ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ರೀಲ್ಸ್‌ನಿಂದ ಫಾಲೋವರ್ಸ್ ಹೆಚ್ಚಿಸಿಕೊಂಡು ಫೇಮಸ್ ಆಗಲು ಯುವಕ, ಯುವತಿಯರು ಮಾತ್ರವಲ್ಲ ಕಾಲೇಜು ವಿದ್ಯಾರ್ಥಿಗಳು ಕೂಡ ಹಲವು ವಿಧದ ಅಪಾಯಕಾರಿ ರೀಲ್ಸ್ ಮಾಡುತ್ತಿದ್ದಾರೆ. ಆದರೆ ಬೇರೆಯವರನ್ನು ಮೆಚ್ಚಿಸಲು ಹೋಗಿ ಅವರ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ವಿದ್ಯಾರ್ಥಿನಿಯೊಬ್ಬಳು ರೀಲ್ಸ್ ಗಾಗಿ ಸ್ಟಂಟ್ ಮಾಡಲು ಹೋಗಿ ಆಪತ್ತು ತಂದುಕೊಂಡಿದ್ದಾಳೆ. ಈ ವಿಡಿಯೊ ಎಲ್ಲೆಡೆ ವೈರಲ್ (Viral Video) ಆಗಿದೆ.
ಶಾಲಾ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿನಿಯರಿಬ್ಬರು ಸೋಶಿಯಲ್ ಮೀಡಿಯಾದ ರೀಲ್ಸ್ ಗಾಗಿ ರಸ್ತೆಯಲ್ಲಿ ಸ್ಟಂಟ್ ಮಾಡಲು ಹೋಗಿದ್ದಾರೆ. ರೀಲ್ಸ್ ಮತ್ತಷ್ಟು ವೈರಲ್ ಆಗಲಿ ಎಂದು ಅಪಾಯಕಾರಿ ಸ್ಟಂಟ್ ಮಾಡಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿನಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರಕ್ಕೆ ಹಾರಿದ ಹುಡುಗಿ ನೆಲದ ಮೇಲೆ ಇಳಿಯುವಾಗ ಬ್ಯಾಲೆನ್ಸ್ ತಪ್ಪಿ ಕಾಲು ಜಾರಿ ದೊಪ್ಪೆಂದು ಕೆಳಕ್ಕೆ ಬಿದ್ದಿದ್ದಾಳೆ. ಇದರಿಂದ ಅವಳ ಬೆನ್ನುಮೂಳೆ ಮುರಿತಕ್ಕೊಳಗಾಗಿದೆ. ಹಾಗಾಗಿ ಆಕೆಗೆ ಮೇಲೆಳಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ವಿದ್ಯಾರ್ಥಿನಿ ಆಕೆಯನ್ನು ಎತ್ತಿ ನಿಲ್ಲಿಸಲು ಪ್ರಯತ್ನಿಸಿದರೂ ಆಕೆಗೆ ನಿಲ್ಲಲು ಆಗಲಿಲ್ಲ. ಇಂತಹ ಅಪಾಯಕಾರಿ ರೀಲ್ಸ್ ಮಾಡಲು ಹೋಗಿ ಓದಿ ವಿದ್ಯಾವಂತೆ ಆಗಬೇಕಿದ್ದ ವಿದ್ಯಾರ್ಥಿನಿ ತನ್ನ ಜೀವನವನ್ನೇ ಕತ್ತಲೆಗೆ ತಳ್ಳಿದ್ದಾಳೆ. ಅವಳ ಕಾಲು ಸ್ವಾಧೀನ ಕಳೆದುಕೊಂಡ ಪರಿಣಾಮ ಆಕೆಗೆ ನಿಲ್ಲಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯಕ್ಕೆ ಆಕೆ ಎದ್ದೇಳದಂತೆ, ನಡೆಯದಂತೆ ಮಲಗಿಕೊಂಡೇ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.
ಇದಕ್ಕೆ ಸಂಬಂಧಪಟ್ಟ ವಿಡಿಯೊ ಪೋಸ್ಟ್ ಆಗಿದ್ದು, ಇದಕ್ಕೆ 17 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ ಮತ್ತು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ನಿಮ್ಮ ಜೀವಕ್ಕೆ ಕುತ್ತು ತರುವಂತಹ ಈ ರೀತಿಯ ಸ್ಟಂಟ್ ಮಾಡಬೇಡಿ ಎಂದು ಹಲವರು ಸಲಹೆ ನೀಡಿದ್ದಾರೆ. ಈ ರೀಲ್ಸ್ ನಿಂದ ಫೇಮಸ್ ಆದವರಿಗಿಂತ ಅಪಾಯಕ್ಕೆ ಒಳಗಾಗಿ ಜೀವ ಕಳೆದುಕೊಂಡವರೇ ಹೆಚ್ಚು. ಆದರೂ ಈ ಯುವಜನರಿಗೆ ರೀಲ್ಸ್ ಹುಚ್ಚು ಯಾವಾಗ ಬಿಟ್ಟು ಹೋಗುತ್ತದೆಯೋ ತಿಳಿಯದು. ಒಟ್ಟಾರೆ ಸೋಶಿಯಲ್ ಮೀಡಿಯಾದ ರೀಲ್ಸ್‌ಗಾಗಿ ಯುವ ಜನರು ಪ್ರತಿದಿನ ಯಾವ ಸಂಕಷ್ಟಕ್ಕೆ ತಂದುಕೊಳ್ಳುತ್ತಾರೋ ಎಂಬುದು ತಿಳಿಯುತ್ತಿಲ್ಲ.
ಇದನ್ನೂ ಓದಿ: Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ
ಇಂತಹ ಘಟನೆಗಳು ಪ್ರತಿದಿನ ಒಂದಲ್ಲ ಒಂದು ನಡೆಯುತ್ತಿರುತ್ತದೆ. ಈ ಹಿಂದೆ ಪುಣೆಯಲ್ಲಿ ಹುಡುಗಿಯೊಬ್ಬಳು ಸ್ನೇಹಿತನ ಕೈ ಹಿಡಿದುಕೊಂಡು ಪಾಳುಬಿದ್ದ ಕಟ್ಟಡದಿಂದ ಇಳಿದು ನೇತಾಡುತ್ತಾ ರೀಲ್ಸ್ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಅಲ್ಲದೇ ಮುಂಬೈ ಹುಡುಗಿಯೊಬ್ಬಳು ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತು ಡ್ಯಾನ್ಸ್ ಮಾಡಿ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದ್ದಳು.