ಹುಲಿ ಎಂದರೆ ಎಲ್ಲರೂ ಭಯಭೀತರಾಗುತ್ತಾರೆ. ಯಾಕೆಂದರೆ ಹುಲಿ ತನ್ನ ಆಹಾರಕ್ಕಾಗಿ ಪ್ರಾಣಿಗಳು ಮಾತ್ರವಲ್ಲ ಮನುಷ್ಯರನ್ನೂ ಕೊಂದು ತಿನ್ನುತ್ತದೆ. ಹಾಗಾಗಿ ಹುಲಿಯನ್ನು ಎದುರು ನೋಡುವುದು ಬೇಡ ದೂರದಲ್ಲಿ ಅದರ ಗರ್ಜನೆ ಕೇಳಿದರೂ ಸಾಕು ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಾರೆ. ಅಂತಹದರಲ್ಲಿ ದುಬೈನಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗಾಗಿ ಹುಲಿಯೊಂದಿಗೆ ನಡೆದುಕೊಂಡು ಬಂದರೆ ಅಲ್ಲಿದ್ದವರ ಪರಿಸ್ಥಿತಿ ಹೇಗಿರಬೇಡ ಹೇಳಿ. ಈ ಮಹಿಳೆ ಹುಲಿ ಜೊತೆ ನಡೆದುಕೊಂಡು ಬರುವ ದೃಶ್ಯ ಎಲ್ಲರಲ್ಲೂ ಭಯವನ್ನು ಹುಟ್ಟಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದೆ.
ನಾಯಿ ಕುತ್ತಿಗೆಗೆ ಚೈನ್ ಕಟ್ಟಿಕೊಂಡು ವಾಕಿಂಗ್‌ಗೆ ಹೋಗುವವರು ನಿಮಗೆ ರಸ್ತೆಯಲ್ಲಿ ನೂರಾರು ಜನರು ಸಿಗುತ್ತಾರೆ. ಆದರೆ ದುಬೈಯಲ್ಲಿ ಮಹಿಳೆಯೊಬ್ಬಳು ವಾಕಿಂಗ್‌ಗೆ ಬರುವಾಗ ಕಾಡಿನಲ್ಲಿರಬೇಕಾದ ಹುಲಿಯನ್ನು ತನ್ನ ಜೊತೆ ಕರೆದುಕೊಂಡು ಬಂದರೆ ಹೇಗಿರಬೇಡ ಹೇಳಿ. ಹುಲಿಯ ಕುತ್ತಿಗೆಗೆ ಸರಪಳಿಯನ್ನು ಕಟ್ಟಿ ನಾಯಿಯಂತೆ ಕರೆದುಕೊಂಡು ಬರುತ್ತಿರುವ ಈಕೆಯ ಧೈರ್ಯ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ. ಹುಲಿಯ ಜೊತೆ ವಾಕಿಂಗ್‌ಗೆ ಹೋಗುವುದನ್ನು ವಿಡಿಯೊ ಮಾಡಿ “ ನನ್ನ ಮುದ್ದಿನ ಹುಲಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದೇನೆ “ ಎಂದು ಶೀರ್ಷಿಕೆ ಬರೆದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.
ಇವಳ್ಯಾರು ಎಂಬ ಕುತೂಹಲ ನಿಮಗೂ ಆಗಿರಬಹುದು ಅಲ್ವಾ…?ಈಕೆ ಇನ್ ಸ್ಟಾಗ್ರಾಂ, ಟಿಕ್ ಟಾಕ್ ಮತ್ತು ಯೂಟ್ಯೂಬ್ ನಲ್ಲಿ ಜಪ್ರಿಯರಾಗಿದ್ದ ನಾಡಿಯಾ ಖಾರ್ ಎನ್ನಲಾಗಿದೆ. ಈಕೆ ಫ್ಯಾಷನ್ ವಿಷಯಕ್ಕೆ ಹೆಸರುವಾಸಿಯಾಗಿದ್ದಾಳೆ. ಆಗಾಗ ಐಷರಾಮಿ ಕಾರುಗಳು, ವ್ಲಾಗ್ ಗಳು ಮತ್ತು ಕಿರು ವಿಡಿಯೊಗಳನ್ನು ಪ್ರದರ್ಶಿಸುತ್ತಿರುತ್ತಾಳೆ. ಇದೀಗ ಅವಳು ದುಬೈನಲ್ಲಿ ಹುಲಿಯ ಜೊತೆಗೆ ನಡೆದುಕೊಂಡು ಬರುತ್ತಿರುವ ವಿಡಿಯೊ ಪೋಸ್ಟ್ ಮಾಡಿದ್ದಾಳೆ. ವಿಡಿಯೊದಲ್ಲಿ ಅವಳು ಮೃಗಾಲಯದ ಒಳಗೆ ಮತ್ತು ದುಬೈನ ಸಾರ್ವಜನಿಕ ಉದ್ಯಾನವನದಲ್ಲಿ ಹುಲಿಯೊಂದಿಗೆ ನಡೆಯುತ್ತಿರುವ ವಿಡಿಯೊ ವೈರಲ್ ಆಗಿದೆ. ಇದಕ್ಕೆ 6 ಮಿಲಿಯನ್ ವೀಕ್ಷಣೆ ಮತ್ತು 100000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ಹಾಗೇ ಈ ವಿಡಿಯೊಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿದ್ದು, ಕೆಲವರು ಹುಲಿಯನ್ನು ನಾಯಿಯಂತೆ ಸಾಕಿಕೊಂಡಿರುವುದಕ್ಕೆ ಆಕೆಯ ಕೃತ್ಯವನ್ನು ಟೀಕಿಸಿದರೆ, ಕೆಲವರು ಅದನ್ನು ಕಂಡು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು “ಪ್ರಾಣಿಗಳ ಕ್ರೌರ್ಯವನ್ನು ಕ್ಷಮಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!
ದುಬೈಯಲ್ಲಿ ಕ್ರೂರ ಪ್ರಾಣಿಗಳನ್ನು ಸಾಕು ಪ್ರಾಣಿಗಳಂತೆ ಸಾಕುತ್ತಾರೆ. ಇಲ್ಲಿ ಹುಲಿ, ಸಿಂಹ, ಕರಡಿಗಳಂತಹ ನರಭಕ್ಷಕ ಪ್ರಾಣಿಗಳನ್ನು ಪಳಗಿಸಿ ಖಾಸಗಿ ಮೃಗಾಲಯದಲ್ಲಿ ಸಾಕುತ್ತಾರೆ. ಅದರ ಜೊತೆಗೆ ಕೋತಿ ಮತ್ತು ಜಿರಾಫೆಗಳಂತಹ ಪ್ರಾಣಿಗಳಿಗೂ ವಸತಿ ನೀಡುತ್ತಾರೆ. ಇದು ಅವರಿಗೆ ಪ್ರಾಣಿಗಳ ಮೇಲಿದ್ದ ಕಾಳಜಿಯನ್ನು ತೋರಿಸುತ್ತದೆ.
ಈಗ ಸೋಷಿಯಲ್ ಮೀಡಿಯಾದ್ದೇ ಹವಾ. ತಿಂದಿದ್ದು, ಕುಡಿದಿದ್ದು, ಹೆತ್ತಿದ್ದು ಎಲ್ಲವನ್ನೂ ಇದರಲ್ಲಿ ಹಾಕುತ್ತಾರೆ. ಆ ದೇಶದಲ್ಲಿ ಬೆಡಗಿಯೊಬ್ಬಳು ಹಸಿ ಹಾವನ್ನೇ ತಟ್ಟೆಯಲ್ಲಿಟ್ಟುಕೊಂಡು ತಿಂದರೆ, ಮತ್ತೊಬ್ಬಳು ಹರೆಯದ ಹುಡುಗಿ ಅಜ್ಜನನ್ನೇ ಪ್ರೀತಿಸಿ ಮದುವೆಯಾದಳು. ಈಗ ಲೈಕ್ಸ್, ಕಾಮೆಂಟ್‌ಗಳಿಗಾಗಿ ಏನು ಬೇಕಾದರೂ ಮಾಡುವುದಕ್ಕೆ ಸೈ ಅನ್ನುವ ಹಂತದಲ್ಲಿ ನಾವಿದ್ದೇವೆ.