-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಥ್ನಿಕ್ ಡಿಸೈನ್‌ನ ಕಾಕ್‌ಟೈಲ್ ಫಿಂಗರ್ ರಿಂಗ್‌ಗಳು (Cocktail finger ring) ಈ ಬಾರಿಯ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಮದುವೆಯಲ್ಲಿ ಮದು ಮಗಳು ಧರಿಸುವ ಜ್ಯುವೆಲರಿಗಳೊಂದಿಗೆ ಸೇರಿ ಹೋಗಿವೆ. ನಾನಾ ಬಗೆಯ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಆಗಮಿಸಿರುವ ಇವು ಜ್ಯುವೆಲರಿ ಪ್ರಿಯ ಮಹಿಳೆಯರನ್ನೂ ಸೆಳೆದಿವೆ. ಇವು ಸಾಮಾನ್ಯ ಕೈ ಉಂಗುರಗಳಿಗಿಂತ ದೊಡ್ಡ ಸೈಝ್‌ನಲ್ಲಿರುತ್ತವೆ. ಡಿಸೈನ್ ಕೂಡ ಅಗಲವಾಗಿರುತ್ತದೆ. ಬೆರಳುಗಳಿಗೆ ಧರಿಸಿದಾಗ ಎದ್ದು ಕಾಣುತ್ತವೆ. ಇದು ಸ್ಟೋನ್ ದ್ದಾಗಿರಬಹುದು, ಗೋಲ್ಡ್ ಅಥವಾ ಇತರೇ ವಿನ್ಯಾಸ ಹೊಂದಿದ್ದಗಿರಬಹುದು. ನೋಡಲು ತೀರಾ ದೊಡ್ಡ ಉಂಗುರಗಳಂತೆ ಕಾಣುತ್ತವೆ. ಮೊದಲೆಲ್ಲಾ ಈ ಕಾಕ್‌ಟೈಲ್ ಫಿಂಗರ್ ರಿಂಗ್‌ಗಳು ಕ್ಯಾಶುವಲ್ ಹಾಗೂ ಪಾರ್ಟಿ ಡಿಸೈನರ್‌ವೇರ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಳ್ಳುತ್ತಿದ್ದವು. ಇದೀಗ ಇವು ಟ್ರೆಡಿಷನಲ್ ಲುಕ್ ನೀಡುವ ಔಟ್‌ಫಿಟ್ ಹಾಗೂ ಸೀರೆಗಳಿಗೆ ಮ್ಯಾಚ್ ಆಗುವಂತಹ ವಿನ್ಯಾಸದಲ್ಲಿ ಬಂದಿವೆ. ಒಂದಕ್ಕಿಂತ ಒಂದು ವಿಭಿನ್ನ ಡಿಸೈನ್‌ನಲ್ಲಿ ಕಾಲಿಟ್ಟಿವೆ.
ಕೈಗಳ ಅಂದ ಹೆಚ್ಚುತ್ತದೆ
ಒಂದು ಉಂಗುರ ಧರಿಸಿದರೇ ಸಾಕು, ಇಡೀ ಕೈಗಳ ಅಂದ ಹೆಚ್ಚುತ್ತದೆ. ಮದುವೆ ಮಾತ್ರವಲ್ಲ, ಇತರೇ ಯಾವುದೇ ಸಮಾರಂಭಗಳಲ್ಲೂ ಕೂಡ ಧರಿಸಬಹುದು. ಬಂಗಾರರಹಿತ ಕಾಕ್‌ಟೈಲ್ ರಿಂಗ್‌ಗಳು ಈ ಸೀಸನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ. ಯಾಕೆಂದರೇ, ಬೆಲೆಯೂ ಕಡಿಮೆ ಅಲ್ಲದೆ, ಊಹೆಗೂ ಮೀರಿದ ಡಿಸೈನ್‌ನಲ್ಲಿ ದೊರೆಯುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ದೀಕ್ಷಾ. ಅವರ ಪ್ರಕಾರ, ಡಿಸೈನರ್‌ವೇರ್ ಹಾಗೂ ಧರಿಸುವ ಮದುವೆಯ ಸೀರೆಗೆ ತಕ್ಕಂತೆ ಇವನ್ನು ಆಯ್ಕೆ ಮಾಡಿ ಧರಿಸಬಹುದು ಎನ್ನುತ್ತಾರೆ.
ಟ್ರೆಂಡಿಯಾಗಿರುವ ಕಾಕ್‌ಟೈಲ್ ಫಿಂಗರ್ ರಿಂಗ್ ಡಿಸೈನ್ಸ್
ಫ್ಲೋರಲ್ ಡಿಸೈನ್ಸ್, ನಕ್ಷತ್ರದ ಡಿಸೈನ್ಸ್, ಮೂರ್ನಾಲ್ಕು ಸುತ್ತಿನ ಹರಳಿರುವ ಡಿಸೈನ್ಸ್, ಪರ್ಲ್ ಡಿಸೈನ್ಸ್, ಸ್ಟೋನ್ ಡಿಸೈನ್ಸ್, ಸೂರ್ಯ, ಚಂದ್ರ ಹೀಗೆ ನಾನಾ ಬಗೆಯ ಡಿಸೈನ್‌ನ ಕಾಕ್‌ಟೈಲ್‌ರಿಂಗ್‌ಗಳು ಸಖತ್ ಬೇಡಿಕೆ ಪಡೆದುಕೊಂಡಿವೆ.
ಬಂಗಾರರಹಿತ ಕಾಕ್‌ಟೈಲ್ ಫಿಂಗರ್ ರಿಂಗ್‌ಗಳು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ. 100 ರೂ.ಗಳಿಂದ ಆರಂಭವಾಗಿ 1000 ರೂ.ಗಳವರೆಗೂ ಬೆಲೆಯಿದೆ. ನಾನಾ ಮೆಟಲ್‌ಗಳಲ್ಲೂ ಲಭ್ಯ.
ಕಾಕ್‌ಟೈಲ್ ಫಿಂಗರ್ ರಿಂಗ್ ಪ್ರಿಯರು ಗಮನಿಸಬೇಕಾದ ವಿಷಯ
Shimmer Half Shoes Trend: ಎಥ್ನಿಕ್ ಲುಕ್ ನೀಡುವ ಶಿಮ್ಮರ್ ಹಾಫ್ ಶೂ ಹವಾ!
- ·ನೀಳವಾದ ಬೆರಳುಗಳಿಗೆ ಆಕರ್ಷಕವಾಗಿ ಕಾಣಿಸುತ್ತದೆ.
- · ನಿಮ್ಮ ಕೈಗಳು ದಪ್ಪವಾಗಿದ್ದಲ್ಲಿ ಆದಷ್ಟೂ ಚಿಕ್ಕ ಡಿಸೈನ್ನವನ್ನು ಆಯ್ಕೆ ಮಾಡಿ. ಇಲ್ಲವಾದಲ್ಲಿ ಮತ್ತಷ್ಟು ದಪ್ಪನಾಗಿ ಕಾಣಿಸಬಹುದು.
- ಧರಿಸುವ ಔಟ್ಫಿಟ್ಗೆ ಮ್ಯಾಚ್ ಮಾಡಿ ಧರಿಸಬಹುದು.
- · ಮೆಹೆಂದಿ ಹಾಕಿದ ಕೈಗಳಿಗೆ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ.