ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನ ಫಂಕಿ ಜ್ಯುವೆಲರಿಗಳ ಲಿಸ್ಟ್‌ಗೆ ಇದೀಗ ಬಿದಿರಿನ ಪರಿಸರ ಸ್ನೇಹಿ ಕಿವಿಯೋಲೆಗಳು ಹಾಗೂ ಆಕ್ಸೆಸರೀಸ್ ಎಂಟ್ರಿ ನೀಡಿವೆ. ವಿಶೇಷವಾಗಿ ಕ್ರಾಫ್ಟ್ ಆಕ್ಸೆಸರೀಸ್ (Summer Accessories) ಪ್ರೇಮಿಗಳನ್ನು ಸೆಳೆಯಲಾರಂಭಿಸಿವೆ.
ಸಮ್ಮರ್‌ಗೆ ಬಿದಿರಿನ ಆಕ್ಸೆಸರೀಸ್ ಫ್ಯಾಷನ್
ಅಂದಹಾಗೆ, ಬಿದಿರಿನ ಆಕ್ಸೆಸರೀಸ್ ಕಂಪ್ಲೀಟ್ ಮೆಟಲ್‌ನದ್ದೂ ಅಲ್ಲ! ಪ್ಲಾಸ್ಟಿಕ್, ಫೈಬರ್ ಅಥವಾ ರಬ್ಬರ್‌ನದ್ದು ಅಲ್ಲ! ಇವುಗಳನ್ನು ಸಿದ್ಧಪಡಿಸಲು ಮಾತ್ರ ಮೆಟಲ್ ಹಾಗೂ ರಬ್ಬರ್ ಪ್ಲಾಸ್ಟಿಕ್‌ನಂತಹ ಮೆಟಿರೀಯಲ್ ಬಳಸಲಾಗುತ್ತದೆ. ಆದರೆ, ಇದೀಗ ಬಿದಿರಿನ ಡಿಸೈನ್‌ನೊಂದಿಗೆ ಇತರೇ ಮೆಟಿರಿಯಲ್ ಜೊತೆಯಾಗಿ ಸಿದ್ಧಗೊಳ್ಳುತ್ತಿವೆ. ಈ ಶೈಲಿಯ ಜ್ಯುವೆಲರಿಗಳು ಆದಷ್ಟೂ ಸಮ್ಮರ್‌ನಲ್ಲಿ ಮಾತ್ರ ಎಂಟ್ರಿ ನೀಡುತ್ತವೆ. ಯಾಕೆಂದರೇ ಮಳೆಗಾಲದಲ್ಲಿ ನೀರಿನಲ್ಲಿ ನೆನೆದರೆ ಹಾಳಾಗುತ್ತವೆ. ಹಾಗಾಗಿ ಇವನ್ನು ಸಮ್ಮರ್ ಆಕ್ಸೆಸರೀಸ್ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ ಶ್ರೀರಕ್ಷಾ. ಅವರ ಪ್ರಕಾರ. ಬಿದಿರಿನ ಆಭರಣಗಳು ಹ್ಯಾಂಡ್‌ಮೇಡ್ ಆಗಿರುತ್ತವೆ. ಹಾಗಾಗಿ ಇವು ಫಂಕಿ ಫ್ಯಾಷನ್ ಪ್ರಿಯರ ಚಾಯ್ಸ್‌ಗೆ ಅನುಗುಣವಾಗಿ ಸಿದ್ಧಗೊಂಡಿರುತ್ತವಂತೆ.
ಮ್ಯಾಚಿಂಗ್ ಮಾಡುವುದು ಹೇಗೆ?
ಸಮ್ಮರ್‌ನಲ್ಲಿ ಧರಿಸುವ ವೀಕೆಂಡ್ ಔಟ್‌ಫಿಟ್‌ಗಳಿಗೆ ಇವು ಮ್ಯಾಚ್ ಆಗುತ್ತವೆ. ಮಿಕ್ಸ್ ಮ್ಯಾಚ್ ಕಲರ್ ಹಾಗೂ ಮೆಟಿರೀಯಲ್ ಹೊಂದಿರುವುದರಿಂದ ಧರಿಸುವ ಡ್ರೆಸ್‌ಗೆ ಅನುಗುಣವಾಗಿ ಧರಿಸಬಹುದು. ಯಾವುದೇ ಬಗೆಯ ಬೇಸಿಗೆ ಉಡುಪುಗಳೊಂದಿಗೆ ಧರಿಸಬಹುದು. ಫ್ಯಾಷೆನಬಲ್ ಆಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಇಂಡೋ-ವೆಸ್ಟರ್ನ್ ಡ್ರೆಸ್‌ಗಳಿಗೆ ಬೆಸ್ಟ್
ಇನ್ನು ಇಂಡೋ-ವೆಸ್ಟರ್ನ್ ಉಡುಪು ಅಥವಾ ಸೀರೆಗೂ ಈ ಬಿದಿರಿನ ಕಿವಿಯೋಲೆಗಳನ್ನು ಧರಿಸುವುದು ಇದೀಗ ಕಾಮನ್ ಆಗಿವೆ. ಅದರಲ್ಲೂ ದೇಸಿ ಆಕ್ಸೆಸರೀಸ್ ಪ್ರೇಮಿಗಳು ಇವನ್ನು ನಾನಾ ಮಿಕ್ಸ್ ಮ್ಯಾಚ್ ಉಡುಪಿನೊಂದಿಗೆ ಪ್ರಯೋಗಾತ್ಮಕವಾಗಿ ಧರಿಸತೊಡಗಿದ್ದಾರೆ ಎನ್ನುತ್ತಾರೆ ಡಿಸೈನರ್ ರಿಚಾ.
ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ನಿಮ್ಮ ಫ್ಯಾಷನ್ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ!
ಬಿದಿರಿನ ಆಕ್ಸೆಸರೀಸ್ ಧರಿಸುವವರಿಗೆ 5 ಟಿಪ್ಸ್
- ಲೈಟ್ವೈಟ್ ಡಿಸೈನ್ನವನ್ನು ಖರೀದಿಸಿ.
- ಯಾವುದೇ ಕಾರಣಕ್ಕೂ ನೀರನ್ನು ಸೋಕಿಸಬೇಡಿ.
- ಸಮ್ಮರ್ ಮಿಕ್ಸ್ ಮ್ಯಾಚ್ ಡ್ರೆಸ್ಗಳಿಗೂ ಧರಿಸಬಹುದು.
- ಹೇರ್ಸ್ಟೈಲ್ ಮಾಡಿದ ನಂತರ ಧರಿಸಿ, ಸಿಕ್ಕಿ ಹಾಕಿಕೊಳ್ಳುವುದಿಲ್ಲ.
- ಬಳಸಿದ ನಂತರ ಧೂಳು ಇರದ ಜಾಗದಲ್ಲಿ ತೆಗೆದಿಡಿ.