ನೋಯ್ಡಾ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ, ವಾದವಿವಾದ ನಡೆಯುವುದು ಸಹಜ. ಆದರೆ ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದ ಕ್ಯಾಂಟೀನ್‍ನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಜಗಳವಾಡುತ್ತಾ ಕೈ ಕೈ ಮಿಲಾಯಿಸಿದ ಆಘಾತಕಾರಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ನೋಯ್ಡಾದ ಸೆಕ್ಟರ್ 125ರಲ್ಲಿರುವ ಅಮಿಟಿ ವಿಶ್ವವಿದ್ಯಾಲಯದ ಕಾಲೇಜು ಕ್ಯಾಂಟೀನ್ ಒಳಗೆ ಈ ಘಟನೆ ನಡೆದಿದೆ. 30 ಸೆಕೆಂಡುಗಳ ವಿಡಿಯೊದಲ್ಲಿ ಹುಡುಗಿಯರು ಪರಸ್ಪರರು ಧರಿಸಿದ್ದ ಬಟ್ಟೆಗಳ ಬಗ್ಗೆ ನಿಂದನೆ ಮಾಡುತ್ತಾ ಒಬ್ಬರು ಮತ್ತೊಬ್ಬರನ್ನು ತಳ್ಳುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
कितनी मेहनत से पढ़ाई कर रहे हैं बच्चे आगे तो बढ़ेंगे ही, वायरल वीडियो नामी यूनिवर्सिटी बताई जा रही है ,#Amity_University की कैंटीन में दो छात्रा आपसे में भिड़ी, दोनों युवतियों के बीच हुई मारपीट,मारपीट का वीडियो सोशल मीडिया पर हुआ वायरल, नोएडा की Amity University का बताया जा रहा… pic.twitter.com/H8ZyRoHPww
— निशान्त शर्मा (भारद्वाज) (@Nishantjournali) July 23, 2024
ಇಬ್ಬರು ವಿದ್ಯಾರ್ಥಿನಿಯರು ಪರಸ್ಪರರ ಕೂದಲನ್ನು ಎಳೆದುಕೊಂಡು, ಶರ್ಟ್ ಹಿಡಿದು ಎಳೆದಾಡಿ ಹೊಡೆದಾಡಿಕೊಂಡಿದ್ದಾರೆ. ಇಬ್ಬರ ಜಗಳವನ್ನು ತಪ್ಪಿಸಲು ಹುಡುಗಿಯೊಬ್ಬಳು ಮಧ್ಯೆ ಬಂದರೆ ಇವರಿಬ್ಬರೂ ಅವಳನ್ನು ಲೆಕ್ಕಿಸದೇ ಜಗಳವಾಡಿಕೊಂಡಿದ್ದಾರೆ. ಆದರೆ ಇತರ ವಿದ್ಯಾರ್ಥಿಗಳು ಇವರ ನಡುವಿನ ಹೊಡೆದಾಟವನ್ನು ಹುರಿದುಂಬಿಸುತ್ತ ಖುಷಿಪಟ್ಟಿದ್ದಾರೆ. ಹಾಗೇ ಇವರ ಬಡಿದಾಟವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ!
ಇದನ್ನೂ ಓದಿ: ಸರ್ಕಾರಿ ಕಚೇರಿಯ ಶೌಚಾಲಯದಲ್ಲಿ ಕ್ಲಾಸ್ 1 ಅಧಿಕಾರಿಗಳಿಗೆ ಮೀಸಲು! ಫೋಟೊ ನೋಡಿ
ಜಗಳದಲ್ಲಿ ಭಾಗಿಯಾಗಿರುವ ಹುಡುಗಿಯರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ವಿಡಿಯೊಗೆ ನಗುವುದರ ಮೂಲಕ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಕ್ಯಾಂಟೀನ್ ಅನ್ನು ಡಬ್ಲ್ಯುಡಬ್ಲ್ಯುಇ ಅರೆನಾಕ್ಕೆ ಹೋಲಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ವಿದ್ಯಾರ್ಥಿಗಳು ತುಂಬಾ ಕಷ್ಟಪಟ್ಟು ಅಧ್ಯಯನ ಮಾಡುತ್ತಿದ್ದಾರೆ, ಅವರು ಖಂಡಿತವಾಗಿಯೂ ಪ್ರಗತಿ ಸಾಧಿಸುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.