Site icon Vistara News

Viral Video: ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ಕಾನ್‌ಸ್ಟೇಬಲ್‌ ತಾನೇ ಚಕ್ಕಂದ ಶುರು ಮಾಡಿದ!

Viral Video


ಸಾರ್ವಜನಿಕರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸುವುದು ಪೊಲೀಸರ ಕರ್ತವ್ಯವಾಗಿದೆ. ಆದರೆ ಇಲ್ಲೊಬ್ಬ ಪೊಲೀಸ್ ಕಾನ್ಸ್ಟೇಬಲ್ ಮಾಡಿದ ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಕಾನ್ಸ್ಟೇಬಲ್ ಒಬ್ಬರು ದಂಪತಿಯ ಜಗಳ ಪರಿಹರಿಸಲು ಬಂದು ಆ ಮಹಿಳೆಯೊಂದಿಗೆ ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ಇಲ್ಲಿ ಒಬ್ಬ ಮಾಡಿದ ಕೆಲಸದಿಂದ ಇಡೀ ಪೊಲೀಸ್ ಪಡೆಯ ಕೆಲಸದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಮೊರಾದಾಬಾದಿ ಗೆಟಿ ಚೌಕಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಪತಿ ಅವರ ಸರಸಸಲ್ಲಾಪದ ದೃಶ್ಯವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಂತರ ಇದು ವೈರಲ್ ಆಗಿದೆ. ಈ ಆಘಾತಕಾರಿ ದೃಶ್ಯವನ್ನು ನೋಡಿ ಆರೋಪಿ ಕಾನ್ಸ್ಟೇಬಲ್‍ನನ್ನು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಮಾನತುಗೊಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವರದಿ ಪ್ರಕಾರ, ಹಲವು ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಆಗ ಈ ಜಗಳವನ್ನು ಪರಿಹರಿಸಲು ಅವರು ಪೊಲೀಸರ ಸಹಾಯವನ್ನು ಕೋರಿದಾಗ ಈ ಘಟನೆ ಶುರುವಾಗಿದೆ. ಮಧ್ಯಸ್ಥಿಕೆ ವಹಿಸಲು ಮತ್ತು ಸಮಸ್ಯೆಯನ್ನು ಪರಿಹರಿಸಲು ಆರೋಪಿ ಕಾನ್ಸ್ಟೇಬಲ್ ಅನ್ನು ನಿಯೋಜಿಸಲಾಯಿತು. ಆದರೆ ಆ ಅಧಿಕಾರಿ ಮಹಿಳೆಯ ಪರವಾಗಿ ನಿಂತು ಪತಿಯನ್ನು ಕಾನ್ಸ್ಟೇಬಲ್ ಖಂಡಿಸಿದ್ದಾರೆ. ಇದರಿಂದಾಗಿ ಕಾಲಾನಂತರದಲ್ಲಿ, ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಕಾನ್ಸ್ಟೇಬಲ್ ಆಗಾಗ ಭೇಟಿಯಾಗುತ್ತಿದ್ದರು. ಒಂದು ದಿನ, ತನ್ನ ಹೆಂಡತಿ ಹಾಗೂ ಕಾನ್ಸ್ಟೇಬಲ್ ಮನೆಯೊಳಗೆ ಸರಸವಾಡುತ್ತಿರುವುದು ಕಂಡು ಕೋಪಗೊಂಡ ಪತಿ ಅವರನ್ನು ಕೋಣೆಯಲ್ಲಿ ಕೂಡಿಹಾಕಿ, ಪತ್ನಿಯ ಮೇಲೆ ಹಲ್ಲೆ ನಡೆಸಿ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ. ನಂತರ ಪತಿ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅಮ್ರೋಹಾ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅಮ್ರೋಹಾ ಎಸ್ಪಿ ತಕ್ಷಣ ಗಮನ ಹರಿಸಿ ನಗರದ ಸರ್ಕಲ್ ಆಫೀಸರ್ (ಸಿಒ) ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ವಿಚಾರಣೆಯ ನಂತರ, ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎನ್ನಲಾಗಿದೆ.

Exit mobile version