Viral Video: ಮಾಲ್‍ಗೇಮ್‌ನಲ್ಲಿ ಚಿಪ್ಸ್‌ ಪ್ಯಾಕೆಟ್‌ ಸಂಗ್ರಹಿಸಿದ ಪುಟ್ಟ ಹುಡುಗಿಯ ಬುದ್ಧಿವಂತಿಕೆ ನೋಡಿ! - Vistara News

Latest

Viral Video: ಮಾಲ್‍ಗೇಮ್‌ನಲ್ಲಿ ಚಿಪ್ಸ್‌ ಪ್ಯಾಕೆಟ್‌ ಸಂಗ್ರಹಿಸಿದ ಪುಟ್ಟ ಹುಡುಗಿಯ ಬುದ್ಧಿವಂತಿಕೆ ನೋಡಿ!

Viral Video: ಚಿಪ್ಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ….? ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇದನ್ನು ತಿನ್ನಲು ಬಯಸುತ್ತಾರೆ. ಮಕ್ಕಳಿಗಂತೂ ಇದು ಪಂಚಪ್ರಾಣ. ಮಾಲ್‌‌ವೊಂದರಲ್ಲಿ ಚಿಪ್ಸ್ ಪ್ಯಾಕೆಟ್ ಅನ್ನು ಸಂಗ್ರಹಿಸುವ ಗೇಮ್ ಅನ್ನು ಮಕ್ಕಳಿಗಾಗಿ ಮಾಡಿದ್ದರು. ಈ ಆಟದಲ್ಲಿ, ಮಕ್ಕಳನ್ನು ಹಗ್ಗದಿಂದ ಕಟ್ಟಿ ಚಿಪ್ಸ್ ಪ್ಯಾಕೆಟ್‌ಗಳ ರಾಶಿಯಲ್ಲಿ ತೂಗುಹಾಕಲಾಗುತ್ತದೆ ಮತ್ತು ಆಗ ಅವರು ತಮ್ಮ ಕೈಲಾದಷ್ಟು ಪ್ಯಾಕೆಟ್‌ಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ. ಒಬ್ಬ ಹುಡುಗಿ ಈ ಆಟವನ್ನು ಆಡುವಾಗ ಭಾರೀ ಬುದ್ದಿವಂತಿಕೆ ಉಪಯೋಗಿಸಿ ಚಿಪ್ಸ್ ಪ್ಯಾಕೆಟ್‌ಗಳನ್ನು ಸಂಗ್ರಹಿಸಿದ್ದಾಳೆ.ಈ ವಿಡಿಯೊ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಸಾಮಾನ್ಯವಾಗಿ ಹೆಚ್ಚಿನ ಮಾಲ್‍ಗಳಲ್ಲಿ ಮಕ್ಕಳಿಗಾಗಿ ಒಂದು ವಿಭಾಗವನ್ನು ನಿರ್ಮಿಸಲಾಗಿರುತ್ತದೆ. ಅಲ್ಲಿ ಮಕ್ಕಳಿಗೆ ಮನೋರಂಜನೆ ನೀಡಲು ಅನೇಕ ರೀತಿಯ ಆಟಗಳಿರುತ್ತದೆ. ತಮ್ಮ ಹೆತ್ತವರ ಜೊತೆ ಮಾಲ್‍ಗಳಿಗೆ ಬರುವ ಮಕ್ಕಳು ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಅಂತಹ ಮಕ್ಕಳು ಈ ಮಾಲ್‍ಗಳಲ್ಲಿ ಮಕ್ಕಳಿಗಾಗಿ ಇರುವ ವಿಭಾಗಕ್ಕೆ ಹೋಗಿ ಆಟಗಳನ್ನು ಆಡಬಹುದು. ಇದು ಅವರಿಗೆ ಉಲ್ಲಾಸವನ್ನು ನೀಡುತ್ತದೆ. ಇತ್ತೀಚೆಗೆ, ಮಾಲ್‍ವೊಂದರಲ್ಲಿ ಅಂತಹ ಒಂದು ಆಟವನ್ನು ಆಡುವ ವಿಡಿಯೊ ವೈರಲ್ (Viral Video)ಆಗಿತ್ತು.

ಈ ಆಟದಲ್ಲಿ, ಮಕ್ಕಳನ್ನು ಹಗ್ಗದಿಂದ ಕಟ್ಟಿ ಚಿಪ್ಸ್ ಪ್ಯಾಕೆಟ್‍ಗಳ ರಾಶಿಯಲ್ಲಿ ತೂಗುಹಾಕಲಾಗುತ್ತದೆ ಮತ್ತು ಆಗ ಅವರು ತಮ್ಮ ಕೈಲಾದಷ್ಟು ಪ್ಯಾಕೆಟ್‍ಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ. ಒಬ್ಬ ಹುಡುಗಿ ಈ ಆಟವನ್ನು ಆಡುವಾಗ ಬಾರೀ ಬುದ್ದಿವಂತಿಕೆ ಉಪಯೋಗಿಸಿ ಚಿಪ್ಸ್ ಪ್ಯಾಕೆಟ್‍ಗಳನ್ನು ಸಂಗ್ರಹಿಸಿದ್ದಾಳೆ.

ಮಕ್ಕಳಿಗಾಗಿ ವಿವಿಧ ಆಟಗಳನ್ನು ಹೊಂದಿರುವ ಮಾಲ್‍ಗಳಲ್ಲಿರುವ ಗೇಮಿಂಗ್ ವಿಭಾಗವನ್ನು ತೋರಿಸುವ @mix_dazzleನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಚಿಪ್ಸ್ ರಾಶಿಯೊಂದಿಗೆ ಒಂದು ಸ್ಟಾಲ್ ಇದೆ. ಈ ರಾಶಿಯಿಂದ, ಮಕ್ಕಳನ್ನು ಹಗ್ಗದಿಂದ ನೇತುಹಾಕಲಾಗುತ್ತದೆ ಮತ್ತು ಅವರಿಗೆ ಒಮ್ಮೆಗೆ ಬೇಕಾದಷ್ಟು ಪ್ಯಾಕೆಟ್‍ಗಳನ್ನು ತೆಗೆದುಕೊಳ್ಳಲು ಹೇಳಲಾಗುತ್ತದೆ. ನಂತರ ಅವರನ್ನು ಹಗ್ಗದ ಮೂಲಕ ಹಿಂದಕ್ಕೆ ಎಳೆಯಲಾಗುತ್ತದೆ. ಈ ಸಮಯದಲ್ಲಿ, ಮಕ್ಕಳು ಎಷ್ಟು ಪ್ಯಾಕೆಟ್‍ಗಳನ್ನು ಸಂಗ್ರಹಿಸಿರುತ್ತಾರೆ ಅದನ್ನು ಅವರಿಗೆ ನೀಡಲಾಗುತ್ತದೆ.

ಈ ವಿಡಿಯೊದಲ್ಲಿ, ಪುಟ್ಟ ಹುಡುಗಿಯೊಬ್ಬಳು ಈ ಆಟ ಆಡಿದ್ದಾಳೆ. ಆ ಹುಡುಗಿಯನ್ನು ಹಗ್ಗದಿಂದ ನೇತುಹಾಕಿ ಚಿಪ್ಸ್ ರಾಶಿಯಲ್ಲಿ ಇರಿಸಲಾಯಿತು. ನಂತರ ಹುಡುಗಿಗೆ ಸುಮಾರು 5 ರಿಂದ 10 ಸೆಕೆಂಡುಗಳನ್ನು ನೀಡಲಾಯಿತು. ಈ ಸಮಯದಲ್ಲಿ, ಅವಳು ತನ್ನ ಬುದ್ಧಿವಂತಿಕೆ ಬಳಸಿ ಸಾಧ್ಯವಾದಷ್ಟು ಚಿಪ್ಸ್ ಪ್ಯಾಕೆಟ್ ಸಂಗ್ರಹಿಸುವ ಪ್ಲ್ಯಾನ್ ಮಾಡಿ ತನ್ನ ಎರಡೂ ಕೈಗಳ ಜೊತೆಗೆ ತನ್ನ ತೋಳುಗಳ ನಡುವೆ ಪ್ಯಾಕೆಟ್‍ಗಳನ್ನು ಸಂಗ್ರಹಿಸಿದಲ್ಲದೇ ತನ್ನ ಕಾಲುಗಳನ್ನು ಒಟ್ಟಿಗೆ ಸೇರಿಸಿಕೊಂಡು ಅದರಲ್ಲಿ ಕೂಡ ಹಲವು ಪ್ಯಾಕೆಟ್‍ಗಳನ್ನು ಸಂಗ್ರಹಿಸಿದ್ದಾಳೆ. ಈ ರೀತಿಯಾಗಿ, ಅವಳು ಸಾಧ್ಯವಾದಷ್ಟು ಚಿಪ್ಸ್ ಪ್ಯಾಕೆಟ್‍ಗಳನ್ನು ಸಂಗ್ರಹಿಸಿದಳು. ನಂತರ ಅವಳು ಅದರಿಂದ ಹೊರಬಂದ ನಂತರ, ಪ್ಯಾಕೆಟ್‍ಗಳನ್ನು ನೆಲದ ಮೇಲೆ ಹಾಕಿದ್ದಾಳೆ. ಅವಳು ಸಂಗ್ರಹಿಸಿದ ಚಿಪ್ಸ್ ಪ್ಯಾಕೆಟ್‍ಗಳನ್ನು ನೋಡಿದರೆ ಒಂದು ಮಗು ಇಷ್ಟು ಪ್ಯಾಕೆಟ್‍ಗಳನ್ನು ತೆಗೆದುಕೊಳ್ಳಬಹುದು ಎಂದು ಅಂಗಡಿಯವರು ಊಹಿಸಲು ಸಾಧ್ಯವಿಲ್ಲ.

ಇದನ್ನೂ ಓದಿ:ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

ಈ ವಿಡಿಯೊವನ್ನು 47 ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು ಅನೇಕ ಜನರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಗಳಲ್ಲಿ ಹಂಚಿಕೊಂಡಿದ್ದಾರೆ. ಒಬ್ಬರು ಕಷ್ಟಪಟ್ಟು ಕೆಲಸ ಮಾಡಲು ಇಷ್ಟವಿಲ್ಲದವರು ಬುದ್ಧಿವಂತರಾಗಿರಬೇಕು ಎಂದು ಹೇಳಿದರು. ಈ ಹುಡುಗಿ ತುಂಬಾ ಸ್ಮಾರ್ಟ್ ಆಗಿ ಕಾಣುತ್ತಾಳೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಈ ಪೀಳಿಗೆಯ ಮಕ್ಕಳು ತುಂಬಾ ಬುದ್ಧಿವಂತರು ಎಂದು ಒಬ್ಬರು ಹೇಳಿದರೆ, ಮಗುವಿನ ಪೋಷಕರು ಮಗಳ ಬುದ್ಧಿವಂತಿಕೆ ಕಂಡು ತುಂಬಾ ಹೆಮ್ಮೆಪಡುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

International Cat Day: ಇಂದು ಬೆಕ್ಕಿನ ದಿನ; ಇದರ ಆಯುಷ್ಯ, ನಿದ್ದೆ, ಶೃಂಗಾರ ಇತ್ಯಾದಿ ಸಂಗತಿಗಳು ಕುತೂಹಲಕರ!

International Cat Day: ನಿರ್ಭೀತ ಮತ್ತು ಸ್ನೇಹ ಮನೋಭಾವದಿಂದ ಮನೆಯಲ್ಲಿ ಎಲ್ಲರನ್ನೂ ಆಕರ್ಷಿಸುವ ಬೆಕ್ಕುಗಳ ಕುರಿತ ಹಲವು ಸಂಗತಿಗಳು ಕುತೂಹಲಕರ. ಮಾನವನ ಬದುಕಿನಲ್ಲಿ ಬೆಕ್ಕುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಸ್ನೇಹಿತನಂತೆ ಒಲವು ತೋರುವ ಬೆಕ್ಕುಗಳು ಬೇಗನೆ ಹೊಂದಿಕೊಂಡು, ಮಾನವನ ಭಾಷೆಯನ್ನು ಅರ್ಥೈಸಿಕೊಳ್ಳುತ್ತವೆ. ಇಂದು ಅಂತಾರಾಷ್ಟ್ರೀಯ ಬೆಕ್ಕು ದಿನಾಚರಣೆ (International Cat Day). ಈ ವಿಶೇಷ ಸಂದರ್ಭದಲ್ಲಿ ಬೆಕ್ಕುಗಳ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

VISTARANEWS.COM


on

By

International Cat Day
Koo

ನಾವು ಸಾಕುವ ಮುದ್ದಿನ ಪ್ರಾಣಿಗಳಲ್ಲಿ ಬೆಕ್ಕು (cat) ಕೂಡ ಒಂದಾಗಿದೆ. ವಿಶ್ವದಾದ್ಯಂತ ಇಂದು ಬೆಕ್ಕಿನ ದಿನವನ್ನು (International Cat Day) ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ 8ರಂದು ಆಚರಿಸಲಾಗುವ ಈ ದಿನದಂದು ಮಾನವನ ಅತ್ಯಂತ ಹಳೆಯ ಮತ್ತು ಪ್ರೀತಿಯ ಪ್ರಾಣಿ ಸಹಚರರಲ್ಲಿ ಒಂದಾದ ಬೆಕ್ಕನ್ನು ಗೌರವಿಸಲಾಗುತ್ತದೆ.

ಮಾನವನ ಬದುಕಿನಲ್ಲಿ ಬೆಕ್ಕುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಸ್ನೇಹಿತನಂತೆ ಒಲವು ತೋರುವ ಬೆಕ್ಕುಗಳು ಕೂಡ ಬೇಗನೆ ಹೊಂದಿಕೊಂಡು, ಮಾನವನ ಭಾಷೆಯನ್ನು ಅರ್ಥೈಸಿಕೊಳ್ಳುತ್ತವೆ. ಪ್ರಾಚೀನ ಈಜಿಪ್ಟ್‌ನಲ್ಲಿ ಬೆಕ್ಕುಗಳನ್ನು ದೈವಿಕ ಜೀವಿಯಾಗಿ ಪೂಜಿಸಲಾಗುತ್ತಿತ್ತು. ಅವುಗಳು ತಮ್ಮ ಸ್ವಾತಂತ್ರ್ಯ, ಕುತೂಹಲ ಮತ್ತು ನಿರ್ಭೀತ ಮನೋಭಾವದಿಂದ ಎಲ್ಲರನ್ನೂ ಆಕರ್ಷಿಸುತ್ತವೆ. ಅವುಗಳ ಸೊಗಸಾದ ದೈಹಿಕ ಲಕ್ಷಣಗಳು ಮತ್ತು ಸಣ್ಣಪುಟ್ಟ ಗಾಯ, ಆರೋಗ್ಯ ಸಮಸ್ಯೆಗಳನ್ನು ಸ್ವಯಂ ಗುಣಪಡಿಸುವ ಸಾಮರ್ಥ್ಯವು ಅವುಗಳನ್ನು ವಿಶೇಷವನ್ನಾಗಿ ಮಾಡಿವೆ.

ಅಂತಾರಾಷ್ಟ್ರೀಯ ಬೆಕ್ಕು ದಿನಾಚರಣೆಯ ಈ ಸಂದರ್ಭದಲ್ಲಿ ಬೆಕ್ಕುಗಳ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ.


ಬೆಕ್ಕುಗಳ ವಯಸ್ಸು ಎಷ್ಟು?

ಸಾಮಾನ್ಯವಾಗಿ ಬೆಕ್ಕುಗಳು ಮಾನವನ ವಯಸ್ಸಿಗೆ ಹೋಲಿಸಿದರೆ 116 ವರ್ಷಗಳ ಕಾಲ ಬದುಕುತ್ತವೆ. ಅವುಗಳ ಜೀವನವು ಆರು ಹಂತಗಳನ್ನು ಹೊಂದಿರುತ್ತದೆ. ಅದರಲ್ಲಿ ಆರು ತಿಂಗಳವರೆಗೆ ಅದು ಮಗುವಾಗಿರುತ್ತದೆ. ಬಳಿಕ 7 ತಿಂಗಳಿನಿಂದ 2 ವರ್ಷಗಳವರೆಗೆ ಜೂನಿಯರ್, 3ರಿಂದ 6 ವರ್ಷಗಳವರೆಗೆ ವಯಸ್ಕ, 7 ರಿಂದ 10 ವರ್ಷಗಳವರೆಗೆ ಪ್ರಬುದ್ಧ, 11ರಿಂದ 14 ವರ್ಷಗಳವರೆಗೆ ಹಿರಿಯ, 15 ರಿಂದ 25 ವರ್ಷಗಳವರೆಗೆ ಬಹು ಹಿರಿಯ ವಯಸ್ಕ ಆಗಿರುತ್ತದೆ.


ವಿಶೇಷ ಸಾಮರ್ಥ್ಯ

ಬೆಕ್ಕುಗಳು ಹೆಚ್ಚು ಪ್ರಭಾವಶಾಲಿ ಕಿವಿಗಳ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ತಮ್ಮ ಕಿವಿಗಳನ್ನು 180 ಡಿಗ್ರಿಗಳಷ್ಟು ತಿರುಗಿಸಬಲ್ಲವು! ಪ್ರತಿ ಕಿವಿಯಲ್ಲಿ 32 ಸ್ನಾಯುಗಳಿವೆ. ಮಾನವನಲ್ಲಿ ಕೇವಲ ಆರು ಕಿವಿ ಸ್ನಾಯುಗಳಿವೆ. ಅವುಗಳು ಮನುಷ್ಯರಂತೆ ಶಬ್ದಗಳ ಮೂಲವನ್ನು ನಿಖರವಾಗಿ ಗುರುತಿಸುತ್ತವೆ.

ಅತ್ಯುತ್ತಮ ದೃಷ್ಟಿಯ ಹೊರತಾಗಿ ಬೆಕ್ಕುಗಳು ಉತ್ತಮ ಗ್ರಹಿಕಾ ಸಾಮರ್ಥ್ಯ ಹೊಂದಿರುತ್ತವೆ. ಬೇಟೆಯು ಸಮೀಪಿಸಿದಾಗ ಅವುಗಳ ವಾಸನೆಯ ಪ್ರಜ್ಞೆ ಜಾಗೃತವಾಗುತ್ತದೆ. ಅವುಗಳ ವಾಸನೆಯ ಅಸಾಧಾರಣ ಪ್ರಜ್ಞೆಯಿಂದ 200 ವಿಭಿನ್ನ ಪರಿಮಳಗಳನ್ನು ನೆನಪಿಸಿಕೊಳ್ಳುತ್ತವೆ.


ಬೆಕ್ಕುಗಳು ಕಾಲ್ಬೆರಳುಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುತ್ತವೆ. ಕೆಲವು ಹೆಚ್ಚುವರಿ ಕಾಲ್ಬೆರಳುಗಳನ್ನು ಹೊಂದಿರುತ್ತವೆ. ಒಂದು ಬೆಕ್ಕಿನ ಮೇಲೆ ಅತಿ ಹೆಚ್ಚು ಕಾಲ್ಬೆರಳುಗಳ ದಾಖಲೆ 32 ಆಗಿದೆ.

ದಿನಚರಿ ಏನು?

ಸಾಕು ಬೆಕ್ಕುಗಳು ತಮ್ಮ ದಿನದಲ್ಲಿ ಶೇ. 70ರಷ್ಟು ಸಮಯವನ್ನು ನಿದ್ದೆಯಲ್ಲಿ ಕಳೆಯುತ್ತವೆ. ಶೇ. 15ರಷ್ಟು ಸಮಯವನ್ನು ಶೃಂಗಾರದಲ್ಲಿ ಕಳೆಯುತ್ತವೆ. ಮನೆಯಲ್ಲಿ ಬೇಟೆಯಾಡದೇ ಇದ್ದರೂ ಬೇಟೆಗಾಗಿ ತಮ್ಮನ್ನು ತಾವು ಸಜ್ಜುಗೊಳಿಸುತ್ತವೆ ಮತ್ತು ಶಕ್ತಿಯನ್ನು ಉಳಿಸುತ್ತದೆ. ವಯಸ್ಕ ಬೆಕ್ಕುಗಳು ದಿನಕ್ಕೆ 16- 20 ಗಂಟೆಗಳ ಕಾಲ ನಿದ್ರಿಸುತ್ತವೆ. ವಯಸ್ಸಾದ ಬೆಕ್ಕುಗಳು ಸುಮಾರು 24 ಗಂಟೆಗಳ ಕಾಲ ಮಲಗುವುದೂ ಉಂಟು!


ತಳಿಗಳು

ಬೆಕ್ಕುಗಳಲ್ಲಿ ಸೈಬೀರಿಯನ್, ರಾಗ್ಡಾಲ್, ಮೈನೆ ಕೂನ್ ಮತ್ತು ಬ್ರಿಟಿಷ್ ಶೋರ್ಥೈರ್‌ನಂತಹ ಪ್ರಮುಖ ತಳಿಗಳಿವೆ. ದೊಡ್ಡ ಗಂಡು ಬೆಕ್ಕುಗಳು ಸುಮಾರು 20 ಪೌಂಡ್ ತೂಗುತ್ತವೆ. ಈ ತಳಿಗಳು ತಮ್ಮ ದೊಡ್ಡ ಗಾತ್ರ ಮತ್ತು ಸ್ನೇಹಪರ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದೆ.


ಸಂವಹನ ಹೇಗೆ?

ಮಿಯಾಂವ್ ಎನ್ನುವುದು ಬೆಕ್ಕುಗಳಿಗೆ ಸಹಜ ಭಾಷೆಯಲ್ಲ. ಅವು ಮನುಷ್ಯರೊಂದಿಗೆ ಸಂವಹನ ನಡೆಸಲು ಇದನ್ನು ಅಭಿವೃದ್ಧಿಪಡಿಸಲಾಯಿತು. ಕಾಡಿನಲ್ಲಿ ವಯಸ್ಕ ಬೆಕ್ಕುಗಳು ವಾಸನೆ, ಮುಖದ ಅಭಿವ್ಯಕ್ತಿ, ದೇಹ ಭಾಷೆ ಮತ್ತು ಸ್ಪರ್ಶದಂತಹ ವಿವಿಧ ಮೌಖಿಕ ಸೂಚನೆಗಳೊಂದಿಗೆ ಸಂವಹನ ನಡೆಸುತ್ತವೆ. ಆದರೆ ಸಾಕು ಬೆಕ್ಕುಗಳು ತಮ್ಮ ಅಗತ್ಯಗಳನ್ನು ಮನುಷ್ಯರಿಗೆ ತಿಳಿಸಲು ಮಿಯಾಂವ್ ಶಬ್ದದ ಬಳಕೆ ಮಾಡುತ್ತವೆ.


ನಂಬಿಕೆ

ಅನೇಕ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಬಿಳಿ ಬೆಕ್ಕುಗಳು ಶುದ್ಧತೆ ಮತ್ತು ಸಂತೋಷವನ್ನು ಸಂಕೇತಿಸುತ್ತವೆ. ಬಿಳಿ ಬೆಕ್ಕಿನ ಕನಸು ಬಿದ್ದರೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗುತ್ತದೆ.

ಇದನ್ನೂ ಓದಿ:International Tiger Day 2024: 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ. 95ರಷ್ಟು ಕುಸಿತ!

ಇದರ ಬಳಕೆ ಹೇಗೆ?

ಬೆಕ್ಕುಗಳನ್ನು ಸಂಚಾರ ಮತ್ತು ಸಂವಹನಕ್ಕೆ ಮಾರ್ಗದರ್ಶಿಯಾಗಿ ಬಳಸಲಾಗುತ್ತದೆ. ವಿಶೇಷ ಕೂದಲುಗಳಿರುವ ಬೆಕ್ಕುಗಳು ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಸಂದೇಶಗಳನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಬೆಕ್ಕಿನ ಮೀಸೆಯನ್ನು ಮುಂದಕ್ಕೆ ತೋರಿಸಿದಾಗ ಅದು ಆತ್ಮವಿಶ್ವಾಸ ಮತ್ತು ನಿರಾಳತೆಯ ಭಾವನೆಯನ್ನು ಸೂಚಿಸುತ್ತದೆ. ವ್ಯತಿರಿಕ್ತವಾಗಿ, ಅವುಗಳನ್ನು ಹಿಂದಕ್ಕೆ ಎಳೆದರೆ ಅದು ಹೆದರಿಕೆ ಅಥವಾ ಬೆದರಿಕೆಯನ್ನು ಅನುಭವಿಸುತ್ತಿದೆ ಎಂಬುದು ಅರ್ಥ.

ಬೆಕ್ಕುಗಳ ಗುಂಪನ್ನು “ಕ್ಲೋಡರ್” ಎಂದು ಕರೆಯಲಾಗುತ್ತದೆ ಮತ್ತು ಗಂಡು ಬೆಕ್ಕನ್ನು ಸಾಮಾನ್ಯವಾಗಿ “ಟಾಮ್” ಎಂದು ಕರೆಯಲಾಗುತ್ತದೆ. ಆದರೆ ಹೆಣ್ಣು ಬೆಕ್ಕನ್ನು ಸಾಮಾನ್ಯವಾಗಿ ʼರಾಣಿʼ ಎಂದು ಕರೆಯಲಾಗುತ್ತದೆ.

Continue Reading

Latest

Divorce Case: ಪ್ರತಿ ಬಾರಿ ʼಸರಸʼ ಆಡಿದಾಗಲೂ ಕಾಸು ಕೊಡಲೇಬೇಕು! ಹೆಂಡತಿಯ ಡಿಮ್ಯಾಂಡ್‌ ಕೇಳಿ ಡಿವೋರ್ಸ್‌ ಪಡೆದ ಗಂಡ!

Divorce Case: ತೈವಾನ್‌ನಲ್ಲಿ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬರುವ ತನ್ನ ಪತಿಯ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆಕೆ ಪ್ರತಿಬಾರಿ ಇದೇ ರೀತಿ ಮಾಡುತ್ತಿದ್ದರಿಂದ ನೊಂದ ಪತಿ ಆಕೆಗೆ ವಿಚ್ಛೇದನ ನೀಡಿದ್ದಾನೆ. ಪತಿ ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸಿದಾಗ ಪತ್ನಿ 1,260 ರೂ. ನೀಡುವಂತೆ ಬೇಡಿಕೆ ಇಡುತ್ತಿದ್ದಳು. ಅಲ್ಲದೇ ಪತ್ನಿ ತನ್ನ ಸಂಬಂಧಿಕರ ಬಳಿ “”ನನ್ನ ಪತಿ ತುಂಬಾ ದಪ್ಪ ಇದ್ದಾನೆ. ಹಾಗಾಗಿ ಆತ ಲೈಂಗಿಕ ತೃಪ್ತಿ ನೀಡಲು ಅಸಮರ್ಥನಾಗಿದ್ದಾನೆʼʼ ಎಂದು ಹೇಳುವ ಮೂಲಕ ಅವನನ್ನು ಅವಮಾನಿಸುತ್ತಿದ್ದಳಂತೆ. ಇದರಿಂದ ಬೇಸತ್ತ ಗಂಡನ ಕತೆ ಇಲ್ಲಿದೆ.

VISTARANEWS.COM


on

Divorce Case
Koo


ದಂಪತಿ ನಡುವೆ ಪ್ರೀತಿ, ಪ್ರಣಯ ಇರುವುದು ಸಹಜ. ಆದರೆ ಲೈಂಗಿಕ ಸುಖ ನೀಡಲು ಹೆಂಡತಿ ಯಾವತ್ತಾದರೂ ಗಂಡನಲ್ಲಿ ಹಣ ಕೇಳುತ್ತಾಳೆಯೇ? ಹಾಗೇ ಮಾಡಿದರೆ ಪತ್ನಿಗೂ ಲೈಂಗಿಕ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬರುವ ತನ್ನ ಪತಿಯ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆಕೆ ಪ್ರತಿಬಾರಿ ಇದೇ ರೀತಿ ಮಾಡುತ್ತಿದ್ದರಿಂದ ನೊಂದ ಪತಿ ಆಕೆಗೆ ವಿಚ್ಛೇದನ (Divorce Case) ನೀಡಿದ ಘಟನೆ ತೈವಾನ್‍ನಲ್ಲಿ ನಡೆದಿದೆ.

2014ರಲ್ಲಿ ವಿವಾಹವಾದ ಈ ದಂಪತಿಯ ನಡುವೆ ಆರಂಭದಲ್ಲಿ ಸಾಮರಸ್ಯದ ಸಂಬಂಧವಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ, 2017ರಲ್ಲಿ ಪತ್ನಿ ತಿಂಗಳಿಗೊಮ್ಮೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದಾಗ ಅವರ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯಿತು. ಅಲ್ಲದೇ ಪತ್ನಿ ತನ್ನ ಸಂಬಂಧಿಕರ ಬಳಿ ತನ್ನ ಪತಿ ತುಂಬಾ ದಪ್ಪ ಇದ್ದಾನೆ. ಹಾಗಾಗಿ ಆತ ಲೈಂಗಿಕ ತೃಪ್ತಿ ನೀಡಲು ಅಸಮರ್ಥನಾಗಿದ್ದಾನೆ ಎಂದು ಹೇಳುವ ಮೂಲಕ ಅವನನ್ನು ಅವಮಾನಿಸುತ್ತಿದ್ದಳು. ಈ ವಿಚಾರ ತಿಳಿದ ಪತಿ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿ 2021ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಪತ್ನಿ ತನ್ನ ತಪ್ಪನ್ನು ಒಪ್ಪಿಕೊಂಡು ಸುಧಾರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾಳೆ. ಆಗ ಕೇಸ್ ವಾಪಸ್ ಪಡೆಯುವಂತೆ ಮನವೊಲಿಸಿದ್ದಾಳೆ.

ಅವಳ ಭರವಸೆಗಳನ್ನು ನಂಬಿ, ನಂತರ ಪತಿ ತಮ್ಮ ಆಸ್ತಿಯನ್ನು ಅವಳ ಹೆಸರಿಗೆ ನೋಂದಾಯಿಸಿದ್ದಾನೆ. ಇಷ್ಟಾದರೂ ಆಕೆ ಅವನನ್ನು ಭಾವನಾತ್ಮಕವಾಗಿ ನಿಂದನೆ ಮಾಡುವುದನ್ನು ಮುಂದುವರಿಸಿದ್ದಾಳೆ. ಅಲ್ಲದೇ ಪತಿ ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸಿದಾಗ ಪತ್ನಿ ಹಣ (ಭಾರತೀಯ ಮೌಲ್ಯದಲ್ಲಿ 1,260 ರೂ.) ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹಾಗಾಗಿ ಈ ವರ್ಷ ಆತ ಮತ್ತೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಸರಿಪಡಿಸಲು ಸಾಧ್ಯವಿಲ್ಲ ಎಂದು ಅರಿತ ನ್ಯಾಯಾಲಯ ಇವರಿಗೆ ವಿಚ್ಛೇದನ ನೀಡಿದೆ. ಆದರೆ ಹೈಕೋರ್ಟ್‌ಗೆ ಪತ್ನಿ ಮನವಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅದನ್ನು ತಿರಸ್ಕರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

ಇಂಥ ಪ್ರಕರಣವು ತೈವಾನ್‍ನಲ್ಲಿ ಇದೇ ಮೊದಲಲ್ಲ. ಈ ಹಿಂದೆ ಇದೇ ರೀತಿಯ ಘಟನೆ ದಾಖಲಾಗಿದೆ. 2014ರಲ್ಲಿ ಇನ್ನೊಬ್ಬ ತೈವಾನ್ ಮಹಿಳೆ ತನ್ನ ಪತಿಗೆ ಲೈಂಗಿಕತೆಗಾಗಿ ಮತ್ತು ಊಟಕ್ಕಾಗಿ 5,000 ರೂ. ಶುಲ್ಕ ವಿಧಿಸಿದ್ದಳು. ಈ ವಿವಾದವು ಪೊಲೀಸ್ ಠಾಣೆಯಲ್ಲಿ ಇತ್ಯರ್ಥವಾಗಿತ್ತು. ಅಲ್ಲಿ ಪತಿ ತನ್ನ ಕುಟುಂಬಕ್ಕೆ ತಿಂಗಳಿಗೆ 50,000 ರೂ. ನೀಡಲು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ತೈವಾನ್‍ನಲ್ಲಿ ವಿಚ್ಛೇದನ ಪ್ರಮಾಣವು ಕಳೆದ ವರ್ಷ ಶೇಕಡಾ 0.218 ರಷ್ಟಿತ್ತು ಎನ್ನಲಾಗಿದೆ.

Continue Reading

Latest

Murder Case: ಒಂದೇ ಹುಡುಗಿಯನ್ನು ಪ್ರೀತಿಸಿದ ಸಹೋದರರು; ಈ ತ್ರಿಕೋನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ!

Murder Case: ಸೋದರ ಸಂಬಂಧಿಗಳಾದ ವಿನೋದ್ ಮತ್ತು ಮನೀಶ್ ಒಂದೇ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ವಿನೋದ್ ಐದು ವರ್ಷಗಳಿಂದ ಅವಳೊಂದಿಗೆ ಸಂಬಂಧ ಹೊಂದಿದ್ದ. ಅವರ ಸಂಬಂಧವು ಮದುವೆಯ ಹಂತಕ್ಕೆ ತಲುಪಿತ್ತು. ಆದರೆ, ತಾನು ಪ್ರೀತಿಸುತ್ತಿದ್ದ ಹುಡುಗಿ ಮೇಲೆ ಅನುಮಾನಗೊಂಡಿದ್ದ ವಿನೋದ್ ಅವಳ ಮೊಬೈಲ್ ಚೆಕ್ ಮಾಡಿದಾಗ ಆಕೆಗೆ ತನ್ನ ಸಹೋದರ ಸಂಬಂಧಿ ಮನೀಶ್‍ನೊಂದಿಗೆ ಸಂಬಂಧವಿದೆ ಎಂಬುದು ತಿಳಿದು ಬಂದಿದೆ. ಆಗ ಕೋಪ ಮತ್ತು ಅಸೂಯೆಯಿಂದ ವಿನೋದ್ ಸೇಡು ತೀರಿಸಿಕೊಳ್ಳುವ ನಿರ್ಧಾರ ಮಾಡಿದ. ಮುಂದೇನಾಯ್ತು? ಈ ಸುದ್ದಿ ಓದಿ.

VISTARANEWS.COM


on

Murder Case
Koo


ಪ್ರೀತಿಯ ವಿಚಾರದಲ್ಲಿ ಮೋಸ, ಕೊಲೆ ಪ್ರಕರಣಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಜಾರ್ಖಂಡ್‍ನಲ್ಲಿ ತ್ರಿಕೋನ ಪ್ರೇಮ ಕಥೆಯೊಂದು ದುರಂತವಾಗಿ ಅಂತ್ಯ ಕಂಡಿದೆ. ಜಾರ್ಖಂಡ್‍ನ ಗೋಮಿಯಾದಲ್ಲಿ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ಪ್ರೀತಿಸಿದ ನಂತರ ಈ ತ್ರಿಕೋನ ಪ್ರೇಮ ಕಥೆ ತಿರುವು ಪಡೆದು ಕೊಲೆಗೆ (Murder Case)ಕಾರಣವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಪ್ರಣಯ ಮತ್ತು ದ್ರೋಹದ ಈ ದುರಂತ ಪ್ರೇಮಕಥೆಯಿಂದ ಅವರ ಕುಟುಂಬ ದುಃಖಕ್ಕೀಡಾಗಿದೆ.

ಕತಾರಾ ಒಪಿ ಪ್ರದೇಶದ ಜಿರ್ಕಿ ಎಂಬ ಸಣ್ಣ ಹಳ್ಳಿಯಲ್ಲಿ, ಸೋದರ ಸಂಬಂಧಿಗಳಾದ ವಿನೋದ್ ಮತ್ತು ಮನೀಶ್ ಒಂದೇ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ವಿನೋದ್ ಐದು ವರ್ಷಗಳಿಂದ ಅವಳೊಂದಿಗೆ ಸಂಬಂಧ ಹೊಂದಿದ್ದ. ಅವರ ಸಂಬಂಧವು ಮದುವೆಯ ಹಂತಕ್ಕೆ ತಲುಪಿತ್ತು. ಆದರೆ, ತಾನು ಪ್ರೀತಿಸುತ್ತಿದ್ದ ಹುಡುಗಿ ಮೇಲೆ ಅನುಮಾನಗೊಂಡಿದ್ದ ವಿನೋದ್ ಅವಳ ಮೊಬೈಲ್ ಚೆಕ್ ಮಾಡಿದಾಗ ಆಕೆಗೆ ತನ್ನ ಸಹೋದರ ಸಂಬಂಧಿ ಮನೀಶ್‍ನೊಂದಿಗೆ ಸಂಬಂಧವಿದೆ ಎಂಬುದು ತಿಳಿದು ಬಂದಿದೆ. ಆಗ ಕೋಪ ಮತ್ತು ಅಸೂಯೆಯಿಂದ ವಿನೋದ್ ಸೇಡು ತೀರಿಸಿಕೊಳ್ಳುವ ನಿರ್ಧಾರ ಮಾಡಿದ.

ಪೊಲೀಸರ ಪ್ರಕಾರ, ಅವನು ಗೋಮಿಯಾದಲ್ಲಿ ಕಮ್ಮಾರನನ್ನು ಭೇಟಿ ಮಾಡಿ ಹರಿತವಾದ ಕೊಡಲಿಯನ್ನು ರೆಡಿ ಮಾಡಿಸಿ ಅದರಿಂದ ತನ್ನ ಸೋದರ ಸಂಬಂಧಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಕೊಲೆ ನಡೆದ ದಿನ ವಿನೋದ್ ತನ್ನ ತಾಯಿಯೊಂದಿಗೆ ಜಿರ್ಕಿಯಲ್ಲಿರುವ ತನ್ನ ಸೋದರ ಮಾವನ ಮನೆಗೆ ಹೋಗಿದ್ದಾನೆ. ಮನೀಶ್ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಕಂಡಿದ್ದಾನೆ. ಈ ಅವಕಾಶವನ್ನು ಬಳಸಿಕೊಂಡ ವಿನೋದ್, ಮನೀಶ್ ಮೇಲೆ ಆಯುಧದಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

ಮನೀಶ್‍ನ ಕ್ರೂರ ಹತ್ಯೆಯು ಕುಟುಂಬ ಮತ್ತು ಹಳ್ಳಿಯಾದ್ಯಂತ ಆಘಾತವನ್ನುಂಟುಮಾಡಿತು. ನಂತರ, ಗ್ರಾಮಸ್ಥರು ಪ್ರತಿಭಟನೆಗಿಳಿಸು ರಸ್ತೆಗಳಲ್ಲಿ ತಡೆಯೊಡ್ಡಿದರು. ಹಾಗೂ ತ್ವರಿತ ಕ್ರಮ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿದ್ದರಿಂದ ಅಲ್ಲಿ ಆಕ್ರೋಶ ಭುಗಿಲೆದ್ದಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತ್ವರಿತವಾಗಿ ತಮ್ಮ ತನಿಖೆಯನ್ನು ತೀವ್ರಗೊಳಿಸಿದರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಆರಂಭದಲ್ಲಿ ಅವರನ್ನು ದಾರಿತಪ್ಪಿಸಲು ಪ್ರಯತ್ನಿಸಿದ ವಿನೋದ್‍ನನ್ನು ವಿಚಾರಣೆ ನಡೆಸಿದರು. ಕೊನೆಗೆ, ಒತ್ತಡದಲ್ಲಿ, ವಿನೋದ್ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡ. ಇದರಿಂದಾಗಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಒಬ್ಬ ಯುವಕ ಜೈಲು ಪಾಲಾಗಿ ಮತ್ತೊಬ್ಬನ್ನು ಕಳೆದುಕೊಂಡ ಕುಟುಂಬ ಈಗ ದುಃಖದಲ್ಲಿ ಮುಳುಗಿದೆ.

Continue Reading

Latest

Viral Video: ಹಿಂದೂ ಹುಡುಗನನ್ನು ಪ್ರೀತಿಸಿದ್ದಕ್ಕೆ ನಡುರಸ್ತೆಯಲ್ಲಿ ಎಲ್ಲರೆದುರೇ ತಂಗಿಯ ಕತ್ತು ಹಿಸುಕಿ ಕೊಂದ ಅಣ್ಣ!

Viral Video: ಹಿಂದೂ ಹುಡುಗನನ್ನು ಪ್ರೀತಿಸಿದಕ್ಕೆ ತನ್ನ 16 ವರ್ಷದ ಸಹೋದರಿಯನ್ನು ಸಹೋದರನೊಬ್ಬ ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರೆ ಕತ್ತು ಹಿಸುಕಿ ಕೊಂದ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನಾಗ್ಲಾ ಶೇಖು ಗ್ರಾಮದಲ್ಲಿ ನಡೆದಿದೆ. ಈ ವಿಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಕೆ ಮೂರು ಬಾರಿ ಮನೆಯಿಂದ ಓಡಿ ಹೋಗಿ ತಂದೆಯ ಮರ್ಯಾದೆ ತೆಗೆದಿದ್ದಾಳೆ ಹಾಗಾಗಿ ಕೊಲೆ ಮಾಡಿದೆ ಎಂದು ಆರೋಪಿ ಹೇಳಿದ್ದಾನೆ. ಹತ್ತಾರು ಮಂದಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೂ ಯಾರೊಬ್ಬರೂ ಈ ಬಾಲಕಿಯ ನೆರವಿಗೆ ಬರಲಿಲ್ಲ.

VISTARANEWS.COM


on

Viral Video
Koo


ಹಿಂದೂ ಹುಡುಗನನ್ನು ಪ್ರೀತಿಸಿದಕ್ಕೆ ತನ್ನ 16 ವರ್ಷದ ಸಹೋದರಿಯನ್ನು ಸಹೋದರನೊಬ್ಬ ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರೆ ಕತ್ತು ಹಿಸುಕಿ ಕೊಂದ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನಾಗ್ಲಾ ಶೇಖು ಗ್ರಾಮದಲ್ಲಿ ಬುಧವಾರ ನಡೆದಿರುವುದಾಗಿ ವರದಿಯಾಗಿದೆ. ಆತ ನಡುರಸ್ತೆಯಲ್ಲಿ ಸಹೋದರಿಯನ್ನು ಕೊಲೆ ಮಾಡುವ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ವರದಿಗಳ ಪ್ರಕಾರ, ಆರೋಪಿಯನ್ನು 20 ವರ್ಷದ ಹಸೀನ್ ಎಂದು ಗುರುತಿಸಲಾಗಿದ್ದು, ಹಸೀನ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಸಹೋದರಿಯ ಕೊಲೆ ಪ್ರಕರಣದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಮುಸ್ಲಿಂ ಕುಟುಂಬಕ್ಕೆ ಸೇರಿದವಳಾಗಿದ್ದು, ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಪೊಲೀಸರ ಮಾಹಿತಿ ಪ್ರಕಾರ, ಹುಡುಗಿ ಇತ್ತೀಚೆಗೆ ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಳು. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಪೊಲೀಸರು ಇಬ್ಬರನ್ನೂ ವಾಪಾಸು ಕರೆಸಿ ಕುಟುಂಬಕ್ಕೆ ಒಪ್ಪಿಸಿದ್ದಾರೆ.

ಸಮಾಜದಲ್ಲಿ ಮರ್ಯಾದೆಗೆ ಹೆದರಿ ಆಕೆ ಓಡಿಹೋದ ವ್ಯಕ್ತಿಯ ವಿರುದ್ಧ ಕುಟುಂಬವು ದೂರು ದಾಖಲಿಸಿಲ್ಲ ಎನ್ನಲಾಗಿದೆ. ಕುಟುಂಬದವರು ಅವಳಿಗೆ ಎಷ್ಟೇ ಬುದ್ಧಿ ಹೇಳಿದರೂ ಆಕೆ ತನ್ನ ಹಿಂದೂ ಗೆಳೆಯನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಹಾಗಾಗಿ ಆಕೆಯ ನಡವಳಿಕೆಯಿಂದ ಬೇಸರಗೊಂಡ ಕುಟುಂಬದವರು ಆಕೆಗೆ ಬೇರೆಯವರೊಂದಿಗೆ ಮದುವೆ ಮಾಡಿಸಲು ವ್ಯವಸ್ಥೆ ಮಾಡಿದರು. ಆದರೆ ಅವಳು ತನ್ನ ಪ್ರೇಮಿಯನ್ನು ಮದುವೆಯಾಗುವ ನಿರ್ಧಾರ ಮಾಡಿ ಬುಧವಾರ, ಅವಳು ಮತ್ತೆ ಅವನೊಂದಿಗೆ ಓಡಿಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಅವಳ ಸಹೋದರ ಅವಳನ್ನು ತಡೆಯಲು ಯತ್ನಿಸಿದ್ದಾನೆ. ಆದರೆ ಅವನ ಮಾತು ಕೇಳದೆ ಆಕೆ ಮನೆಯಿಂದ ಹೊರಗೆ ಓಡಿದ್ದಾಳೆ. ಆದರೆ ಅವಳ ಸಹೋದರ ಅವಳನ್ನು ಬೆನ್ನಟ್ಟಿ ನಡು ರಸ್ತೆಯಲ್ಲಿ ಅವಳಿಗೆ ಹೊಡೆದು ನಂತರ ಜನರ ಸಮ್ಮುಖದಲ್ಲಿ ಅವಳ ಕತ್ತು ಹಿಸುಕಿ ಕೊಂದಿದ್ದಾನೆ.

ಇದನ್ನೂ ಓದಿ: 11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!

ಘಟನೆಯ ವೈರಲ್ ವಿಡಿಯೊದಲ್ಲಿ ಸಂತ್ರಸ್ತೆ ರಸ್ತೆಯಲ್ಲಿ ಮಲಗಿದ್ದರೆ, ಆರೋಪಿ ಅವಳನ್ನು ಕತ್ತು ಹಿಸುಕುತ್ತಿದ್ದಾನೆ. ಜನರು ಸುತ್ತಲೂ ನಿಂತು ಈ ದೃಶ್ಯವನ್ನು ವೀಕ್ಷಿಸುತ್ತಿದ್ದಾರೆ. ಆರೋಪಿಗಳನ್ನು ತಡೆಯಲು ಯಾರೂ ಮುಂದಾಗುವುದಿಲ್ಲ. ಕೆಲವು ಮಕ್ಕಳು ಸಹ ಹತ್ತಿರದಲ್ಲಿ ನಿಂತು, ಆರೋಪಿ ತನ್ನ ಸಹೋದರಿಯನ್ನು ಕತ್ತು ಹಿಸುಕುವುದನ್ನು ನೋಡುತ್ತಿದ್ದಾರೆ. ವಿಡಿಯೊದಲ್ಲಿ, ಆರೋಪಿ, ಈಕೆ ಮೂರು ಬಾರಿ ಮನೆಯಿಂದ ಓಡಿ ಹೋಗಿ ತನ್ನ ತಂದೆಯ ಮರ್ಯಾದೆ ತೆಗೆದಿದ್ದಳೆ. ಅದು ಅವರ ಸಾವಿಗೆ ಕಾರಣವಾಗಬಹುದು ಎಂದು ತಾನು ಹೀಗೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Continue Reading
Advertisement
Shobha Karandlaje
ದೇಶ10 mins ago

Shobha Karandlaje: ತಮಿಳಿಗರಿಗೆ ಅವಮಾನ- ಕ್ಷಮೆಯಾಚಿಸಿದರೆ ಕೇಸ್‌ ರದ್ದು; ಹೈಕೋರ್ಟ್‌ನಲ್ಲಿ ಎಜಿ ಮಾಹಿತಿ

Dog bite
ಬೆಂಗಳೂರು12 mins ago

Dog Bite : ಬೀದಿ ನಾಯಿಗಳ ಕಾಟಕ್ಕೆ ಮನೆ ಮಾರಾಟಕ್ಕೆ ಮುಂದಾದ ಜನ್ರು!

International Cat Day
ಪರಿಸರ27 mins ago

International Cat Day: ಇಂದು ಬೆಕ್ಕಿನ ದಿನ; ಇದರ ಆಯುಷ್ಯ, ನಿದ್ದೆ, ಶೃಂಗಾರ ಇತ್ಯಾದಿ ಸಂಗತಿಗಳು ಕುತೂಹಲಕರ!

Gautam Gambhir
ಕ್ರೀಡೆ39 mins ago

Gautam Gambhir: 27 ವರ್ಷದ ಬಳಿಕ ಲಂಕಾ ವಿರುದ್ಧ ಸೋಲು; ಗಂಭೀರ್​ ಫುಲ್​ ಟ್ರೋಲ್​

rave party telugu actress hema
ಕ್ರೈಂ43 mins ago

Rave Party: ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ 85 ಜನರ ಮೇಲೆ ಚಾರ್ಜ್‌ಶೀಟ್, ಸುಳ್ಳು ಹೇಳಿದ ನಟಿ ಹೇಮಾ ಮೇಲೂ ಚಾರ್ಜ್

Divorce Case
Latest48 mins ago

Divorce Case: ಪ್ರತಿ ಬಾರಿ ʼಸರಸʼ ಆಡಿದಾಗಲೂ ಕಾಸು ಕೊಡಲೇಬೇಕು! ಹೆಂಡತಿಯ ಡಿಮ್ಯಾಂಡ್‌ ಕೇಳಿ ಡಿವೋರ್ಸ್‌ ಪಡೆದ ಗಂಡ!

Maravoor bridge in danger Vehicular traffic suspended
ದಕ್ಷಿಣ ಕನ್ನಡ52 mins ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Naga Chaitanya Sobhita Love Story REVEALED age gap
ಟಾಲಿವುಡ್58 mins ago

Naga Chaitanya: ನಾಗ ಚೈತನ್ಯ- ಶೋಭಿತಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಇಬ್ಬರ ನಡುವಿನ ಏಜ್ ಗ್ಯಾಪ್ ಎಷ್ಟು?

Murder Case
Latest1 hour ago

Murder Case: ಒಂದೇ ಹುಡುಗಿಯನ್ನು ಪ್ರೀತಿಸಿದ ಸಹೋದರರು; ಈ ತ್ರಿಕೋನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ!

vinesh phogat
ದೇಶ1 hour ago

Vinesh Phogat: ವಿನೇಶ್‌ ಪೋಗಟ್‌ ಅನರ್ಹತೆ ಬಗ್ಗೆ ಹಗುರವಾಗಿ ಮಾತ್ನಾಡಿದ್ರಾ ಸುಧಾ ಮೂರ್ತಿ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌