Site icon Vistara News

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Viral Video

ಬೆಂಗಳೂರು: ಯಾವುದೇ ಆನ್‌ಲೈನ್ ಆ್ಯಪ್‌ಗಳಲ್ಲಿ ನೀವು ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿದರೂ ಅದನ್ನು ಅವರು ಮನೆ ಬಾಗಿಲಿಗೆ ತಂದು ನೀಡುತ್ತಾರೆ ನಿಜ. ಆದರೆ ಕೆಲವೊಮ್ಮೆ ಡೆಲಿವರಿ ಬಾಯ್ಸ್ ನಿಂದ ಕೆಲವು ದುರ್ಘಟನೆಗಳು ನಡೆಯುತ್ತಿರುವುದನ್ನು ನೀವು ಕೇಳಿರಬಹುದು. ಹಾಗಾಗಿ ಡೆಲಿವರಿ ಬಾಯ್ಸ್ ಬಗ್ಗೆ ಎಚ್ಚರಿಕೆಯಿಂದಿರಿ. ಯಾಕೆಂದರೆ ಅಂತಹದೊಂದು ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಜೊಮ್ಯಾಟೊ ಡೆಲಿವರಿ ಬಾಯ್ ಮಾಡಿದ ಕಳ್ಳತನದ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಜೂನ್ 25ರಂದು ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಅನ್ನು ಮನೆಗೆ ತಲುಪಿಸಲು ಮನೆಯ ಬಾಗಿಲಿಗೆ ಬಂದಿದ್ದಾನೆ. ನಂತರ ಆತ ಆರ್ಡರ್ ನೀಡಿ ಮರಳುವಾಗ ಮನೆಯ ಬಾಗಿಲಿ ಬಳಿ ಇದ್ದ ಆಹಾರದ ಪ್ಯಾಕೆಟ್ ಒಂದನ್ನು ಗಮನಿಸಿದ್ದಾನೆ. ಮನೆಯವರು ಒಳಗೆ ಹೋದ ತಕ್ಷಣ ಅದನ್ನು ಎತ್ತಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪತ್ರಕರ್ತ ಆದಿತ್ಯ ಕಾಲ್ರಾ ಎಂಬುವವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಜೊಮ್ಯಾಟೊ ಕೇರ್ ಈ ಬಗ್ಗೆ ಕ್ಷಮೆ ಯಾಚಿಸಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. “ಇದು ಸಂಭವಿಸಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಅಂತಹ ವಿಷಯಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಮತ್ತು ಅಂತಹ ಘಟನೆಗಳಿಗೆ ಕಾರಣವಾದವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜೊಮ್ಯಾಟೊ ಕೇರ್ ಭರವಸೆ ನೀಡಿದ್ದಾರೆ. ಹಾಗೇ ಇದಕ್ಕೆ ಸಂಬಂಧಪಟ್ಟ ವಿವರಗಳನ್ನು ಕಳುಹಿಸಿ, ಇದರಿಂದ ನಾವು ತ್ವರಿತವಾಗಿ ತನಿಖೆ ಮಾಡಬಹುದು ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

ಜೊಮ್ಯಾಟೊ ಡೆಲಿವರಿ ಬಾಯ್ಸ್ ನ ಕಳ್ಳತನದ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಗ್ರಾಹಕರು ಆರ್ಡರ್ ಮಾಡಿದ ಬಾಕ್ಸ್ ನಿಂದ ಫುಡ್ ತೆಗೆದು ತಿಂದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಜೊಮ್ಯಾಟೊ ಆಹಾರ ಸುರಕ್ಷತಾ ಕಾರ್ಯವಿಧಾನಗಳ ಬಗ್ಗೆ ಜನರಿಗೆ ಕಳವಳ ಉಂಟಾಗಿತ್ತು. ಹಾಗಾಗಿ ಜೊಮ್ಯಾಟೊದಿಂದ ವಸ್ತುಗಳನ್ನು ಆರ್ಡರ್ ಮಾಡುವಾಗ ಗ್ರಾಹಕರು ಬಹಳ ಎಚ್ಚರಿಕೆ ಇರುವುದು ಉತ್ತಮ. ಇಲ್ಲವಾದರೆ ಇದರಿಂದ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.

Exit mobile version