Site icon Vistara News

Working Hours: ಅತಿ ಹೆಚ್ಚು ಕೆಲಸದ ಸಮಯ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Working Hours

ಬದುಕಿನ ಬಂಡಿ ಸಾಗಿಸುವುದು ಎನ್ನುವುದು ಸುಲಭದ ಕೆಲಸವಲ್ಲ. ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಜನರು ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಅಥವಾ ರಾತ್ರಿ ವೇಳೆಗೆ ಮನೆಗೆ ಮರಳುವುದು ಸಹಜ. ಕೆಲಸದ ಅವಧಿ ಸಾಮಾನ್ಯವಾಗಿ 8ರಿಂದ 9 ಗಂಟೆ ಇರುತ್ತದೆ. ಇದು ಸಾಮಾನ್ಯ ಅವಧಿ. ಆದರೆ ಕೆಲಸದ ಅವಧಿ (Working Hours) ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರುತ್ತದೆ. ಒಂದೊಂದು ಕೆಲಸಕ್ಕೂ ಒಂದೊಂದು ಅವಧಿ ಇರುತ್ತದೆ. ಕೆಲವು ಕೆಲಸಗಳು ದಿನದಲ್ಲಿ 7 ಗಂಟೆಗಳ ಕಾಲ ಇದ್ದರೆ, ಇನ್ನು ಕೆಲವು ಕೆಲಸಗಳು 8-9 ಗಂಟೆಗಳ ಕಾಲ ನಡೆಯುತ್ತದೆ.

ಇನ್ನು ದೇಶಗಳ ಬಗ್ಗೆ ಹೇಳುವುದಾದರೆ ಕೆಲವು ದೇಶಗಳಲ್ಲಿ ಹಣದುಬ್ಬರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹಾಗಾಗಿ ಅಂತಹ ದೇಶಗಳಲ್ಲಿ ಅತಿ ಹೆಚ್ಚು ಕೆಲಸದ ಅವಧಿಯನ್ನು ನಿಗದಿಪಡಿಸಿರುತ್ತಾರೆ. ಇದೀಗ 2024ರಲ್ಲಿ ವಿಶ್ವದ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳ ಆಧಾರದ ಮೇಲೆ 2024ರಲ್ಲಿ ವಿಶ್ವದ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ 10 ದೇಶಗಳ ಪಟ್ಟಿ ಹೀಗಿದೆ.

ಇದರಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ವಾರಕ್ಕೆ ಸರಾಸರಿ 52 ಗಂಟೆಗಳ ಕೆಲಸದೊಂದಿಗೆ ಅತಿ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಟಾಪ್‌ 10 ದೇಶಗಳ ಪಟ್ಟಿ ಇಲ್ಲಿದೆ.

  1. 1. ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ): ವಾರಕ್ಕೆ ಸರಾಸರಿ 52 ಗಂಟೆ

2. ಪಾಕಿಸ್ತಾನ: ವಾರಕ್ಕೆ 46.6 ಗಂಟೆ ಕೆಲಸ

3. ಭಾರತ: ವಾರಕ್ಕೆ 46 ಗಂಟೆ

4. ಬಾಂಗ್ಲಾದೇಶ: ವಾರಕ್ಕೆ 45.8 ಗಂಟೆ

5. ಈಜಿಪ್ಟ್: ವಾರಕ್ಕೆ 45.5 ಗಂಟೆ

6. ಚೀನಾ: ವಾರಕ್ಕೆ 45 ಗಂಟೆ

7. ಅಲ್ಜೀರಿಯಾ: ವಾರಕ್ಕೆ 44 ಗಂಟೆ

8. ಟರ್ಕಿ: ವಾರಕ್ಕೆ 43.7 ಗಂಟೆ

9. ನೈಜೀರಿಯಾ: ವಾರಕ್ಕೆ 43.4 ಗಂಟೆ

10. ಮೆಕ್ಸಿಕೊ: ವಾರಕ್ಕೆ 42.7 ಗಂಟೆ

ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!

ಹಾಗಾಗಿ ವಿದೇಶಗಳಲ್ಲಿ ಕೆಲಸಕ್ಕೆ ಹೋಗಲು ಬಯಸುವವರು ಒಮ್ಮೆ ಈ ಪಟ್ಟಿಯ ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ಕೆಲಸದ ಅವಧಿ ಅತಿಯಾದರೆ ಅದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದರಿಂದ ನಿಮಗೆ ವಿಶ್ರಾಂತಿ ಸಿಗುವುದಿಲ್ಲ. ಇದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. 50ನೇ ವಯಸ್ಸಿನಲ್ಲಿ ನೀವು ಮಧುಮೇಹ, ಹೃದ್ರೋಗ, ಬೊಜ್ಜಿನ ನಂತಹ ದೀರ್ಘಕಾಲದ ಸಮಸ್ಯೆಗೆ ಒಳಗಾಗಬಹುದು.

Exit mobile version