Site icon Vistara News

World’s Oldest Bus Driver: ಇವರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ! ವಯಸ್ಸು ಎಷ್ಟು ನೋಡಿ!

World's Oldest Bus Driver


ಅಮೆರಿಕದ ಮಿನ್ನೆಸೋಟದ 94 ವರ್ಷದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ (World’s Oldest Bus Driver) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಜಿಮ್ ಒಪೆಗಾರ್ಡ್ ಎಂದು ಗುರುತಿಸಲಾಗಿದೆ ಮತ್ತು ಅವರಿಗೆ ಈಗ 94 ವರ್ಷ ವಯಸ್ಸಾಗಿದೆ. ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಅವರು ಬಸ್ಸುಗಳನ್ನು ಓಡಿಸುವುದರಲ್ಲೇ ಕಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅವರು 65 ನೇ ವಯಸ್ಸಿನಲ್ಲಿ ನಿವೃತ್ತರಾಗುವ ಮೊದಲು ಸಿಟಿ ಬಸ್ ಚಾಲಕನಾಗಿ 20 ವರ್ಷಗಳ ವೃತ್ತಿಜೀವನವನ್ನು ನಡೆಸಿದರು. ಆದರೆ ನಿವೃತ್ತಿ ನಂತರ ಅವರಿಗೆ ಜೀವನ ಬೋರ್ ಎನಿಸಿದೆ.

ಹಾಗಾಗಿ ಅವರು ಪ್ರಸ್ತುತ ನಾರ್ತ್‍ಸ್ಟಾರ್ ಬಸ್‌ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ, ಸ್ಕೂಲ್ ಬಸ್ ಓಡಿಸುವ ಮೂಲಕ ಶಾಲಾ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಮೂರು ಮೊಮ್ಮಕ್ಕಳನ್ನು ಹೊಂದಿರುವ ಜಿಮ್ ಅವರು ತನ್ನ ಈ ಕೆಲಸವನ್ನು ಖುಷಿಯಿಂದ ನಿರ್ವಹಿಸುತ್ತಿದ್ದಾರೆ, ಏಕೆಂದರೆ ಅದು ಅವರನ್ನು ಕಾರ್ಯನಿರತರಾಗಿರುವಂತೆ ಮಾಡುತ್ತದೆ. ಮತ್ತು ಆಫ್ರಿಕಾದಲ್ಲಿ ತನ್ನ ಮಗಳು ಸ್ಥಾಪಿಸಿದ ಕ್ರೈಸ್ತ ಆಶ್ರಮಕ್ಕೆ ಹಣವನ್ನು ನೀಡಲು ಈ ಕೆಲಸ ನೆರವಾಗುತ್ತದೆ. ಅವರ ಮ್ಯಾನೇಜರ್ ಪ್ರಕಾರ, ಜಿಮ್ ಅವರು ಒಬ್ಬ ಒಳ್ಳೆಯ ಚಾಲಕ. ಅವರು ಅತ್ಯಂತ ಸುರಕ್ಷಿತವಾಗಿ ಬಸ್ ಚಲಾಯಿಸುತ್ತಾರೆ ಮತ್ತು ಎಂದಿಗೂ ತಡಮಾಡುವುದಿಲ್ಲ. ಆದರೆ ಅವರ ವಯಸ್ಸಿನ ಕಾರಣದಿಂದಾಗಿ, ಅವರು ಪ್ರತಿ ವರ್ಷ ದೈಹಿಕ ಪರೀಕ್ಷೆ ಮತ್ತು ಡ್ರೈವಿಂಗ್ ಸಾಮರ್ಥ್ಯದಲ್ಲಿ ಉತ್ತೀರ್ಣರಾಗಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ಜಿಮ್ ಅವರು ಆರೋಗ್ಯಕರವಾದ ದೇಹವನ್ನು ಹೊಂದಿದ್ದಾರೆ. ಅವರು ಆರೋಗ್ಯ ಪೂರಕಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಪ್ರತಿದಿನ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಅವರು ಜಿಮ್ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿವೃತ್ತಿಯ ನಂತರ ಜಿಮ್ ಎರಡು ಉದ್ಯೋಗಗಳನ್ನು ನಿರ್ವಹಿಸುತ್ತಾರೆ. ಒಂದು ಇಂಟರ್ ಸಿಟಿ ಕೋಚ್‍ಗಳನ್ನು ಓಡಿಸುವುದು ಮತ್ತು ಇನ್ನೊಂದು ಶಾಲಾ ಬಸ್ ಓಡಿಸುವುದು. ಆದರೆ ಈ ನಡುವೆ ಅವರು ತಮ್ಮ 84ನೇ ವಯಸ್ಸಿನಲ್ಲಿ ಬಿದ್ದು ಕುತ್ತಿಗೆ ಮುರಿತಕ್ಕೆ ಒಳಗಾಗಿದ್ದರು. ನಂತರ ಅವರು ಚೇತರಿಸಿಕೊಳ್ಳಲು ನಾಲ್ಕೂವರೆ ತಿಂಗಳುಗಳನ್ನು ಕಳೆದರು, ಆಮೇಲೆ ಅವರನ್ನು ಇಂಟರ್ ಸಿಟಿ ಕೋಚ್‍ ಕಂಪೆನಿ ಕೈಬಿಟ್ಟ ಕಾರಣ ಶಾಲಾ ಬಸ್ ಚಾಲಕನಾಗಿ ಮಾತ್ರ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. “ನಾನು ಕೆಲಸ ಮಾಡಲು ಇಷ್ಟಪಡುತ್ತೇನೆ, ವಿಶೇಷವಾಗಿ ಶಾಲಾ ಬಸ್ ಓಡಿಸುವುದು ನನಗೆ ತುಂಬಾ ಇಷ್ಟ” ಎಂದು ಜಿಮ್ ಹೇಳಿದ್ದಾರೆ.

ಇದನ್ನೂ ಓದಿ:ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ

ಜಿಮ್ ಅವರು ಬಸ್ ಡ್ರೈವ್ ಮಾಡುವುದು ಮಾತ್ರವಲ್ಲ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅವರ ಕೆಲಸದ ವೇಳಾಪಟ್ಟಿಯಲ್ಲಿ ಬೆಳಿಗ್ಗೆ ಮೂರು ಗಂಟೆಗಳ ಡ್ರೈವ್ ಮಾಡುವುದು, ನಂತರ ಮೂರು ಗಂಟೆಗಳ ಕಾಲ ವಿರಾಮ ಮಾಡಿ ನಂತರ ಮಧ್ಯಾಹ್ನ ಇನ್ನೂ ನಾಲ್ಕು ಗಂಟೆಗಳ ಡ್ರೈವ್ ಮಾಡುತ್ತಾರೆ. ವಿರಾಮದ ಸಮಯದಲ್ಲಿ, ಅವರು ಹಿರಿಯ ಸಹಕಾರಿ ವಸತಿಯಲ್ಲಿ ಇರುತ್ತಾರೆ.

Exit mobile version