Site icon Vistara News

Viral Video : ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

Viral Video


ನವದೆಹಲಿ : ಗಡಿಯಲ್ಲಿ ಕಾವಲು ಕಾಯುವ ಸೈನಿಕರ ಜೀವನ ಸರಳವಾಗಿರಲ್ಲ. ಅವರು ದೇಶಕ್ಕಾಗಿ ತಮ್ಮ ಜೀವವನ್ನೇ ಒತ್ತೆ ಇಡಬೇಕಾದ ಸಂದರ್ಭಗಳು ಬರುತ್ತದೆ. ಇದರಿಂದ ಅವರು ತಮ್ಮ ಹೆಂಡತಿ, ಮಕ್ಕಳು, ಕುಟುಂಬಸ್ಥರನ್ನು ತೊರೆಯಬೇಕಾಗುತ್ತದೆ. ಇಂತಹ ಶೌರ್ಯವನ್ನು ಪ್ರದರ್ಶಿಸಿದ ಭಾರತೀಯ ಸೇನೆ ಮತ್ತು ಅರೆಸೈನಿಕ ಪಡೆಗಳ ಸಿಬ್ಬಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 5, 2024 ರಂದು ಮರಣೋತ್ತರವಾಗಿ 10 ಕೀರ್ತಿ ಚಕ್ರಗಳನ್ನು ಪ್ರದಾನ ಮಾಡಿದ್ದಾರೆ. ಆ ವೇಳೆ ಸೇನಾ ವೈದ್ಯಕೀಯ ದಳದ ಕ್ಯಾಪ್ಟನ್ ಅವರ ಪತ್ನಿಯನ್ನು ನೊಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಕಳೆದ ವರ್ಷ ನಡೆದ ಬೆಂಕಿ ಅನಾಹುತದಲ್ಲಿ 26 ವರ್ಷದ ಅಂಶುಮಾನ್ ಸಿಂಗ್ ಅವರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿ ಬೆಂಕಿ ಅನಾಹುತದಲ್ಲಿ ಅನೇಕ ಜನರನ್ನು ರಕ್ಷಿಸಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಹಾಗಾಗಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕೀರ್ತಿ ಚಕ್ರವನ್ನು ಪ್ರದಾನ ಮಾಡಿದ್ದಾರೆ. ಆ ವೇಳೆ ಪ್ರಶಸ್ತಿಯನ್ನು ಸ್ವೀಕರಿಸಲು ಬಿಳಿ ಸೀರೆಗೆ ಚಿನ್ನದ ಬಣ್ಣದ ಅಂಚು ಹೊಂದಿರುವ ಸೀರೆಯುಟ್ಟು ಚಿಕ್ಕ ಹುಡುಗಿಯೊಬ್ಬಳು ತಾಯಿಯ ಜೊತೆ ಬರುತ್ತಿರುವುದನ್ನು ಕಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಅಚ್ಚರಿಗೊಂಡಿದ್ದಾರೆ.

ಆಕೆ ಅಂಶುಮಾನ್ ಸಿಂಗ್ ಅವರ ಪತ್ನಿ ಸೃಷ್ಟಿ ಸಿಂಗ್ ಆಗಿದ್ದು, ಬಾಳಿ ಬದುಕಬೇಕಾಗಿದ್ದ ಆಕೆ ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ವಿಧವೆಯಾಗಿರುವುದನ್ನು ಕಂಡು ಅಲ್ಲಿದ್ದವರೆಲ್ಲರೂ ಒಂದು ಕ್ಷಣ ಭಾವುಕರಾಗಿದ್ದಾರೆ. ಆಕೆ ಮದುವೆಯಾಗಿ ಕೇವಲ 5 ತಿಂಗಳಿನಲ್ಲೇ ತನ್ನ ಪತಿಯನ್ನು ಕಳೆದುಕೊಂಡಿದ್ದಾಳೆ. ಪತಿಯ ವೀರತೆಯ ಬಗ್ಗೆ ವಿವರಣೆ ನೀಡುವಾಗ ಆಕೆಯ ಕಣ್ಣಂಚಿನಲ್ಲಿ ಕಣ್ಣೀರು ಬರಲು ಶುರುವಾಗಿದೆ. ಇದನ್ನು ಕಂಡು ಕೀರ್ತಿ ಚಕ್ರವನ್ನು ಪ್ರದಾನ ಮಾಡಲು ಬಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದಕವನ್ನು ನೀಡಿ ಆಕೆಯ ಕೈ ಹಿಡಿದು ಸಮಾಧಾನ ಮಾಡಿದ್ದಾರೆ. ರಾಷ್ಟ್ರಪತಿಯವರು ತಮ್ಮ ಮಗಳಂತೆ ಆಕೆಯನ್ನು ಸಂತೈಸಿದ್ದನ್ನು ಕಂಡು ಎಲ್ಲರಿಗೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದ ಸುಂದರಿಯರಿವರು!

ಕಳೆದ ಜುಲೈನಲ್ಲಿ ಲಡಾಕ್‌ನ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಆರ್ಮಿ ಬಂಕರ್‌ನಲ್ಲಿ ಬೆಂಕಿಯ ಅಪಘಾತ ಸಂಭವಿಸಿತ್ತು. ಶಾಕ್ ಸರ್ಕ್ಯೂಟ್‌ನಿಂದ ಅನೇಕ ಟೆಂಟ್‌ಗಳು ಬೆಂಕಿಯ ಜ್ವಾಲೆಗೆ ಸುಟ್ಟು ಹೋಗಿದ್ದವು. ಈ ವೇಳೆ ಸೇನಾ ವೈದ್ಯಕೀಯ ದಳದ ಕ್ಯಾಪ್ಟನ್ ಆಗಿದ್ದ 26 ವರ್ಷದ ಅಂಶುಮಾನ್ ಸಿಂಗ್ ಅವರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿ ಬೆಂಕಿ ಅನಾಹುತದಲ್ಲಿ ಅನೇಕ ಜನರನ್ನು ರಕ್ಷಿಸಿದರು. ಆದರೆ ಈ ಅಪಘಾತದಲ್ಲಿ ಅಂಶುಮಾನ್ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಏರ್ ಲಿಫ್ಟ್ ಮಾಡಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಅಂಶುಮಾನ್ ಅವರು ನಿಧನರಾಗಿದ್ದರು.

Exit mobile version