ಬೆಂಗಳೂರು: ಮದುವೆಯಾದ ಸಂಭ್ರಮಕ್ಕೆ ಕೆಲವರು ಪಾರ್ಟಿಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ತನ್ನ ವೈವಾಹಿಕ ಜೀವನ ಮುರಿದು ಬಿದ್ದಿದ್ದಕ್ಕೆ ಬೇಸರಪಡುವ ಬದಲು ಮಹಿಳೆ ಅದನ್ನು ಸಂಭ್ರಮಿಸಿದ್ದಾರೆ. ಅದಕ್ಕಾಗಿ ಪಾರ್ಟಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಆ ವೇಳೆ ಮಹಿಳೆ ಶೀಲಾ ಕಿ ಜವಾನ್ ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ಹೌದು, ಶೆಹ್ರೋಸ್ ನೂರ್ ಮೊಹಮ್ಮದ್ ಎಂಬ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದ ಸಂಭ್ರಮವನ್ನು ಆಚರಿಸಲು ಪಾರ್ಟಿಯನ್ನು ಆಯೋಜಿಸಿದ್ದಾಳೆ. ಅವರು ಮದುವೆಯಾದಾಗ ಕೂಡ ಇಷ್ಟು ಒಳ್ಳೆ ಪಾರ್ಟಿ ನೀಡಿರಲಿಲ್ಲವಂತೆ. ಈ ಪಾರ್ಟಿಯಲ್ಲಿ ಈಕೆ ಬಾಲಿವುಡ್ ಸಾಂಗ್‌ಗಳಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಅದರ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಸುಂದರವಾದ ವಧುವಿನ ಲೆಹೆಂಗಾದಲ್ಲಿ ಕಂಗೊಳಿಸಿದ ಮಹಿಳೆ ಬಾಲಿವುಡ್ ಹಾಡುಗಳಿಗೆ ಸಂತೋಷದಿಂದ ನೃತ್ಯ ಮಾಡಿದ್ದಾಳೆ. ವಿಡಿಯೊದಲ್ಲಿ ನೋಡಿದಂತೆ, ಕೋಣೆಯನ್ನು ಬಲೂನ್‌ಗಳು ಮತ್ತು ‘ಡೈವೋರ್ಸ್ ಮುಬಾರಕ್’ ಎಂದು ಗೋಡೆಯ ಮೇಲೆ ಬರೆದು ಸುಂದರವಾಗಿ ಅಲಂಕರಿಸಲಾಗಿತ್ತು. ಪಾರ್ಟಿಯಲ್ಲಿ ತಿಂಡಿಗಳು ಹಾಗೂ ಕೆಲವೊಂದು ಸಂದೇಶಗಳನ್ನೊಳಗೊಂಡ ಫಲಕಗಳಿದ್ದವು. ಅದರಲ್ಲಿ ಅವಳ ‘ಭಯಾನಕ ವೈವಾಹಿಕ ಜೀವನದ’ ಬಗ್ಗೆ ಕೆಲವು ಸಂದೇಶಗಳನ್ನು ಬರೆಯಲಾಗಿದೆ.
Social Media has done great damage to the Institution of Marriage pic.twitter.com/jQSC5bnyWb
— Professor Sahab (@ProfesorSahab) July 25, 2024
ಇದನ್ನು ಮಹಿಳೆ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾಳೆ. “ಸುದೀರ್ಘ 18 ತಿಂಗಳ ನಂತರ ಸ್ವಾತಂತ್ರ್ಯ ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೊವನ್ನು ‘Simply_Krishna’ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಯುವಕನಿಗೆ ಜಾಡಿಸಿ ಒದ್ದ ಜಿಮ್ ಮಾಲೀಕನನ್ನು ಮತ್ತೊಬ್ಬ ಯುವಕ ಇರಿದು ಕೊಂದ; ವಿಡಿಯೊ ಇದೆ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ ಜನರು ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿಚ್ಛೇದನವನ್ನು ಸಂಭ್ರಮದಿಂದ ಆಚರಿಸುವ ಮಹಿಳೆಯ ಕಲ್ಪನೆಯನ್ನು ಹೆಚ್ಚಿನವರು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಈ ಆಚರಣೆಯನ್ನು ವಿರೋಧಿಸಿದರು. ಆಗ ಮಹಿಳೆ ತನ್ನ ವೈವಾಹಿಕ ಜೀವನದ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಮದುವೆಯ ನಂತರ ತಾನು ಅನುಭವಿಸಿದ ಅಗ್ನಿಪರೀಕ್ಷೆಯನ್ನು ಸಹ ಅವರು ವಿವರಿಸಿದ್ದಾರೆ.