Site icon Vistara News

Viral Video: ಹೃಷಿಕೇಶದ ಗಂಗಾ ಘಾಟ್‌ನಲ್ಲಿ ಬಿಕಿನಿ ಧರಿಸಿದ ವಿದೇಶಿಯರ ಮೋಜು ಮಸ್ತಿ!

Viral Video

ಹೃಷಿಕೇಶ: ಸಾಮಾನ್ಯವಾಗಿ ಬಿಕಿನಿ ಧರಿಸಿದ ವಿದೇಶಿ ಮಹಿಳೆಯರು ಗೋವಾ ಬೀಚ್‍ನಂತಹ ಸ್ಥಳಗಳಲ್ಲಿ ಹೆಚ್ಚು ಕಂಡುಬರುತ್ತಾರೆ. ಗೋವಾ ಬೀಚ್‍ನಂತಹ ಸ್ಥಳಗಳಲ್ಲಿ ಈ ಉಡುಗೆ ಶೋಭೆ ತರಬಹುದು. ಆದರೆ ಇದನ್ನು ಭಕ್ತಾಧಿಗಳು ಸ್ನಾನ ಮಾಡುವಂತಹ ಪವಿತ್ರ ನದಿಗಳಲ್ಲಿ ಜಲಕ್ರೀಡೆ ಆಡಲು ಧರಿಸಿದರೆ ಹೇಗೆ? ಅದು ಭಕ್ತರ ಕೋಪಕ್ಕೆ ಕಾರಣವಾಗುವುದು ಸಹಜ. ಇದೀಗ ಅಂತಹದೊಂದು ಘಟನೆ ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದಿದೆ. ಇಲ್ಲಿನ ಪವಿತ್ರ ಗಂಗಾ ಘಾಟ್‍ನಲ್ಲಿ ವಿದೇಶಿಗರು ಬಿಕಿನಿ ಧರಿಸಿ ಮೋಜು ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದ್ದು, ಅನೇಕರ ಕೋಪಕ್ಕೆ ಕಾರಣವಾಗಿದೆ.

“ಹಿಮಾಲಯನ್ ಹಿಂದೂ” ಎಂಬ ಹ್ಯಾಂಡಲ್‌ನಲ್ಲಿ ಬಳಕೆದಾರರೊಬ್ಬರು ಈ ವಿಡಿಯೊ ಹಂಚಿಕೊಂಡಿದ್ದು, ಈ ವಿಡಿಯೊಗೆ “ಪೂಜ್ಯ ಗಂಗಾ ನದಿಯನ್ನು ಗೋವಾದಂತೆ ಕಡಲತೀರವಾಗಿ ಪರಿವರ್ತಿಸಿದೆ” ಎಂದು ಶೀರ್ಷಿಕೆ ನೀಡಿ ಟೀಕಿಸಿದ್ದಾರೆ. ಈ ಕ್ಲಿಪ್ ನಲ್ಲಿ ವಿದೇಶಿ ಮಹಿಳೆಯರು ಬಿಕಿನಿ ಧರಿಸಿ ಮತ್ತು ಪುರುಷರು ಶಾರ್ಟ್ಸ್ ಧರಿಸಿ ನದಿಯಲ್ಲಿ ಆನಂದಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ, ಈ ವಿಡಿಯೊಗೆ ಹಲವಾರು ಜನರು ಟೀಕೆ ಮಾಡಿದ್ದಾರೆ. ಆಧ್ಯಾತ್ಮಿಕತೆಯ ಕೇಂದ್ರವಾಗಿದ್ದ ಸ್ಥಳಗಳಲ್ಲಿ ಸಂಪ್ರದಾಯಗಳು ಮಾಯವಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ. ಇಲ್ಲಿನ ಸ್ಥಳೀಯರು ಈ ನಡವಳಿಕೆಯನ್ನು ಪವಿತ್ರ ನದಿಯ ಪಾವಿತ್ರ್ಯಕ್ಕೆ ಅಗೌರವವೆಂದು ಕಿಡಿಕಾರಿದ್ದಾರೆ.

ಈಗ ಹೃಷಿಕೇಶದಲ್ಲಿ ನಡೆಯುತ್ತಿರುವ ಈ ಘಟನೆ ಶೀಘ್ರದಲ್ಲೇ ಇದನ್ನು ಮಿನಿ ಬ್ಯಾಂಕಾಕ್ ಆಗಿ ಮಾಡಲಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚುತ್ತಿರುವ ಪ್ರಭಾವದಿಂದ ಹೃಷಿಕೇಶದ ಸಾಂಸ್ಕೃತಿಕ ಪರಂಪರೆ ನಾಶವಾಗುತ್ತಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಇನ್ನು ಮುಂದೆ ಹೃಷಿಕೇಶ್ ಆಧ್ಯಾತ್ಮಿಕ ಸ್ಥಳವಾಗಿ ಉಳಿಯುವುದಿಲ್ಲ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ. ಕೆಲವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿರುವ ಬಗ್ಗೆ ಟೀಕಿಸಿದರೆ, ಇನ್ನೂ ಕೆಲವರು ಜನರು ಪಾಶ್ಚಿಮಾತ್ಯರ ಕಡೆಗೆ ವಾಲುತ್ತಿರುವ ಬಗ್ಗೆ ವಾದ ಮಾಡಿದ್ದಾರೆ. ಸ್ಥಳೀಯ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡು ಪ್ರವಾಸೋದ್ಯಮ ಮಾದರಿಯನ್ನು ಅಧಿಕಾರಿಗಳು ಉತ್ತೇಜಿಸುತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ

Exit mobile version