Site icon Vistara News

Viral Video: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

Viral Video


ಮುಂಬೈ :
ಪೋಷಕರಿಗೆ ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಿ ಒಳ್ಳೆಯ ಉದ್ಯೋಗದಲ್ಲಿರಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಅವರು ಎಷ್ಟೇ ಕಷ್ಟದ ಜೀವನ ಇದ್ದರೂ ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸಲು ಮುಂದಾಗುತ್ತಾರೆ. ಅಂತಹ ಮಕ್ಕಳು ಮುಂದೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಂದರೆ ಅದರಿಂದ ತಂದೆತಾಯಿಗೆ ಆಗುವ ಸಂತೋಷ ಎಲ್ಲದಕ್ಕೂ ಮಿಗಿಲಾದುದು. ಅಂತದೊಂದು ಹೃದಯಸ್ಪರ್ಶಿ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗುತ್ತಿದೆ. ತಾಯಿಯೊಬ್ಬಳು ಕಠಿಣ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಬಂದ ತನ್ನ ಮಗನನ್ನು ತಬ್ಬಿಕೊಂಡು ತನ್ನ ಸಂತೋಷವನ್ನು ವ್ಯಕ್ತಪಡಿಸಿದ ರೀತಿಗೆ ಜನರು ಕೂಡ ಖುಷಿಪಟ್ಟಿದ್ದಾರೆ.

ಯೋಗೇಶ್ ಎಂಬ ಯುವಕ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈ ವಿಚಾರವನ್ನು ತನ್ನ ತಾಯಿಗೆ ಹೇಳಿದ್ದಾನೆ. ಆಗ ತಾಯಿ ತನ್ನ ಮಗನ ಸಾಧನೆಯ ಬಗ್ಗೆ ಹೆಮ್ಮೆಯಿಂದ ಅವನನ್ನು ನೋಡಿ ಭಾವುಕಳಾಗಿ ತಬ್ಬಿಕೊಂಡು ಸಂತೋಷದ ಕಣ್ಣೀರನ್ನು ಸುರಿಸಿದ್ದಾಳೆ. ಅವನ ತಾಯಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾಳೆ. ವಿಡಿಯೊದಲ್ಲಿ ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದನ್ನು ಹೇಳಿದ ತಕ್ಷಣ ನೆಲದಲ್ಲಿ ಕುಳಿತ ತಾಯಿ ಎದ್ದು ನಿಂತು ತನ್ನ ಮಗನನ್ನು ತಬ್ಬಿಕೊಂಡಳು, ಅವಳ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ಹರಿಯಿತು. ಹೃದಯಸ್ಪರ್ಶಿ ವೀಡಿಯೊ ಅನೇಕರ ಗಮನ ಸೆಳೆಯಿತು.

ಈ ಕ್ಲಿಪ್ ಅನ್ನು ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅನೇಕ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮತ್ತು ಅನೇಕರು ಈ ವೀಡಿಯೊವನ್ನು ನೋಡಿ ಖುಷಿಪಟ್ಟಿದ್ದಾರೆ. ಅನೇಕರು ಆ ಹುಡುಗನಿಗೆ ಅಭಿನಂದನೆ ತಿಳಿಸಿದ್ದಾರೆ. ಮತ್ತು ಕೆಲವರು ಆತ ತಾಯಿಯನ್ನು ಅಪ್ಪಿಕೊಂಡ ರೀತಿ ನೊಡಿ ಅವರ ಕಡೆಯಿಂದ ಅಪ್ಪುಗೆ ಒಂದು ರೀತಿಯ ವಿಚಿತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ ಇನ್ನೊಬ್ಬರು ಆತನ ತಾಯಿ ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ. ಅದು ಆಕೆಯ ಜೀವನದ ಅದ್ಭುತ ಕ್ಷಣ ಎಂದು ತಿಳಿಸಿದ್ದಾರೆ. ಹಾಗೇ ಮತ್ತೊಬ್ಬರು ಆತನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಬಾಲಕನನ್ನು ಅಟ್ಟಾಟಿಸಿ ದಾಳಿ ಮಾಡಿದ ಕೋತಿಗಳು; ಆತಂಕ ಮೂಡಿಸುವ ವಿಡಿಯೊ

ಅಲ್ಲದೇ ಇನ್ನೊಬ್ಬರು ‘ಇದು ಜೀವನಪರ್ಯಂತದ ಹೋರಾಟ, ಅವರ ಮಗನಿಗೂ ಇದು ಅರ್ಥವಾಗುವುದಿಲ್ಲ… – ಪೋಷಕರು ಸಾಮಾನ್ಯವಾಗಿ ಮಾಡುವ ಸಣ್ಣ ದೊಡ್ಡ ತ್ಯಾಗಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ, ಏಕೆಂದರೆ ಅವರು ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ. -ಅವರ ಮಗ ಎಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಅವರನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಅರಿತುಕೊಳ್ಳುತ್ತಾರೆ.’ ಎಂದು ಬರೆದಿದ್ದಾರೆ.

Exit mobile version