ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಹಿಳಾ ದಿನಾಚಾರಣೆಗೆ ಮುನ್ನವೇ ನಡೆದ ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ 2023ರ ಪೇಜೆಂಟ್‌ನಲ್ಲಿ ಹೋಮ್ ಮೇಕರ್ ರಾಧಿಕಾ ವಿಜೇತರಾಗಿ ಕಿರೀಟ ಮುಡಿಗೇರಿಸಿಕೊಂಡರು. ಮಾಡೆಲ್ ನಂದಿತಾ ಸಂದೀಪ್ ನಂತರದ ಸ್ಥಾನ ಪಡೆದರು. ಕ್ಲಾಸಿಕ್ ವಿಭಾಗದಲ್ಲಿ ರಶ್ಮಿ ಕಿರೀಟವನ್ನು ತನ್ನದಾಗಿಸಿಕೊಂಡರೇ, ಫೋಟೋಜೆನಿಕ್ ವಿಭಾಗದಲ್ಲಿ ಪತ್ರಕರ್ತೆ ವ್ಯುಮಾ ಶರ್ಮಾ ಭಾಗವಹಿಸಿ ಸಬ್‌ಟೈಟಲ್ ಪಡೆದರು. ಮಿಸೆಸ್ ಕಾಂಜಿನಿಯಾಲಿಟಿ ಸಬ್‌ಟೈಟಲ್ ಸ್ಟೈಲಿಸ್ಟ್ ನೈನಾ ಅವರದ್ದಾಯಿತು. ಇದರೊಂದಿಗೆ ನಾನಾ ಸಬ್‌ಟೈಟಲ್‌ಗಳನ್ನು ಆಯ್ಕೆಯಾದವರಿಗೆ ನೀಡಲಾಯಿತು.
ಜ್ಯೂರಿ ಪ್ಯಾನೆಲ್‌ನಲ್ಲಿ ವೀಣಾ ಜೈನ್ ಜೊತೆ ಪ್ರಿಯಾಂಕಾ ಉಪೇಂದ್ರ
ಮಿಸೆಸ್ ಇಂಡಿಯಾ ಗ್ಲೋಬ್ ವೀಣಾ ಜೈನ್ ಈ ಪೇಜೆಂಟ್ ನ್ಯಾಷನಲ್ ಡೈರೆಕ್ಟರ್ ಆಗಿದ್ದು, ಇವರ ಜೊತೆಗೆ ಜ್ಯೂರಿ ಪ್ಯಾನೆಲ್‌ನಲ್ಲಿ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ, ಸ್ಯಾಂಡಲ್‌ವುಡ್ ತಾರೆ ಪ್ರಿಯಾಂಕಾ ಉಪೇಂದ್ರ ಹಾಗೂ ನಾಥ್ ಭಾಗವಹಿಸಿದ್ದರು.
ಮಿಸೆಸ್ ಗ್ಲೋಬಲ್ ಇಂಡಿಯಾ ವೀಣಾ ಜೈನ್ ಫ್ಯಾಷನ್ ಮಾತು
ಸಾಮಾನ್ಯ ಮಹಿಳೆಯರು ಕೂಡ ಪೇಜೆಂಟ್‌ನಲ್ಲಿ ಭಾಗವಹಿಸಬಹುದು. ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಸ್ವಾವಲಂಬಿಯಾಗಬಹುದು ಎಂದು ಮಿಸೆಸ್ ಗ್ಲೋಬ್ ಇಂಡಿಯಾ ವೀಣಾ ಜೈನ್ ಅಭಿಪ್ರಾಯಪಟ್ಟರು.
ಈ ಬಾರಿಯ ನ್ಯಾಷನಲ್ ಲೆವೆಲ್‌ನ ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ ಆಗಿರುವ ಸಂಧ್ಯಾ ಶರ್ಮಾ ಇನ್ನುಳಿದ ವಿಜೇತರಿಗೆ ಸ್ಯಾಶ್ ಹಾಗೂ ಕಿರೀಟ ತೊಡಿಸಿ, ಅಭಿನಂದಿಸಿದರು.
ಫ್ಯಾಷನ್ ಲೋಕದ ಅಭಿವೃದ್ಧಿ ಬಗ್ಗೆ ಮಾತನಾಡಿದ ರಾಜೇಶ್ ಶೆಟ್ಟಿ
ಫ್ಯಾಷನ್ ಶೋ ಡೈರೆಕ್ಟರ್, ಕೊರಿಯಗ್ರಾಫರ್, ಡಿಸೈನರ್, ಸ್ಟೈಲಿಸ್ಟ್ ಆಲ್‌ರೌಂಡರ್ ರಾಜೇಶ್ ಶೆಟ್ಟಿ ಅವರು ಮಾತನಾಡಿ, ಇಂದು ಬೆಂಗಳೂರು ಫ್ಯಾಷನ್ ಲೋಕ ಅಭಿವೃದ್ಧಿಗೊಳ್ಳುತ್ತಿದೆ. ಇದು ಸಂತಸದ ವಿಚಾರ ಎಂದು ತಿಳಿಸಿದರು.
ನಟಿ ಪ್ರಿಯಾಂಕಾ ಉಪೇಂದ್ರ ಮಾತು
ನಟಿ ಪ್ರಿಯಾಂಕಾ ಉಪೇಂದ್ರ ವಿಜೇತರಿಗೆ ಸ್ಯಾಶ್ ಹಾಗೂ ಕಿರೀಟ ತೊಡಿಸಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತಾವು ಪೇಜೆಂಟ್ ಮೂಲಕವೇ ನಟನೆಗೆ ಆಗಮಿಸಿದ್ದಾಗಿ ತಿಳಿಸಿದರು. ನೆರೆದಿದ್ದ ಮಾಡೆಲ್‌ಗಳನ್ನು ಹುರಿದುಂಬಿಸಿದರು.
ಮಾಡೆಲ್‌ಗಳ ಫ್ಯಾಷನ್ ಶೋ
ಈ ಪೇಜೆಂಟ್ ಜೊತೆಜೊತೆಯೇ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ಮಾಡೆಲ್‌ಗಳ ಫ್ಯಾಷನ್ ಶೋ ಕೂಡ ನಡೆಯಿತು. ಆಕರ್ಷಕ ಗೋಲ್ಡನ್ ಗೌನ್‌ನಲ್ಲಿದ್ದ ಮಾಡೆಲ್‌ಗಳ ಹೇರ್ ಸ್ಟೈಲಿಂಗ್ ನೋಡುಗರ ಗಮನ ಸೆಳೆಯಿತು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Floral Dress Fashion: ಸೀಸನ್‌ನಲ್ಲಿ ಟ್ರೆಂಡಿಯಾದ ಆಕರ್ಷಕ ಫ್ಲೋರಲ್ ಡ್ರೆಸ್ ಫ್ಯಾಷನ್