Site icon Vistara News

World Environment Day:ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಿದ ‘ಕೇಳಚಂದ್ರ ಕಾಫಿ’

World Environment Day

ಚಿಕ್ಕಮಗಳೂರು: ಜೂನ್ ತಿಂಗಳು ಬಂತೆಂದರೆ ಪರಿಸರ ಸಂರಕ್ಷಣೆಯ ಮಾತು ಎಲ್ಲೆಡೆ ಕೇಳಿ ಬರುತ್ತದೆ. ನಾವಿರುವ ಪರಿಸರ ಮೊದಲಿನ ಹಾಗೇ ಇಲ್ಲ ಎನ್ನುವ ನೋವು, ಕಾಳಜಿ ಎಲ್ಲರ ಮನದಲ್ಲಿಯೂ ಇದೆ. ಪರಿಸರ ಚೆನ್ನಾಗಿ ಇದ್ದರೆ ನಮ್ಮ ಆರೋಗ್ಯ, ಮನಸ್ಸು ಎರಡೂ ಚೆನ್ನಾಗಿರುತ್ತದೆ. ಈ ಕುರಿತು ಸಾಕಷ್ಟು ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆಯ ಚಟುವಟಿಕೆಯಲ್ಲಿ ಕೈ ಜೋಡಿಸಿವೆ. ಕಾಫಿ (coffee) ಉತ್ಪನ್ನಗಳ ಉತ್ಕೃಷ್ಟ ಸಂಸ್ಥೆಯಾಗಿರುವ ಕೇಳಚಂದ್ರ ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ! ವಿಶ್ವ ಪರಿಸರ ದಿನಾಚರಣೆಯ (World Environment Day) ಆಚರಣೆಯ ಹಿನ್ನೆಲೆಯಲ್ಲಿ ತನ್ನ ಎಲ್ಲ ಎಸ್ಟೇಟ್ ​ಗಳಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸರದ ಅತ್ಯುನ್ನತ ನಿರ್ವಹಣೆ ಮತ್ತು ಸ್ಥಿರವಾದ ಅಭ್ಯಾಸಗಳ ವಿಚಾರದಲ್ಲಿ ತನ್ನ ಬದ್ಧತೆಯನ್ನು ಸಾರುತ್ತಿದೆ. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸುವ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ  ಪ್ರಾಮುಖ್ಯತೆಯ ಬಗ್ಗೆ ಎಸ್ಟೇಟ್​ ಸಿಬ್ಬಂದಿ, ಕಾರ್ಮಿಕರು ಮತ್ತು ಯುವ ಪೀಳಿಗೆಗೆ ಶಿಕ್ಷಣ ನೀಡುವ ಉದ್ದೇಶವನ್ನು ಈ ಉಪಕ್ರಮಗಳು ಹೊಂದಿವೆ.

ಕೇಳಚಂದ್ರ ಕಾಫಿ ಜನಪ್ರಿಯ ಪ್ರವಾಸಿ ತಾಣ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಯೆಲ್ಲೂರ್​ ಖಾನ್​ ಎಸ್ಟೇಟ್ ​ನಲ್ಲಿ ಎಲ್ಲ ಸಿಬ್ಬಂದಿ ಮತ್ತು ಕಾರ್ಮಿಕರಿಗಾಗಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.  ಪರಿಸರ ಸಂರಕ್ಷಣೆ, ಜಲಮೂಲಗಳ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವಿಕೆ ಮತ್ತು ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಕಾರ್ಮಿಕರೆಲ್ಲರೂ ಅಗತ್ಯ ಮಾಹಿತಿಯನ್ನು ಪಡೆದರು.ಶೈಕ್ಷಣಿಕ ಗೋಷ್ಠಿಯ ನಂತರ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ 3 ಕಿ.ಮೀ ಉದ್ದದ ರಸ್ತೆಯುದ್ದಕ್ಕೂ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಅಭಿಯಾನದಲ್ಲಿ ಪಾಲ್ಗೊಂಡ ತಂಡವು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ, ಸರಿಯಾದ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರವಾಸಿಗರನ್ನು ಪ್ರೇರೇಪಿಸಿತು.

ಇನ್ನು ಕಮ್ಮರಗೋಡು ಕ್ಲಸ್ಟರ್​ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯನ್ನು ಅರಿಯುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯದಲ್ಲಿ ಶಾಲಾ ಮಕ್ಕಳ ಭಾಗವಹಿಸುವಿಕೆಯೂ ನಿರ್ಣಾಯಕ ಪಾತ್ರ ವಹಿಸಿತು. ನಮ್ಮ ಭೂಮಿಯ ಆರೋಗ್ಯ ಮತ್ತು ಸ್ಥಿರತೆ ಸುಧಾರಿಸುವಲ್ಲಿ ಮರಗಳು ವಹಿಸುವ ಉತ್ತಮ ಪಾತ್ರದ ಬಗ್ಗೆ ಮಕ್ಕಳಿಗೆ ಕಲಿಸಲಾಯಿತು.  

ಇದನ್ನೂ ಓದಿ:Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

ಪರಿಸರ ದಿನಾಚರಣೆ ಅಂಗವಾಗಿ ಆಯೋಜಸಿರುವ ಈ ಕಾರ್ಯಕ್ರಮಗಳು ಪರಿಸರ ಸ್ನೇಹಿ ಅಭ್ಯಾಸಗಳು, ಉತ್ತಮ ಭವಿಷ್ಯ ಮತ್ತು ಹೈಟೆಕ್ ಹಾಗೂ ಸ್ಮಾರ್ಟ್​​ ಕೃಷಿಗೆ ಕೇಳಚಂದ್ರ ಕಾಫಿಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಕಂಪನಿಯ ಈ ರೀತಿಯ ಕಾರ್ಯಕ್ರಮಗಳು 2030 ರ ವೇಳೆಗೆ ಜೀವವೈವಿಧ್ಯತೆಯ ನಷ್ಟವನ್ನು ಸರಿತೂಗಿಸುವ ವಿಶ್ವಸಂಸ್ಥೆಯ ಕರೆಗೆ ಅನುಗುಣವಾಗಿವೆ.  ಭೂಮಿಯ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಪುನರ್​​ ಸ್ಥಾಪನೆ ಮಾಡುವಲ್ಲಿ ಕೇಳಚಂದ್ರ ಕಾಫಿ ಸಂಪೂರ್ಣ ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

Exit mobile version