ ಎದುರೇ ದೀಪಿಕಾ ಬೇಬಿ ಬಂಪ್ ಮೇಲೆ ಕೈಯಿಟ್ಟ ಒರಿ; ನೆಟ್ಟಿಗರಿಗೆ ಉರಿ!

ಈ ವಿಡಿಯೊಗೆ ಹಲವರು ಕಾಮೆಂಟ್ ಮಾಡಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಅಪಾಯಕಾರಿ ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಅಶಿಸ್ತಿನಿಂದ ಇಂತಹ ಘಟನೆ ನಡೆಯುತ್ತದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಮೆಟ್ರೋ ಒಳಗೆ ಜಗಳ ಮಾಡಿದ ವ್ಯಕ್ತಿಗಳನ್ನು ಪೊಲೀಸರಿಗೆ ಒಪ್ಪಿಸಬೇಕೆಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಹಾಗೇ ಪ್ರಯಾಣಿಕರು ಜಗಳವಾಡುವುದನ್ನು ನಿಲ್ಲಿಸಲು ಸಹ ಪ್ರಯಾಣಿಕರ ಪ್ರಯತ್ನಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version