ಮಥುರಾ: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವಂತಹ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಮೊದಲು ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದವು. ಆದರೆ ಈಗ ಊರಲ್ಲಿರುವ ಸಾಕು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಈ ಹಿಂದೆ ದನ, ಎಮ್ಮೆ, ಗೂಳಿಗಳು ಜನರ ಮೇಲೆ ದಾಳಿ ನಡೆಸಿದ ಸುದ್ದಿ ವರದಿಯಾಗಿತ್ತು. ಇದೀಗ ಕೋತಿಗಳ ಗುಂಪೊಂದು 5 ವರ್ಷದ ಬಾಲಕನ ಮೇಲೆ ದಾಳಿ ನಡೆಸಿವೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಮಥುರಾದ ವೃಂದಾವನದಲ್ಲಿ ಶುಕ್ರವಾರ ಜುಲೈ 12ರಂದು ಈ ಘಟನೆ ನಡೆದಿದೆ. ಕಿಶನ್ ಎಂಬ 5 ವರ್ಷದ ಬಾಲಕ ಕೋತಿಗಳ ದಾಳಿಗೆ ಒಳಗಾದವ. ವೃಂದಾವನದ ಮದನ್ ಮೋಹನ್ ಘೇರಾ ಪ್ರದೇಶದ ನಿವಾಸಿಯಾದ ಗೋಪಾಲ್ ಅವರ ಪುತ್ರನಾದ ಕಿಶನ್ ತನ್ನ ತಂದೆಯ ಆದೇಶದ ಮೇರೆಗೆ ಯಾವುದೋ ಕೆಲಸದ ಉದ್ದೇಶಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದಾನೆ.
मथुरा में बंदरों का आतंक, 5 साल के मासूम बच्चे पर बंदरों ने किया अटैक, स्थानीय लोगों ने दौड़कर बचाई बच्चे की जान, लाइव घटना सीसीटीवी में कैद@dmmathura7512 pic.twitter.com/nUjbATcbd0
— Pramod Kumar (@journalistpk123) July 13, 2024
ಕಿಶನ್ ಮದನ್ ಮೋಹನ್ ದೇವಾಲಯದ ಮೆಟ್ಟಿಲುಗಳನ್ನು ತಲುಪಿದ ಕೂಡಲೇ, ಕೋತಿಗಳು ಅವನ ಮೇಲೆ ದಾಳಿ ಮಾಡಿದವು. ವಿಡಿಯೊದಲ್ಲಿ ಬಾಲಕನ ಮೇಲೆ ಕೋತಿಗಳು ಅಟ್ಟಿಸಿಕೊಂಡು ಬಂದು ದಾಳಿ ಮಾಡುತ್ತಿದ್ದವು. ಅವನು ಎದ್ದು ತನ್ನ ಮನೆಯ ಕಡೆಗೆ ಓಡಲು ಪ್ರಾರಂಭಿಸಿದನು, ಆದರೆ ಬೀದಿಗಳಲ್ಲಿದ್ದ ಇತರ ಕೋತಿಗಳು ಅವನ ಮೇಲೆ ದಾಳಿ ಮಾಡಿ ಅವನನ್ನು ಕೆಳಕ್ಕೆ ತಳ್ಳಿದವು ಮತ್ತು ಆತನನ್ನು ಎಳೆದಾಡುತ್ತಿದ್ದವು.
ಆದರೆ ಅಲ್ಲಿದ್ದ ಕೆಲವು ಮಹಿಳೆಯರು ಕೋತಿಗಳಿಗೆ ಹೆದರಿ ಬಾಲಕನ ಸಹಾಯಕ್ಕೆ ಬರಲಿಲ್ಲ. ಕೋತಿಗಳು ಸ್ವಲ್ಪ ಸಮಯದವರೆಗೆ ಮಗುವನ್ನು ಹಿಡಿದು ಹೊಡೆಯುತ್ತಲೇ ಇದ್ದವು. ಕೊನೆಯಲ್ಲಿ ಕೆಲವು ಗಂಡಸರು ಬಾಲಕನನ್ನು ರಕ್ಷಿಸಲು ಓಡಿ ಬಂದು ಕೋತಿಗಳನ್ನು ಓಡಿಸಿದರು, ನಂತರ ಅವು ಬಾಲಕನನ್ನು ಬಿಟ್ಟು ಓಡಿಹೋದವು. ನಂತರ ಬಾಲಕ ಬೇಗನೆ ಎದ್ದು ತನ್ನ ಮನೆಯ ಕಡೆಗೆ ಓಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಿದ ಮೊದಲ ಮಹಿಳೆ ಆಲಿಯಾ ನೀಲಂ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅಧಿಕಾರಿಗಳು ನಿವಾಸಿಗಳಿಗೆ ಜಾಗರೂಕರಾಗಿರಲು ಮತ್ತು ಇದೇ ರೀತಿಯ ಘಟನೆಗಳನ್ನು ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅನೇಕ ಮಕ್ಕಳು ಆಗಾಗ್ಗೆ ಕೋತಿಗಳು ಮತ್ತು ನಾಯಿಗಳಂತಹ ಪ್ರಾಣಿಗಳಿಂದ ದಾಳಿಗೊಳಗಾಗುತ್ತಾರೆ. ಇದಕ್ಕೂ ಮುನ್ನ ಉತ್ತರಾಖಂಡದ ಹೃಷಿಕೇಶದಲ್ಲಿ ಎರಡು ಎತ್ತುಗಳು ಅಂಗಡಿಯೊಂದಕ್ಕೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ದಾಳಿ ಮಾಡಿದೆ. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಘಟನೆಯ ವೀಡಿಯೊ ಹೊರಬಂದಿದ್ದು, ಅಂಗಡಿಯೊಳಗೆ ಮಹಿಳೆಯರನ್ನು ಪ್ರಾಣಿಗಳು ತುಳಿಯುತ್ತಿರುವುದನ್ನು ತೋರಿಸುತ್ತದೆ.