-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಮೇಕಪ್ ಕಿಟ್‌ನಲ್ಲಿ ಸೀಸನ್ ಸೌಂದರ್ಯ ಕಾಪಾಡುವ ಸೌಂದರ್ಯವರ್ಧಕಗಳಿರುವುದು ಅಗತ್ಯ ಎನ್ನುತ್ತಾರೆ ಸೌಂದರ್ಯ ತಜ್ಞರು. ಹೌದು, ಚಳಿಗಾಲಕ್ಕೆ ತಕ್ಕಂತೆ ಬದಲಾಗುವ ಪ್ರತಿಯೊಬ್ಬರ ಮೇಕಪ್‌ನಿಂದ ಯಾವುದೇ ಧಕ್ಕೆ ಉಂಟಾಗದಿರಲು ಮೇಕಪ್ ಕಿಟ್‌ನಲ್ಲಿ ಕೆಲವು ಸೌಂದರ್ಯವರ್ಧಕಗಳು ಸ್ಥಾನ ಪಡೆದಿರಬೇಕು. ಇವು ಸೀಸನ್‌ನ ಸೌಂದರ್ಯ ಕಾಪಾಡುವುದರೊಂದಿಗೆ ತ್ವಚೆಯ ಬ್ಯೂಟಿಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಸೌಂದರ್ಯ ತಜ್ಞರಾದ ನಿಶಾ. ಅವು ಯಾವ್ಯುವು?ಏನೆಲ್ಲಾ ಪ್ರಯೋಜನ ಎಂಬುದನ್ನು ಅವರು ಇಲ್ಲಿ ತಿಳಿಸಿದ್ದಾರೆ.
ಟಿಂಟ್ ಮಾಯಿಶ್ಚರೈಸರ್
ವಿಂಟರ್‌ನಲ್ಲಿ ತ್ವಚೆಯು ಒಣಗಿದಂತಾಗಿರುತ್ತದೆ. ಮೇಕಪ್ ನಂತರ ಇನ್ನೂ ಡ್ರೈ ಆಗುತ್ತದೆ. ಹಾಗಾಗಿ ಮೇಕಪ್ ಆರಂಭದಲ್ಲಿ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಮುಖಕ್ಕೆ ಲೇಪಿಸಿಕೊಳ್ಳಿ. ಇದು ಮುಖದವನ್ನು ಫ್ರೆಶ್ ಆಗಿ ಕಾಣುವಂತೆ ಬಿಂಬಿಸುತ್ತದೆ. ಇದೀಗ ಟಿಂಟ್ ಮಾಯಿಶ್ಚರೈಸರ್ ಕೂಡ ಲಭ್ಯ. ಇದು ಮುಖ ಜಿಡ್ಡಾಗಿರುವಂತೆ ಬಿಂಬಿಸದು.
ಲಿಕ್ವಿಡ್ ಕ್ರೀಮ್ ಫೌಂಡೇಷನ್
ಲಿಕ್ವಿಡ್ ಕ್ರೀಮ್ ಫೌಂಡೇಶನ್ ತ್ವಚೆಯನ್ನು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ. ಡ್ರೈ ಫೌಂಡೇಶನ್‌ಗಳು ಈ ಸೀಸನ್‌ಗೆ ಸೂಕ್ತವಲ್ಲ. ಲಿಕ್ವಿಡ್ ಕ್ರೀಮ್ ಬೇಸ್ಡ್ ಹಾಗೂ ಆಯಿಲ್ ಬೇಸ್ಡ್ ಫೌಂಡೇಷನ್‌ಗಳು ಮಾಯಿಶ್ಚರೈಸರ್ ಅಂಶದಿಂದ ಕೂಡಿರುತ್ತವೆ. ಸೀಸನ್ ಮೇಕಪ್‌ಗೆ ಮ್ಯಾಚ್ ಆಗುತ್ತವೆ.
ಗ್ಲೋಸಿ ಲಿಪ್‌ಸ್ಟಿಕ್/ಲಿಪ್ ಬಾಮ್
ಈ ಸೀಸನ್‌ನಲ್ಲಿ ಮ್ಯಾಟ್ ಲಿಪ್‌ಸ್ಟಿಕ್‌ಗಳು ತುಟಿಗಳನ್ನು ಬಿರುಕು ಮೂಡಿಸಬಹುದು. ಹಾಗಾಗಿ ಗ್ಲೋಸಿ ಲಿಪ್‌ಸ್ಟಿಕ್‌ಗಳನ್ನು ಲೇಪಿಸಿ. ಇವು ಮಾಯಿಶ್ಚರೈಸರ್ ಅಂಶ ಇವುಗಳಲ್ಲಿ ಇರುವುದರಿಂದ ತುಟಿಯ ಚರ್ಮ ಬಿರುಕಾಗದಂತೆ ತಡೆಯುತ್ತವೆ. ಲಿಪ್‌ಸ್ಟಿಕ್ ಹಚ್ಚು ಮುನ್ನ ಲಿಪ್ ಬಾಮ್ ಹಚ್ಚಿ, ಕೆಲ ಕಾಲ ಬಿಡಿ.
ಇದನ್ನೂ ಓದಿ : Winter Denim Jacket: ಚಳಿಗಾಲದಲ್ಲಿ ಹೀಗಿರಬೇಕು ಯುವತಿಯರ ಡೆನೀಮ್ ಜಾಕೆಟ್ ಲೇಯರ್ ಲುಕ್
ಸನ್‌ಸ್ಕ್ರೀನ್
ವಿಂಟರ್‌ನಲ್ಲಿ ಸನ್‌ಸ್ಕ್ರೀನ್ ಜೊತೆಯಲ್ಲೆ ಕ್ಯಾರಿ ಮಾಡಿ. ಹೊರಗಡೆ ಬಿಸಿಲು ಜಾಸ್ತಿ ಇದ್ದಾಗ ಕೈ ಕಾಲುಗಳಿಗೆ ಲೇಪಿಸಿಕೊಳ್ಳಿ. ಇದೀಗ ಕಾಂಪಾಕ್ಟ್ ಸನ್‌ಸ್ಕ್ರೀನ್‌ಗಳು ದೊರೆಯುತ್ತವೆ.
ಕ್ಲೆನ್ಸರ್
ಮೇಕಪ್ ಮಾಡಿದ ನಂತರ ಚಳಿಗೆ ನಿಮಗೆ ಮುಖ ವಾಶ್ ಮಾಡಲು ಬೇಸರವಾದಲ್ಲಿ ಕ್ಲೆನ್ಸರ್ ಬಳಸಿ ಮುಖದ ಮೇಕಪ್ ತೆಗೆಯಬಹುದು. ಹಾಗಾಗಿ ಇದಕ್ಕೆ ಮೇಕಪ್ ಕಿಟ್‌ನಲ್ಲಿ ಸ್ಥಾನ ನೀಡಿ. ಧೂಳು, ಬಿಸಿಲಿನಲ್ಲಿ ಓಡಾಡಿದ ನಂತರವು ಹತ್ತಿಯನ್ನು ಕ್ಲೆನ್ಸರ್‌ನಲ್ಲಿ ಅದ್ದಿ, ಮುಖವನ್ನು ಕ್ಲೆನ್ಸ್ ಮಾಡಿಕೊಳ್ಳಬಹುದು.