Site icon Vistara News

Republic Day Celebration: ಗಣರಾಜ್ಯೋತ್ಸವದ ಸೆಲೆಬ್ರೇಷನ್‌ ಫ್ಯಾಷನ್‌ಗೆ ಬಂತು 3 ಶೈಲಿಯ ತಿರಂಗಾ ದುಪಟ್ಟಾ

Republic Day Celebration

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಣರಾಜ್ಯೋತ್ಸವದ ಸಂಭ್ರಮಕ್ಕೆ (Republic Day Celebration) ಸಾಥ್‌ ನೀಡುವ ತಿರಂಗಾ ದುಪಟ್ಟಾಗಳು ಮಾರುಕಟ್ಟೆಗೆ ಆಗಮಿಸಿವೆ. ಮಾನಿನಿಯರ ಡ್ರೆಸ್‌ಕೋಡ್‌ಗೆ ಜೊತೆಯಾಗುವ ಕಲರ್‌ಫುಲ್‌ ತಿರಂಗಾ ದುಪಟ್ಟಾಗಳು ಈಗಾಗಲೇ ಬೇಡಿಕೆ ಹೆಚ್ಚಿಸಿಕೊಂಡಿದ್ದು, ಅವುಗಳಲ್ಲಿ 3 ಬಗೆಯವು ಟ್ರೆಂಡಿಯಾಗಿವೆ. “ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆಯೇ, ಈ ದಿನದ ಸಂಭ್ರಮಕ್ಕೆಂದು ಈ ದಿನಕ್ಕೆ ಹೊಂದುವ ನಾನಾ ಬಗೆಯ ಉಡುಪುಗಳು, ಔಟ್‌ಫಿಟ್‌ಗಳು ಎಂಟ್ರಿ ನೀಡುತ್ತವೆ. ಇವುಗಳೊಂದಿಗೆ ಮಾನಿನಿಯರ ಸಲ್ವಾರ್‌, ಚೂಡಿದಾರ್‌, ಹಾಗೂ ಇತರೇ ಉಡುಪುಗಳೊಂದಿಗೆ ಧರಿಸಬಹುದಾದ ತಿರಂಗಾ ದುಪಟ್ಟಾಗಳು ಕೂಡ ಆಗಮಿಸುತ್ತವೆ. ಯಾವುದೇ ಉಡುಪಿನೊಂದಿಗೂ ಧರಿಸಬಹುದಾದ ಈ ದುಪಟ್ಟಾಗಳು ಗಣರಾಜ್ಯೋತ್ಸವದ ಡ್ರೆಸ್‌ಕೋಡ್‌ನಂತೆ ಪ್ರತಿಬಿಂಬಿಸುತ್ತವೆ. ಇನ್ನು ಶಾಲೆಗಳಲ್ಲಿ ಮಾಡುವ ಕಾರ್ಯಕ್ರಮಗಳಲ್ಲೂ ಈ ತಿರಂಗಾ ದುಪಟ್ಟಾಗಳನ್ನು ಬಳಸಲಾಗುತ್ತದೆ. ಒಟ್ಟಿನಲ್ಲಿ, ಈ ತ್ರಿವರ್ಣ ದುಪಟ್ಟಾಗಳು ಈ ದಿನದಂದು ಸಂಭ್ರಮಕ್ಕೆ ಸಾಥ್‌ ನೀಡುತ್ತವೆ” ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪಟ್ರ್ಸ್.

ಕಾಟನ್‌ ತಿರಂಗಾ ದುಪಟ್ಟಾ

ಅತಿ ಹೆಚ್ಚು ಮಹಿಳೆಯರು ಇಷ್ಟ ಪಡುವ ಕಾಟನ್‌ ತಿರಂಗಾ ದುಪಟ್ಟಾಗಳು ಕೇವಲ ಖಾದಿ ನೇಷನ್‌ ಹಾಗೂ ಕಾಟನ್‌ ಶೋ ರೂಂಗಳಲ್ಲಿ ಮಾತ್ರ ದೊರೆಯುತ್ತವೆ. ಇವು ಕೊಂಚ ದುಬಾರಿ. ಕಾಟನ್‌ ಪ್ರೇಮಿಗಳು ಇವನ್ನು ಖರೀದಿಸುತ್ತಾರೆ. ಇವನ್ನು ಶಾಲನಂತೆಯೂ ಧರಿಸಬಹುದು.

ಸಾಫ್ಟ್‌ ಕ್ರೇಪ್‌ ತಿರಂಗಾ ದುಪಟ್ಟಾ

ಸಾಫ್ಟ್‌ ಫ್ಯಾಬ್ರಿಕ್‌ನ ಕ್ರೇಪ್‌ನ ತಿರಂಗಾ ದುಪಟ್ಟಾಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಹುಡುಗಿಯರಿಂದಿಡಿದು ವಯಸ್ಸಾಗಿರುವ ಮಹಿಳೆಯರು ಕೂಡ ಇವನ್ನು ಹೆಚ್ಚಾಗಿ ಪ್ರಿಫರ್‌ ಮಾಡುತ್ತಾರೆ. ಇವನ್ನು ಸ್ಟೋಲ್‌ನಂತೆಯೂ ಕತ್ತಿಗೆ ಸುತ್ತಿಕೊಂಡು ಹಾಕಿಕೊಳ್ಳಬಹುದು. ದುಪಟ್ಟಾದಂತೆಯೂ ನಾನಾ ಬಗೆಯಲ್ಲಿ ಧರಿಸಬಹುದು.

ಕಾಟನ್‌ ಸಿಲ್ಕ್‌ ತಿರಂಗಾ ದುಪಟ್ಟಾ

ಈ ಫ್ಯಾಬ್ರಿಕ್‌ನ ತಿರಂಗಾ ದುಪಟ್ಟಾ ಎಥ್ನಿಕ್‌ ಲುಕ್‌ ನೀಡುವುದರೊಂದಿಗೆ ಗ್ರ್ಯಾಂಡ್‌ ಲುಕ್‌ ಕಲ್ಪಿಸುತ್ತದೆ. ಲೆಹೆಂಗಾ, ಸಲ್ವಾರ್‌ ಹಾಗೂ ಯಾವುದೇ ಎಥ್ನಿಕ್‌ ಉಡುಪಿಗೂ ಗ್ರ್ಯಾಂಡ್‌ ಲುಕ್‌ ನೀಡುತ್ತದೆ.

ತಿರಂಗಾ ದುಪಟ್ಟಾ ಧರಿಸುವವರ ಗಮನಕ್ಕೆ…

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ಬೆಂಗಳೂರಿನ ಚುಮು ಚುಮು ಚಳಿಗೆ ಬದಲಾಯಿತು ನಟ ಶೈನ್‌ ಶೆಟ್ಟಿ ವಿಂಟರ್‌ ಫ್ಯಾಷನ್‌!

Exit mobile version