Site icon Vistara News

Yamaha Fascino S : ಎಲ್ಲಿದ್ದೀಯಾ ಅಂಥ ಕೇಳಿದ್ರೆ, ಇಲ್ಲಿದ್ದೀನಿ ಅನ್ನುತ್ತೆ ಈ ಸ್ಕೂಟರ್​! ವಿಶೇಷ ಫೀಚರ್ ಇರುವ ಸ್ಕೂಟರ್ ಈಗ ಭಾರತದಲ್ಲಿ

Yamaha Fascino S

ಬೆಂಗಳೂರು: ನಗರದೊಳಗಿನ ಪಾರ್ಕಿಂಗ್​ನಲ್ಲಿ ಇಟ್ಟಿರುವ ಸ್ಕೂಟರ್​ಗಳನ್ನು ಪತ್ತೆ ಮಾಡುವುದು ಸಾಹಸದ ಕೆಲಸ. ರಾಶಿಯೊಳಗೆ ಎಲ್ಲಿಟ್ಟಿದ್ದೇವೆ ಎಂದು ಮರೆತು ಹೋಗುವುದು ಮೊದಲ ಸಮಸ್ಯೆಯಾದರೆ, ಒಂದೇ ರೀತಿಯ ಹತ್ತಾರು ಸ್ಕೂಟರ್​ಗಳು ಒಂದೇ ಕಡೆ ಇದ್ದಾಗ ನಮ್ಮದು ಯಾವುದು ಎಂದು ಪತ್ತೆ ಹಚ್ಚುವುದೂ ಕಷ್ಟ. ಇದಕ್ಕೆಲ್ಲ ಪರಿಹಾರ ಎಂಬ ಫೀಚರ್​ಗಳನ್ನು ಅಳವಡಿಸಿಕೊಂಡಿರು ಸ್ಕೂಟರ್ ಅನ್ನು ಯಮಹಾ ಇಂಡಿಯಾ ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಫ್ಯಾಸಿನೊ ಸ್ಕೂಟರ್​ನ ಸುಧಾರಿತ ಫ್ಯಾಸಿನೊ ಎಸ್ (Yamaha Fascino S)​​ ಅವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ‘ಆನ್ಸರ್ ಬ್ಯಾಕ್​ ಫೀಚರ್​ ಮೂಲಕ ಮೊಬೈಲ್​ನಲ್ಲೇ ಒಂದು ಬಟನ್ ಒತ್ತಿ ಸ್ಕೂಟರ್​ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುತ್ತದೆ.

ಇಂಡಿಯಾ ಯಮಹಾ ಮೋಟಾರ್ (IYM) ಪ್ರೈವೇಟ್ ಲಿಮಿಟೆಡ್, ‘ದಿ ಕಾಲ್ ಆಫ್ ದಿ ಬ್ಲೂ’ ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ ‘ಆನ್ಸರ್​ ಬ್ಯಾಕ್’ (Answer Back)ಫೀಚರ್​ ಹೊಂದಿರುವ ಫ್ಯಾಸಿನೊ ಎಸ್ (Yamaha Fascino S) ಮಾದರಿ ಸ್ಕೂಟರ್ ಬಿಡುಗಡೆ ಮಾಡಿದೆ. ಫ್ಯಾಸಿನೊ ಎಸ್ ಯುರೋಪಿಯನ್ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೊಸತನದೊಂದಿಗೆ ರಸ್ತೆ ಇಳಿದಿದೆ. ಇದು ಯಮಹಾದ ಪೋರ್ಟ್ ಫೋಲಿಯೊಗೆ ರೋಮಾಚಂಕಾರಿ ಸೇರ್ಪಡೆಯಾಗಿದ್ದು ಪ್ರೀಮಿಯಂ ಸ್ಕೂಟರ್ ಮಾದರಿಯಲ್ಲಿ ಆಕರ್ಷಕ ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಅಲ್ಲದೆ ಆಕರ್ಷಕ ಡಾರ್ಕ್ ಮ್ಯಾಟ್ ಬ್ಲೂ ಬಣ್ಣದಲ್ಲೂ ಸಿಗಲಿದೆ.

ಫ್ಯಾಸಿನೊ ಎಸ್ ಎಲ್ಲಾ ಯಮಹಾ ಅಧಿಕೃತ ಶೋರೂಂಗಳಲ್ಲಿ ಈ ಕೆಳಗಿನ ಬೆಲೆಯಲ್ಲಿ ಲಭ್ಯವಿದೆ

2024ರ ಫ್ಯಾಸಿನೊ ಎಸ್ ಮಾದರಿಯ ಪ್ರಮುಖ ಅಂಶವೆಂದರೆ ‘ಆನ್ಸರ್​ ಬ್ಯಾಕ್’ ಫಂಕ್ಷನ್. ‘ಯಮಹಾ ಸ್ಕೂಟರ್ ಆನ್ಸರ್​​ ಬ್ಯಾಕ್’ ಎಂಬ ಯಮಹಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಈ ಫೀಚರ್​ ಅನ್ನು ಬಳಸಬಹುದು. ಅಪ್ಲಿಕೇಶನ್ ನೊಳಗಿನ ಆನ್ಸರ್​ ಬ್ಯಾಕ್ ಬಟನ್ ಒತ್ತುವ ಮೂಲಕ, ಸವಾರರು ತಮ್ಮ ಸ್ಕೂಟರ್ ಅನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದು ಸುಮಾರು ಎರಡು ಸೆಕೆಂಡುಗಳ ಕಾಲ ಹಾರ್ನ್ ಮಾಡುತ್ತಾ ಎಡ ಮತ್ತು ಬಲ ಇಂಡಿಕೇಟರ್​ಗಳನ್ನು ಸಕ್ರಿಯಗೊಳಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಆರಾಮದಾಯಕ ಸವಾರಿ ಅನುಭವ ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್ / ಆ್ಯಪ್ ಸ್ಟೋರ್ ನಿಂದ ಸುಲಭವಾಗಿ ಇನ್​ಸ್ಟಾಲ್​ ಮಾಡಬಹುದು.

ಇದನ್ನೂ ಓದಿ: Chandrababu Naidu: ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ; ಚಂದ್ರಬಾಬು ನಾಯ್ಡು ಘೋಷಣೆ

125 ಸಿಸಿಯ ಅತ್ಯುತ್ತಮ ಎಂಜಿನ್​

ಫ್ಯಾಸಿನೊ ಎಸ್ ಮಾದರಿಯು ಯಮಹಾದ ಅತ್ಯಾಧುನಿಕ ಬಿಎಸ್ 6 ಕಾಂಪ್ಲೈಂಟ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ (ಎಫ್ಐ), ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್ಎಂಜಿ) ನೊಂದಿಗೆ 125 ಸಿಸಿ ಬ್ಲೂ ಕೋರ್ ಹೈಬ್ರಿಡ್ ಎಂಜಿನ್ ಹೊಂದಿದೆ, ಎಂಜಿಜನ್​​ “ಸೈಲೆಂಟ್ ಸ್ಟಾರ್ಟ್” ಅನ್ನು ಆ್ಯಕ್ಟಿವೇಟ್ ಮಾಡುತ್ತದೆ. ಸರಿಸಾಟಿಯಿಲ್ಲದ “ಪವರ್ ಅಸಿಸ್ಟ್” ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಮಾದರಿಯು ನಾರ್ಮಲ್ ಮೋಡ್ ಮತ್ತು ಟ್ರಾಫಿಕ್ ಮೋಡ್ ಸೇರಿದಂತೆ ಸುಧಾರಿತ ಸ್ವಯಂಚಾಲಿತ ಸ್ಟಾಪ್ & ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಸ್) ಅನ್ನು ಸಹ ಹೊಂದಿದೆ. ಈ ಫೀಚರ್​ ಮೂಲಕ ಮೈಲೇಜ್​ ಹೆಚ್ಚಿಸಲಾಗಿದೆ.

ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಈಶಿನ್ ಚಿಹಾನಾ, “ದ್ವಿಚಕ್ರ ವಾಹನ ಉದ್ಯಮದಲ್ಲಿ ವಿಕಸನಗೊಳ್ಳುತ್ತಿರುವ ವಿದ್ಯಮಾನಗಳೊಂದಿಗೆ ಗ್ರಾಹಕರಿಗೆ ವಿಶೇಷ ಫೀಚರ್​ಗಳನ್ನು ಒದಗಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಂದು ಭಾರತದ ನಗರಗಳಲ್ಲಿರುವ ಗ್ರಾಹಕರು ಸ್ಮಾರ್ಟ್ ಆಯ್ಕೆಗಳನ್ನು ಮಾಡುತ್ತಾರೆ. ಯಮಹಾದಲ್ಲಿ, ನಾವು ನಿರಂತರವಾಗಿ ಗ್ರಾಹಕರ ಅಗತ್ಯಗಳಿಗೆ ಆದ್ಯತೆ ನೀಡುತ್ತೇವೆ. ಸವಾರಿ ಅನುಭವಕ್ಕೆ ಮೌಲ್ಯ ನೀಡುವ ಪರಿಹಾರಗಳನ್ನು ನೀಡುತ್ತಿದ್ದೇವೆ. ಫ್ಯಾಸಿನೊ ಎಸ್ ನಲ್ಲಿರುವ ‘ಆನ್ಸರ್​ ಬ್ಯಾಕ್’ ಫೀಚರ್​ ಯಮಹಾದ ವಿಶಿಷ್ಟ ಶೈಲಿ ಮತ್ತು ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ. ನಮ್ಮ ಗ್ರಾಹಕರಿಗೆ ಸಮೃದ್ಧ ಅನುಭವ ನೀಡಲು ನಾವು ಅಂತಹ ಫೀಚಗಳ ಆವಿಷ್ಕಾರ ಮುಂದುವರಿಸುತ್ತೇವೆ ಎಂದು ಹೇಳಿದರು.

ಈ ಅತ್ಯಾಕರ್ಷಕ ಫೀಚರ್​ಗಳು ಸ್ಕೂಟರ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸಲಿದೆ. ಹೊಸತನ ಮತ್ತು ಗ್ರಾಹಕರ ತೃಪ್ತಿಗೆ ಯಮಹಾದ ಬದ್ಧತೆಯಾಗಿದೆ. ಫ್ಯಾಸಿನೊ ಎಸ್ ತನ್ನ ಶೈಲಿ ಮತ್ತು ತಂತ್ರಜ್ಞಾನದ ಮಿಶ್ರಣದ ಮೂಲಕ ರಾಷ್ಟ್ರವ್ಯಾಪಿ ಮೋಡಿ ಮಾಡುತ್ತಿದೆ. ಯಮಹಾ ನಗರದ ಸವಾರಿಯಲ್ಲಿ ಪ್ರೀಮಿಯಂ ಫೀಚರ್​ಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ.

Exit mobile version