Viral Video: ವಿಚ್ಛೇದನ ಸಿಕ್ಕಿದ ಖುಷಿಗೆ ʼಡಿವೋರ್ಸ್‌ ಪಾರ್ಟಿʼ ಮಾಡಿ ಕುಣಿದು ಕುಪ್ಪಳಿಸಿದ ಯುವತಿ! ವಿಡಿಯೊ ನೋಡಿ - Vistara News

Latest

Viral Video: ವಿಚ್ಛೇದನ ಸಿಕ್ಕಿದ ಖುಷಿಗೆ ʼಡಿವೋರ್ಸ್‌ ಪಾರ್ಟಿʼ ಮಾಡಿ ಕುಣಿದು ಕುಪ್ಪಳಿಸಿದ ಯುವತಿ! ವಿಡಿಯೊ ನೋಡಿ

Viral Video: ಶೆಹ್ರೋಸ್ ನೂರ್ ಮೊಹಮ್ಮದ್ ಎಂಬ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದ ಸಂಭ್ರಮವನ್ನು ಆಚರಿಸಲು ಪಾರ್ಟಿಯನ್ನು ಆಯೋಜಿಸಿದ್ದಳು. ಆಕೆ ಮದುವೆಯಾದಾಗ ಕೂಡ ಇಷ್ಟು ಒಳ್ಳೆ ಪಾರ್ಟಿ ನೀಡಿರಲಿಲ್ಲವಂತೆ. ಈ ಪಾರ್ಟಿಯಲ್ಲಿ ಈಕೆ ಬಾಲಿವುಡ್ ಸಾಂಗ್‌ಗಳಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಅದರ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಬೆಂಗಳೂರು:
ಮದುವೆಯಾದ ಸಂಭ್ರಮಕ್ಕೆ ಕೆಲವರು ಪಾರ್ಟಿಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ತನ್ನ ವೈವಾಹಿಕ ಜೀವನ ಮುರಿದು ಬಿದ್ದಿದ್ದಕ್ಕೆ ಬೇಸರಪಡುವ ಬದಲು ಮಹಿಳೆ ಅದನ್ನು ಸಂಭ್ರಮಿಸಿದ್ದಾರೆ. ಅದಕ್ಕಾಗಿ ಪಾರ್ಟಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಆ ವೇಳೆ ಮಹಿಳೆ ಶೀಲಾ ಕಿ ಜವಾನ್ ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

Viral Video
Viral Video

ಹೌದು, ಶೆಹ್ರೋಸ್ ನೂರ್ ಮೊಹಮ್ಮದ್ ಎಂಬ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದ ಸಂಭ್ರಮವನ್ನು ಆಚರಿಸಲು ಪಾರ್ಟಿಯನ್ನು ಆಯೋಜಿಸಿದ್ದಾಳೆ. ಅವರು ಮದುವೆಯಾದಾಗ ಕೂಡ ಇಷ್ಟು ಒಳ್ಳೆ ಪಾರ್ಟಿ ನೀಡಿರಲಿಲ್ಲವಂತೆ. ಈ ಪಾರ್ಟಿಯಲ್ಲಿ ಈಕೆ ಬಾಲಿವುಡ್ ಸಾಂಗ್‌ಗಳಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಅದರ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಸುಂದರವಾದ ವಧುವಿನ ಲೆಹೆಂಗಾದಲ್ಲಿ ಕಂಗೊಳಿಸಿದ ಮಹಿಳೆ ಬಾಲಿವುಡ್ ಹಾಡುಗಳಿಗೆ ಸಂತೋಷದಿಂದ ನೃತ್ಯ ಮಾಡಿದ್ದಾಳೆ. ವಿಡಿಯೊದಲ್ಲಿ ನೋಡಿದಂತೆ, ಕೋಣೆಯನ್ನು ಬಲೂನ್‌ಗಳು ಮತ್ತು ‘ಡೈವೋರ್ಸ್ ಮುಬಾರಕ್’ ಎಂದು ಗೋಡೆಯ ಮೇಲೆ ಬರೆದು ಸುಂದರವಾಗಿ ಅಲಂಕರಿಸಲಾಗಿತ್ತು. ಪಾರ್ಟಿಯಲ್ಲಿ ತಿಂಡಿಗಳು ಹಾಗೂ ಕೆಲವೊಂದು ಸಂದೇಶಗಳನ್ನೊಳಗೊಂಡ ಫಲಕಗಳಿದ್ದವು. ಅದರಲ್ಲಿ ಅವಳ ‘ಭಯಾನಕ ವೈವಾಹಿಕ ಜೀವನದ’ ಬಗ್ಗೆ ಕೆಲವು ಸಂದೇಶಗಳನ್ನು ಬರೆಯಲಾಗಿದೆ.

ಇದನ್ನು ಮಹಿಳೆ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾಳೆ. “ಸುದೀರ್ಘ 18 ತಿಂಗಳ ನಂತರ ಸ್ವಾತಂತ್ರ್ಯ ” ಎಂದು ಪೋಸ್ಟ್‌ ನಲ್ಲಿ ಬರೆಯಲಾಗಿದೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೊವನ್ನು ‘Simply_Krishna’ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಯುವಕನಿಗೆ ಜಾಡಿಸಿ ಒದ್ದ ಜಿಮ್‌ ಮಾಲೀಕನನ್ನು ಮತ್ತೊಬ್ಬ ಯುವಕ ಇರಿದು ಕೊಂದ; ವಿಡಿಯೊ ಇದೆ

Viral Video
Viral Video

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ ಜನರು ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿಚ್ಛೇದನವನ್ನು ಸಂಭ್ರಮದಿಂದ ಆಚರಿಸುವ ಮಹಿಳೆಯ ಕಲ್ಪನೆಯನ್ನು ಹೆಚ್ಚಿನವರು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಈ ಆಚರಣೆಯನ್ನು ವಿರೋಧಿಸಿದರು. ಆಗ ಮಹಿಳೆ ತನ್ನ ವೈವಾಹಿಕ ಜೀವನದ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಮದುವೆಯ ನಂತರ ತಾನು ಅನುಭವಿಸಿದ ಅಗ್ನಿಪರೀಕ್ಷೆಯನ್ನು ಸಹ ಅವರು ವಿವರಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral News: ಜೈಲಿಂದ ಹೊರಬಂದ ಖುಷಿಗೆ ರೌಡಿಯ ಬೃಹತ್ ಮೆರವಣಿಗೆ; ಮತ್ತೆ ಜೈಲಿಗೇ ಕಳುಹಿಸಿದ ಪೊಲೀಸರು!

Viral News ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಹರ್ಷದ್ ಪಟಾಂಕರ್ ಅನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್ ರ‍್ಯಾಲಿಯನ್ನು ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

VISTARANEWS.COM


on

Viral News
Koo

ಮಹಾರಾಷ್ಟ್ರ : ಮದುವೆ, ದೇವಸ್ಥಾನದ ಪ್ರತಿಷ್ಠಾಪನೆ ಸಮಾರಂಭದ ವೇಳೆ ಬೃಹತ್ ಮೆರವಣಿಗೆಯನ್ನು ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರದ ಕುಖ್ಯಾತ ರೌಡಿನೊಬ್ಬನನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್‌ ರ‍್ಯಾಲಿಯನ್ನು  ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3:30 ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗಿದೆ. ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್‌ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು.

ವರದಿ ಪ್ರಕಾರ, ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಟಾಂಕರ್ ಅವರನ್ನು ಈ ಹಿಂದೆ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವಾರು ಅಪರಾಧಗಳಿಗಾಗಿ ಬಂಧಿಸಲಾಗಿತ್ತು ಮತ್ತು ಜೈಲಿಗೆ ಹಾಕಲಾಗಿತ್ತು.

ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ಒಂದು ವರ್ಷದ ಹಿಂದೆ ಎಂಪಿಡಿಎ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಸಂಭ್ರಮಾಚರಣೆಯ ರ‍್ಯಾಲಿಯಿಂದಾಗಿ ಪೊಲೀಸ್ ಕ್ರಮಕೈಗೊಂಡು ಈಗ ಅವರನ್ನು ಮತ್ತೆ ಜೈಲಿಗೆ ತಳ್ಳಿದೆ ಎನ್ನಲಾಗಿದೆ. ಅವರ ಆರು ಸಹಚರರನ್ನು ಗೋಪಾಲ್ ನಾಗೋರ್ಕರ್, ವೇದಾಂತ್ ಚಾಲ್ಡೆ, ಶಾನ್ ಮೈಕೆಲ್, ಜಾಯ್ ಮೈಕೆಲ್, ರಾಬಿನ್ಸನ್ ಬ್ಯಾಟಿಸ್, ವೈಭವ್ ಖಂಡ್ರೆ ಮತ್ತು ವಿಕಾಸ್ ನೇಪಾಳಿ ಎಂದು ಗುರುತಿಸಲಾಗಿದೆ.

Continue Reading

Latest

Viral Video: ಕೈದಿಗೆ ಕೈಕೋಳ ಹಾಕಿ ತಾಜ್ ಮಹಲ್‌ ತೋರಿಸಲು ಹೋಗಿದ್ದ ಪೊಲೀಸರು! ವಿಡಿಯೊ ನೋಡಿ

Viral Video: ಇತ್ತೀಚೆಗೆ ಕೈಕೋಳ ಧರಿಸಿದ ಕೈದಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಾಜ್ ಮಹಲ್‌ಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೈಕೋಳ ತೊಡಿಸಿದ್ದರಿಂದ ಕೈದಿಗೆ ತಾಜ್ ಮಹಲ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ತಿಳಿಸಿದೆ. ಈ ಘಟನೆ ಈಗ ರಾಜಸ್ಥಾನದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Viral Video
Koo


ಆಗ್ರಾ: ಕೈಗೆ ಬೇಡಿ ಹಾಕಿದ ಎಂದ ಮೇಲೆ ಅವರು ಕೈದಿಯಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಕೈದಿ ಜೈಲಿನಲ್ಲಿರಬೇಕು. ಅವರನ್ನು ಮನಬಂದಂತೆ ಹೊರಗಡೆ ಬಿಡುವ ಹಾಗಿಲ್ಲ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಕೈದಿಗಳನ್ನು ಕರೆದುಕೊಂಡು ಬರುವಂತಿಲ್ಲ. ಆದರೆ ಇತ್ತೀಚೆಗೆ ಕೈಕೋಳ ಧರಿಸಿದ ಕೈದಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಾಜ್ ಮಹಲ್‍ಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಕೈಕೋಳ ತೊಡಿಸಿದ್ದರಿಂದ ಕೈದಿಗೆ ತಾಜ್ ಮಹಲ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ತಿಳಿಸಿದೆ. ತಾಜ್ ಮಹಲ್‌ ಬಳಿ ರಕ್ಷಣೆಗೆ ನಿಯೋಜಿಸಲಾಗಿರುವ ಸಹಾಯಕ ಪೊಲೀಸ್ ಆಯುಕ್ತ ಸೈಯದ್ ಆರೀಬ್ ಅಹ್ಮದ್ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೊ ಹಳೆಯದು ಎಂದು ತಿಳಿಸಿದ್ದಾರೆ. ಅಲ್ಲದೇ ಕೈದಿಯ ಜೊತೆಗಿದ್ದ ಪೊಲೀಸ್ ಅಧಿಕಾರಿಯನ್ನು ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ನಿಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಹಿಮಾಚಲ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಮತ್ತು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜ್ ಮಹಲ್‍ನಿಂದ 500 ಮೀಟರ್ ದೂರದಲ್ಲಿ ಬಿಳಿ ಪೊಲೀಸ್ ಜೀಪ್ ನಿಲ್ಲಿಸಲಾಗಿತ್ತು ಮತ್ತು ಅಲ್ಲಿ ರಕ್ಷಣೆಗೆ ನಿಯೋಜಿಸಲಾದ ಸ್ಥಳೀಯ ಪೊಲೀಸರು ಹಿಮಾಚಲ ಪ್ರದೇಶದ ಅಧಿಕಾರಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಡುವಂತೆ ಕೇಳಿಕೊಂಡರು. ಇದರ ನಂತರ, ಒಬ್ಬ ಅಧಿಕಾರಿ ಕೈದಿಯೊಂದಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಎಎಸ್ಐ ಸಿಬ್ಬಂದಿ ಅವರನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ಸ್ಥಳೀಯರು ಈ ಘಟನೆಯನ್ನು ವಿಡಿಯೊದಲ್ಲಿ ಸೆರೆಹಿಡಿದಿದ್ದು, ಇದರಲ್ಲಿ ಕೈಕೋಳ ಧರಿಸಿದ ಕೈದಿ ಮತ್ತು ಅವರ ಬೆಂಗಾವಲಿಗೆ ಇದ್ದ ಅಧಿಕಾರಿಯನ್ನು ತೋರಿಸಿದ್ದಾರೆ. ಅಲ್ಲದೇ ವಿಡಿಯೊ ತೆಗೆಯದಂತೆ ಅಧಿಕಾರಿಗಳು ಆಕ್ಷೇಪ ಮಾಡುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

Continue Reading

Latest

Teacher Suspended: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

Teacher Suspended: ರಾಜಸ್ಥಾನದಲ್ಲಿ ಶಿಕ್ಷಕಿ ದಾಮೋರ್ ಎಂಬುವರು ಬುಡಕಟ್ಟು ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಕೆಲವು ಸಾಂಪ್ರದಾಯಿಕ ಹಿಂದೂ ಆಚರಣೆಗಳನ್ನು ತಿರಸ್ಕರಿಸುವಂತೆ ಸಲಹೆ ನೀಡಿದ್ದರು. ಇಂದಿನಿಂದ ಎಲ್ಲಾ ಉಪವಾಸ ಆಚರಿಸುವುದನ್ನು ನಿಲ್ಲಿಸಿ, ನಾವು ಹಿಂದೂಗಳಲ್ಲ ಎಂದು ಹೇಳಿದ್ದರು. ಅವರ ಹೇಳಿಕೆಗೆ ಬುಡಕಟ್ಟು ಸಮುದಾಯದ ಮಹಿಳೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಅಮಾನತು ಮಾಡಿದ್ದಾರೆ.

VISTARANEWS.COM


on

Teacher Suspended
Koo


ಹಿಂದೂ ಧರ್ಮದಲ್ಲಿ ಸಿಂಧೂರ ಮತ್ತು ಮಂಗಳಸೂತ್ರವನ್ನು ಮದುವೆಯಾದ ಹೆಣ್ಣುಮಕ್ಕಳು ಧರಿಸಬೇಕು ಎಂಬ ಸಂಪ್ರದಾಯವಿದೆ. ಇದು ಬಹಳ ಹಿಂದಿನ ಕಾಲದಿಂದಲೂ ಬಂದಂತಹ ಸಂಪ್ರದಾಯ. ಇಂದಿಗೂ ಬಹುತೇಕ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಕ್ಕಳು ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಪಾಶ್ಚಿಮಾತ್ಯರ ಜೀವನಶೈಲಿಯನ್ನು ಅನುಸರಿಸುತ್ತಾ ಈ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಇಂತಹ ಸಂಪ್ರದಾಯವನ್ನು ಪಾಲಿಸದಂತೆ ಶಿಕ್ಷಕಿಯೊಬ್ಬರು ಜನರಿಗೆ ಸಲಹೆ ನೀಡಿದ್ದಾರೆ. ರಾಜಸ್ಥಾನದ ಮಹಿಳಾ ಶಿಕ್ಷಕಿ ಬುಡಕಟ್ಟು ಮಹಿಳೆಯರಿಗೆ ಸಿಂಧೂರ ಮತ್ತು ಮಂಗಳಸೂತ್ರವನ್ನು ಧರಿಸದಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ರಾಜಸ್ಥಾನ ಶಿಕ್ಷಣ ಇಲಾಖೆ ಅವರನ್ನು ಕೆಲಸದಿಂದ ಅಮಾನತು( Teacher Suspended)ಗೊಳಿಸಿದೆ ಎಂದು ವರದಿಯಾಗಿದೆ.

ಜುಲೈ 19ರಂದು ಬನ್ಸ್ವಾರಾದ ಮಂಗರ್ ಧಾಮ್‍ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಶಿಕ್ಷಕಿ ದಾಮೋರ್ ಬುಡಕಟ್ಟು ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಕೆಲವು ಸಾಂಪ್ರದಾಯಿಕ ಹಿಂದೂ ಆಚರಣೆಗಳನ್ನು ತಿರಸ್ಕರಿಸುವಂತೆ ಸಲಹೆ ನೀಡಿದರು. ಶಿಕ್ಷಕಿ ಮೇನಕಾ ದಾಮೋರ್ ತಮ್ಮ ಭಾಷಣದಲ್ಲಿ, “ಬುಡಕಟ್ಟು ಕುಟುಂಬಗಳು ಸಿಂಧೂರವನ್ನು ಹಚ್ಚುವುದಿಲ್ಲ, ಅವರು ಮಂಗಳಸೂತ್ರವನ್ನು ಧರಿಸುವುದಿಲ್ಲ. ಬುಡಕಟ್ಟು ಸಮಾಜದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂದಿನಿಂದ, ಎಲ್ಲಾ ಉಪವಾಸಗಳನ್ನು ಆಚರಿಸುವುದನ್ನು ನಿಲ್ಲಿಸಿ. ನಾವು ಹಿಂದೂಗಳಲ್ಲ” ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಬುಡಕಟ್ಟು ಸಮುದಾಯದ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿಕ್ಷಕಿಯ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿದೆ.

Teacher Suspended
Teacher Suspended

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಶಿಕ್ಷಕಿ ದಾಮೋರ್ ಅವರನ್ನು ಅಮಾನತುಗೊಳಿಸಿದ್ದಾರೆ. ರಾಜಸ್ಥಾನ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಶಿಕ್ಷಣ ಇಲಾಖೆಯ ಪ್ರತಿಷ್ಠೆಗೆ ಕಳಂಕ ತಂದ ಆರೋಪದ ಮೇಲೆ ದಾಮೋರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಶಿಕ್ಷಕಿ ಮೇನಕಾ ದಾಮೋರ್ ಅವರು ಆದಿವಾಸಿ ಪರಿವಾರ ಸಂಸ್ಥೆಯ (Adivasi Parivar Sanstha )ಸ್ಥಾಪಕಿಯಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಘಟನೆಯ ಸಮಯದಲ್ಲಿ ಸಾದಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ:ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಸೀನಿಯರ್‌ಗಳು! ತಲ್ಲಣ ಮೂಡಿಸುವ ವಿಡಿಯೊ

ಮಂಗರ್ ಧಾಮ್‍ನಲ್ಲಿ ನಡೆದ ರ್ಯಾಲಿ ವಿಶಾಲವಾದ ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲು ವೇದಿಕೆಯಾಯಿತು. ಇದು ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಬುಡಕಟ್ಟು ಸಮುದಾಯಗಳಿಂದ ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ. ದಾಮೋರ್ ಅವರ ವಿವಾದಾತ್ಮಕ ಭಾಷಣದ ಜೊತೆಗೆ, ಭಿಲ್ ರಾಜ್ಯವನ್ನು ರಚಿಸಬೇಕೆಂದು ಪ್ರತಿಪಾದಿಸುವ ರಾಜಕೀಯ ನಿರ್ಣಯವನ್ನು ಸಹ ಈ ಸಂದರ್ಭದಲ್ಲಿ ಅಂಗೀಕರಿಸಲಾಯಿತು ಎನ್ನಲಾಗಿದೆ.

Continue Reading

ರಾಮ ಮಂದಿರ

Ayodhya Ram Mandir: ರಾಮಮಂದಿರಕ್ಕೆ ಬರುವ ಚಿನ್ನ, ಬೆಳ್ಳಿ ಆಭರಣಗಳ ಕಾವಲಿಗೆ ಇಬ್ಬರು ಆರ್​​ಎಸ್​ಎಸ್​​ ಕಾರ್ಯಕರ್ತರ ನೇಮಕ

ಅಯೋಧ್ಯೆ ರಾಮ ಮಂದಿರದ (Ayodhya Ram Mandir) ರಾಮಲಲ್ಲಾನಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಚಿನ್ನ, ಬೆಳ್ಳಿ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳೂ ಬರುತ್ತಿದೆ. ಇದನ್ನು ನಿರ್ವಹಿಸಲು ಮತ್ತು ದಾಖಲಿಸಲು ದೇವಸ್ಥಾನದ ಟ್ರಸ್ಟ್‌ನಿಂದ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

VISTARANEWS.COM


on

By

Ayodhya Ram Mandir
Koo

ಉತ್ತರಪ್ರದೇಶ: ಅಯೋಧ್ಯೆಯ ರಾಮಮಂದಿರದ (Ayodhya Ram Mandir) ರಾಮಲಲ್ಲಾನ (ramlalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಹೀಗೆ ಭೇಟಿ ನೀಡುವ ಭಕ್ತರು ಭಾರಿ ಪ್ರಮಾಣದ ಕಾಣಿಕೆ ಅರ್ಪಿಸುತ್ತಿದ್ದಾರೆ. ಚಿನ್ನ, ಬೆಳ್ಳಿ, ವಜ್ರ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳನ್ನೂ ಸಲ್ಲಿಸುತ್ತಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ಹುಂಡಿಗೆ ಬೀಳುವುದು ಸೇರಿದಂತೆ ಬೆಲೆಬಾಳುವ ಆಭರಣಗಳನ್ನು ಅರ್ಪಿಸುತ್ತಿದ್ದಾರೆ. ಹೀಗಾಗಿ ಇವುಗಳ ನಿರ್ವಹಣೆಗೆಂದು ದೇವಸ್ಥಾನದ ಟ್ರಸ್ಟ್‌ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು (RSS workers) ನೇಮಕ ಮಾಡಿದೆ.

ಈ ಆರೆಸ್ಸೆಸ್ ಕಾರ್ಯಕರ್ತರು ಆಭರಣಗಳನ್ನು ದಾನ ಮಾಡುವ ಪ್ರತಿಯೊಬ್ಬ ಭಕ್ತನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗುತ್ತಿದೆ. ಮಾಹಿತಿ ದಾಖಲು ಮಾಡಲು ವಿವಿಧ ಪಾಳಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಪ್ರತಿ ದಿನದ ಸಂಜೆ ಕಾಣಿಕೆ ರೂಪದಲ್ಲಿ ಬಂದಿರುವ ಆಭರಣಗಳನ್ನು ದಾಖಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿ ಠೇವಣಿ ಇಡಲಾಗುತ್ತಿದೆ. ಕೆಲವು ಭಕ್ತರು ದೇಣಿಗೆ ಕೌಂಟರ್​ಗೆ ಹೋಗುವ ಬದಲು ಅಲ್ಲಿನ ಸಿಬ್ಬಂದಿ ಮೂಲಕ ಹಣ ನೀಡಲಾಗುತ್ತಿದೆ. ಈ ವಹಿವಾಟುಗಳನ್ನೂ ಎಚ್ಚರಿಕೆಯಿಂದ ದಾಖಲು ಮಾಡಲು ಟ್ರಸ್ಟ್​ ಮುಂದಾಗಿದೆ. ಈ ಎಲ್ಲ ವಹಿವಾಟುಗಳ ಬಗ್ಗೆ ನಿಗಾ ಇಡಲು ಆರ್​ಎಸ್​ಎಸ್​ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

ಬಾಲ ರಾಮನಿಗೆ ಅಲಂಕಾರ ಮಾಡುವ ಆಭರಣಗಳನ್ನು ರಕ್ಷಿಸಲು ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರಾಮಲಲ್ಲಾನನ್ನು ಅಲಂಕರಿಸುವಾಗ ಮತ್ತು ಅದನ್ನು ತೆಗೆಯುವ ವೇಳೆ ಪುರೋಹಿತರು ನಿವೃತ್ತ ಸೈನಿಕರ ಮೇಲ್ವಿಚಾರಣೆಯಲ್ಲಿ ಲಾಕರ್‌ನಿಂದ ಆಭರಣಗಳನ್ನು ಪಡೆದು ವಾಪಸ್​ ಕೊಡುತ್ತಾರೆ. ಎಲ್ಲ ಆಭರಣವನ್ನು ತೆಗೆಯುವಾಗ ಮತ್ತು ಹಾಕುವಾಗ ಲೆಕ್ಕ ಹಾಕಲಾಗುತ್ತದೆ.

Ayodhya Ram Mandir
Ayodhya Ram Mandir


ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುವ ಇಬ್ಬರು ಬಂದೂಕು ಹೊಂದಿರುವ ಆರು ಅಂಗರಕ್ಷಕರನ್ನು ಬಾಲರಾಮನ ವಿಗ್ರಹಕ್ಕೆ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಧಾರ್ಮಿಕ ಗುರುಗಳಾಗಿ ಸೇವೆ ಸಲ್ಲಿಸಿದ ಮೂವರು ಸೇರಿದಂತೆ 20 ನಿವೃತ್ತ ಸೇನಾ ಸಿಬ್ಬಂದಿಯನ್ನು ರಾಮ ಮಂದಿರದಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಧಾರ್ಮಿಕ ಗುರುಗಳು ಗರ್ಭಗುಡಿಯ ಹೊರಗೆ ನಿಂತು ಪೂಜೆಗೆ ಸಹಾಯ ಮಾಡುತ್ತಾರೆ. ಉಳಿದ ಸಿಬ್ಬಂದಿ ಭಕ್ತರ ಹರಿವನ್ನು ನಿಯೋಜಿಸುತ್ತಿದ್ದಾರೆ.

ಆರತಿ ಮತ್ತು ಇತರ ಪೂಜೆಗಳ ಸಮಯದಲ್ಲಿ ಗಂಟೆಗಳನ್ನು ಬಾರಿಸಲು ಮತ್ತು ಉಳಿದ ವ್ಯವಸ್ಥೆಗಳನ್ನು ನಿರ್ವಹಿಸಲು ಅವರು ಸಹಾಯ ಮಾಡುತ್ತಾರೆ. 17 ನಿವೃತ್ತ ಸೈನಿಕರು ಸಾಮಾನ್ಯ ಉಡುಪುಗಳನ್ನು ಧರಿಸಿ ದೇಗುಲದ ಆವರಣದ ಮೇಲ್ವಿಚಾರಣೆ ಮಾಡುತ್ತಾರೆ.

ಈ ನಡುವೆ ಶ್ರೀ ರಾಮ ಜನ್ಮಭೂಮಿ ಆವರಣದ ಶೇಷಾವತಾರ ದೇವಾಲಯದ ನಿರ್ಮಾಣ ಪ್ರಾರಂಭವಾಗಿದೆ. ರಾಮಮಂದಿರ ಮತ್ತು ಕುಬೇರ ದಿಬ್ಬದ ನಡುವೆ ಈ ಹೊಸ ದೇವಾಲಯ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

ದಕ್ಷಿಣ ಭಾರತದ ಸಂತರ ಸಲಹೆ ಪಡೆದು ಶೇಷಾವತಾರ್ ದೇವಾಲಯದ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಅದರ ಎತ್ತರವು ರಾಮ ಮಂದಿರದಕ್ಕೆ ಸಮಾನವಾಗಿದೆ. ಈ ದೇವಾಲಯವು ಶ್ರೀ ಸೀತಾರಾಮನ ವಿಗ್ರಹ ಹೊಂದಿರುತ್ತದೆ. ಇದನ್ನು ಶೇಷನಾಗ ರಕ್ಷಿಸುತ್ತಾನೆ. ಇನ್ನು ಸಪ್ತ ಮಂಟಪದ ಅಡಿಪಾಯದ ಕೆಲಸವು ಬಹುತೇಕ ಪೂರ್ಣಗೊಂಡಿದೆ. ಅಡಿಪಾಯ ಮತ್ತು ಗೋಡೆಗೆ ಕಲ್ಲುಗಳ ಕಟ್ಟುವ ಕಾರ್ಯ ನಡೆಸಲಾಗುತ್ತಿದೆ.

Continue Reading
Advertisement
Pakistan Cricket Board
ಪ್ರಮುಖ ಸುದ್ದಿ1 hour ago

ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

assistance from Ramchandrapur Matha for Shiruru landslide victims
ಉತ್ತರ ಕನ್ನಡ1 hour ago

Uttara Kannada News: ಶಿರೂರು ಗುಡ್ಡಕುಸಿತ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದ ಸಹಾಯಹಸ್ತ

Inauguration of Kannada learning classes for Malayali speakers
ಕರ್ನಾಟಕ1 hour ago

Bengaluru News: ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಿ: ಸ್ಪೀಕರ್‌ ಯು.ಟಿ.ಖಾದರ್‌ ಸೂಚನೆ

Viral News
ಪ್ರಮುಖ ಸುದ್ದಿ1 hour ago

Viral News: ಜೈಲಿಂದ ಹೊರಬಂದ ಖುಷಿಗೆ ರೌಡಿಯ ಬೃಹತ್ ಮೆರವಣಿಗೆ; ಮತ್ತೆ ಜೈಲಿಗೇ ಕಳುಹಿಸಿದ ಪೊಲೀಸರು!

Viral Video
Latest2 hours ago

Viral Video: ಕೈದಿಗೆ ಕೈಕೋಳ ಹಾಕಿ ತಾಜ್ ಮಹಲ್‌ ತೋರಿಸಲು ಹೋಗಿದ್ದ ಪೊಲೀಸರು! ವಿಡಿಯೊ ನೋಡಿ

Dog meat
ಕರ್ನಾಟಕ2 hours ago

Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!

Teacher Suspended
Latest2 hours ago

Teacher Suspended: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

Rahul Gandhi
ದೇಶ2 hours ago

Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್‌ ಭೇಟಿ ನೀಡಿ, ಚಪ್ಪಲಿ ಹೊಲಿದ ರಾಹುಲ್‌ ಗಾಂಧಿ; Video ಇಲ್ಲಿದೆ

Apollo International Public School introduced Sqay samara kale as part of the syllabus
ಬೆಂಗಳೂರು2 hours ago

Bengaluru News: ಸ್ಕಾಯ್ ಸಮರ ಕಲೆಯನ್ನು ಪಠ್ಯದ ಭಾಗವಾಗಿ ಪರಿಚಯಿಸಿದ ಅಪೋಲೋ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ

Ayodhya Ram Mandir
ರಾಮ ಮಂದಿರ2 hours ago

Ayodhya Ram Mandir: ರಾಮಮಂದಿರಕ್ಕೆ ಬರುವ ಚಿನ್ನ, ಬೆಳ್ಳಿ ಆಭರಣಗಳ ಕಾವಲಿಗೆ ಇಬ್ಬರು ಆರ್​​ಎಸ್​ಎಸ್​​ ಕಾರ್ಯಕರ್ತರ ನೇಮಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ4 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ6 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ6 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ8 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ1 day ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌