ಸಾಮಾನ್ಯವಾಗಿ ಹೆಚ್ಚಿನ ಮಾಲ್‍ಗಳಲ್ಲಿ ಮಕ್ಕಳಿಗಾಗಿ ಒಂದು ವಿಭಾಗವನ್ನು ನಿರ್ಮಿಸಲಾಗಿರುತ್ತದೆ. ಅಲ್ಲಿ ಮಕ್ಕಳಿಗೆ ಮನೋರಂಜನೆ ನೀಡಲು ಅನೇಕ ರೀತಿಯ ಆಟಗಳಿರುತ್ತದೆ. ತಮ್ಮ ಹೆತ್ತವರ ಜೊತೆ ಮಾಲ್‍ಗಳಿಗೆ ಬರುವ ಮಕ್ಕಳು ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಅಂತಹ ಮಕ್ಕಳು ಈ ಮಾಲ್‍ಗಳಲ್ಲಿ ಮಕ್ಕಳಿಗಾಗಿ ಇರುವ ವಿಭಾಗಕ್ಕೆ ಹೋಗಿ ಆಟಗಳನ್ನು ಆಡಬಹುದು. ಇದು ಅವರಿಗೆ ಉಲ್ಲಾಸವನ್ನು ನೀಡುತ್ತದೆ. ಇತ್ತೀಚೆಗೆ, ಮಾಲ್‍ವೊಂದರಲ್ಲಿ ಅಂತಹ ಒಂದು ಆಟವನ್ನು ಆಡುವ ವಿಡಿಯೊ ವೈರಲ್ (Viral Video)ಆಗಿತ್ತು.
ಈ ಆಟದಲ್ಲಿ, ಮಕ್ಕಳನ್ನು ಹಗ್ಗದಿಂದ ಕಟ್ಟಿ ಚಿಪ್ಸ್ ಪ್ಯಾಕೆಟ್‍ಗಳ ರಾಶಿಯಲ್ಲಿ ತೂಗುಹಾಕಲಾಗುತ್ತದೆ ಮತ್ತು ಆಗ ಅವರು ತಮ್ಮ ಕೈಲಾದಷ್ಟು ಪ್ಯಾಕೆಟ್‍ಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ. ಒಬ್ಬ ಹುಡುಗಿ ಈ ಆಟವನ್ನು ಆಡುವಾಗ ಬಾರೀ ಬುದ್ದಿವಂತಿಕೆ ಉಪಯೋಗಿಸಿ ಚಿಪ್ಸ್ ಪ್ಯಾಕೆಟ್‍ಗಳನ್ನು ಸಂಗ್ರಹಿಸಿದ್ದಾಳೆ.
ಮಕ್ಕಳಿಗಾಗಿ ವಿವಿಧ ಆಟಗಳನ್ನು ಹೊಂದಿರುವ ಮಾಲ್‍ಗಳಲ್ಲಿರುವ ಗೇಮಿಂಗ್ ವಿಭಾಗವನ್ನು ತೋರಿಸುವ @mix_dazzleನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಚಿಪ್ಸ್ ರಾಶಿಯೊಂದಿಗೆ ಒಂದು ಸ್ಟಾಲ್ ಇದೆ. ಈ ರಾಶಿಯಿಂದ, ಮಕ್ಕಳನ್ನು ಹಗ್ಗದಿಂದ ನೇತುಹಾಕಲಾಗುತ್ತದೆ ಮತ್ತು ಅವರಿಗೆ ಒಮ್ಮೆಗೆ ಬೇಕಾದಷ್ಟು ಪ್ಯಾಕೆಟ್‍ಗಳನ್ನು ತೆಗೆದುಕೊಳ್ಳಲು ಹೇಳಲಾಗುತ್ತದೆ. ನಂತರ ಅವರನ್ನು ಹಗ್ಗದ ಮೂಲಕ ಹಿಂದಕ್ಕೆ ಎಳೆಯಲಾಗುತ್ತದೆ. ಈ ಸಮಯದಲ್ಲಿ, ಮಕ್ಕಳು ಎಷ್ಟು ಪ್ಯಾಕೆಟ್‍ಗಳನ್ನು ಸಂಗ್ರಹಿಸಿರುತ್ತಾರೆ ಅದನ್ನು ಅವರಿಗೆ ನೀಡಲಾಗುತ್ತದೆ.
ಈ ವಿಡಿಯೊದಲ್ಲಿ, ಪುಟ್ಟ ಹುಡುಗಿಯೊಬ್ಬಳು ಈ ಆಟ ಆಡಿದ್ದಾಳೆ. ಆ ಹುಡುಗಿಯನ್ನು ಹಗ್ಗದಿಂದ ನೇತುಹಾಕಿ ಚಿಪ್ಸ್ ರಾಶಿಯಲ್ಲಿ ಇರಿಸಲಾಯಿತು. ನಂತರ ಹುಡುಗಿಗೆ ಸುಮಾರು 5 ರಿಂದ 10 ಸೆಕೆಂಡುಗಳನ್ನು ನೀಡಲಾಯಿತು. ಈ ಸಮಯದಲ್ಲಿ, ಅವಳು ತನ್ನ ಬುದ್ಧಿವಂತಿಕೆ ಬಳಸಿ ಸಾಧ್ಯವಾದಷ್ಟು ಚಿಪ್ಸ್ ಪ್ಯಾಕೆಟ್ ಸಂಗ್ರಹಿಸುವ ಪ್ಲ್ಯಾನ್ ಮಾಡಿ ತನ್ನ ಎರಡೂ ಕೈಗಳ ಜೊತೆಗೆ ತನ್ನ ತೋಳುಗಳ ನಡುವೆ ಪ್ಯಾಕೆಟ್‍ಗಳನ್ನು ಸಂಗ್ರಹಿಸಿದಲ್ಲದೇ ತನ್ನ ಕಾಲುಗಳನ್ನು ಒಟ್ಟಿಗೆ ಸೇರಿಸಿಕೊಂಡು ಅದರಲ್ಲಿ ಕೂಡ ಹಲವು ಪ್ಯಾಕೆಟ್‍ಗಳನ್ನು ಸಂಗ್ರಹಿಸಿದ್ದಾಳೆ. ಈ ರೀತಿಯಾಗಿ, ಅವಳು ಸಾಧ್ಯವಾದಷ್ಟು ಚಿಪ್ಸ್ ಪ್ಯಾಕೆಟ್‍ಗಳನ್ನು ಸಂಗ್ರಹಿಸಿದಳು. ನಂತರ ಅವಳು ಅದರಿಂದ ಹೊರಬಂದ ನಂತರ, ಪ್ಯಾಕೆಟ್‍ಗಳನ್ನು ನೆಲದ ಮೇಲೆ ಹಾಕಿದ್ದಾಳೆ. ಅವಳು ಸಂಗ್ರಹಿಸಿದ ಚಿಪ್ಸ್ ಪ್ಯಾಕೆಟ್‍ಗಳನ್ನು ನೋಡಿದರೆ ಒಂದು ಮಗು ಇಷ್ಟು ಪ್ಯಾಕೆಟ್‍ಗಳನ್ನು ತೆಗೆದುಕೊಳ್ಳಬಹುದು ಎಂದು ಅಂಗಡಿಯವರು ಊಹಿಸಲು ಸಾಧ್ಯವಿಲ್ಲ.
ಇದನ್ನೂ ಓದಿ:ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!
ಈ ವಿಡಿಯೊವನ್ನು 47 ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು ಅನೇಕ ಜನರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಗಳಲ್ಲಿ ಹಂಚಿಕೊಂಡಿದ್ದಾರೆ. ಒಬ್ಬರು ಕಷ್ಟಪಟ್ಟು ಕೆಲಸ ಮಾಡಲು ಇಷ್ಟವಿಲ್ಲದವರು ಬುದ್ಧಿವಂತರಾಗಿರಬೇಕು ಎಂದು ಹೇಳಿದರು. ಈ ಹುಡುಗಿ ತುಂಬಾ ಸ್ಮಾರ್ಟ್ ಆಗಿ ಕಾಣುತ್ತಾಳೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಈ ಪೀಳಿಗೆಯ ಮಕ್ಕಳು ತುಂಬಾ ಬುದ್ಧಿವಂತರು ಎಂದು ಒಬ್ಬರು ಹೇಳಿದರೆ, ಮಗುವಿನ ಪೋಷಕರು ಮಗಳ ಬುದ್ಧಿವಂತಿಕೆ ಕಂಡು ತುಂಬಾ ಹೆಮ್ಮೆಪಡುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.