Site icon Vistara News

Viral Video: ಹಾವು ಕಚ್ಚಿದ ಮಹಿಳೆಯನ್ನು ಗಂಗಾ ನದಿಯಲ್ಲಿ ತೇಲಿ ಬಿಟ್ಟರು! ಆಕೆ ಬದುಕಿ ಬರುತ್ತಾಳೆ ಎಂದರು!

Dead Body in Ganga River

ಮೀರತ್: ಗಂಗೆಯನ್ನು ಪವಿತ್ರ ನದಿ ಎಂದು ಕರೆಯುತ್ತಾರೆ. ಬಹಳ ಹಿಂದಿನ ಕಾಲದಿಂದಲೂ ಸತ್ತವರ ದೇಹವನ್ನು ಸುಟ್ಟು ಅವರ ಅಸ್ತಿಯನ್ನು ಗಂಗಾ ನದಿಯಲ್ಲಿ ಬಿಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇತ್ತು. ಹಾಗಾಗಿ ಜನರು ಸತ್ತವರ ಅಸ್ತಿಯನ್ನು ತೆಗೆದುಕೊಂಡು ಕಾಶಿಗೆ ಪ್ರಯಾಣಿಸುತ್ತಿದ್ದರು. ಇದೀಗ ಹಾಪುರದ ಘರ್ ಮುಕ್ತೇಶ್ವರ ಪ್ರದೇಶದಲ್ಲಿ 20 ವರ್ಷದ ಯುವತಿಯ ಶವವನ್ನು ದೋಣಿಯಿಂದ ಗಂಗಾ (Viral Video) ನದಿಗೆ ತೇಲಿಸಿ ಬಿಟ್ಟ ಆಘಾತಕಾರಿ ವಿಡಿಯೊ ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ಬಟ್ಟೆಯಲ್ಲಿ ಸುತ್ತಿದ ಶವವನ್ನು ನದಿಗೆ ಎಸೆಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ಬಹದ್ದೂರ್‌ಗಢ ಪ್ರದೇಶದ ನಿವಾಸಿಯಾಗಿದ್ದು, ಜುಲೈ 26ರಂದು ಹಾವು ಕಡಿತದಿಂದ ಸಾವನ್ನಪ್ಪಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹಾವು ಕಡಿತದಿಂದ ಯಾರಾದರೂ ಸತ್ತರೆ, ಅವರ ದೇಹವನ್ನು ಗಂಗಾ ನದಿಯಲ್ಲಿ ತೇಲಿಸಿ ಬಿಟ್ಟರೆ ಅವರು ಮತ್ತೆ ಜೀವಂತವಾಗಿ ಬರುತ್ತಾರೆ ಎಂಬ ವಿಚಿತ್ರ ನಂಬಿಕೆ ಸ್ಥಳೀಯರಲ್ಲಿದೆ.

ಪೊಲೀಸರು ಆಕೆಯ ಕುಟುಂಬ, ಗ್ರಾಮದ ಮುಖ್ಯಸ್ಥ ಮತ್ತು ಕೆಲವು ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದು ಎಂದು ದೃಢವಾಗಿದೆ. ಸ್ಥಳೀಯ ತಂತ್ರಿಯಿಂದ ಚಿಕಿತ್ಸೆ ಪಡೆದರೂ ಆಕೆ ಚೇತರಿಸಿಕೊಳ್ಳದಿದ್ದಾಗ, ಆಕೆಯ ಕುಟುಂಬವು ಮೂಢನಂಬಿಕೆಯಂತೆ ಆಕೆಯ ಶವವನ್ನು ಗಂಗಾ ನದಿಗೆ ತೇಲಿಸಿ ಬಿಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಸತ್ಯಾಂಶಗಳನ್ನು ದೃಢಪಡಿಸಿದ ನಂತರ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದರು. ಮತ್ತು ಆಕೆಯ ಸಾವಿನಲ್ಲಿ ಯಾವುದೇ ದುರುದ್ದೇಶವಿಲ್ಲದ ಕಾರಣ ಶವವನ್ನು ಹಿಂಪಡೆಯುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಹಾವು ಕಚ್ಚಿದವರ ಶವಗಳನ್ನು ತೇಲಿಸಿ ಬಿಡುವ ಅಭ್ಯಾಸ ಸ್ಥಳೀಯ ಹಳ್ಳಿಗಳಲ್ಲಿ ಹೊಸತೇನಲ್ಲ. ಮೇ ತಿಂಗಳಲ್ಲಿ ಬುಲಂದ್ ಶಹರ್‌ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಹಾವು ಕಚ್ಚಿದ ನಂತರ 22 ವರ್ಷದ ವ್ಯಕ್ತಿಯ ದೇಹವನ್ನು ಎರಡು ದಿನಗಳ ಕಾಲ ಗಂಗಾ ನದಿಯಲ್ಲಿ ಮುಳುಗಿಸಲಾಗಿತ್ತು. ದೇಹವು ಕೊಳೆಯಲು ಪ್ರಾರಂಭಿಸಿದ ನಂತರವೇ ದಹನ ಮಾಡಲಾಗಿತ್ತು.

ಇದನ್ನೂ ಓದಿ: ವರದಕ್ಷಿಣೆ ತರಲು ನಿರಾಕರಿಸಿದ ಪತ್ನಿಗೆ ವಾಟ್ಸಾಪ್‍ನಲ್ಲೇ ತ್ರಿವಳಿ ತಲಾಖ್!

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾವು ಕಡಿತದಿಂದ ಸಾವನ್ನಪ್ಪಿದೆ. ಬಿಹಾರದ ಸರನ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ಸೋಮವಾರ ಸಂಸತ್ತಿನಲ್ಲಿ ಮಾತನಾಡಿ, “ದೇಶದಲ್ಲಿ ಪ್ರತಿವರ್ಷ ಸುಮಾರು 50,000 ಜನರು ಹಾವು ಕಡಿತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಪ್ರತಿ ವರ್ಷ ಭಾರತದಾದ್ಯಂತ 30-40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ” ಎಂದು ಹೇಳಿದ್ದಾರೆ.

Exit mobile version