ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಮ್ಯಾಜಿನೇಷನ್ ಆರ್ಟ್ ಹೆಸರಿನಡಿ ಉದ್ಯಾನನಗರಿಯ ವಿ ಆರ್ ಮಾಲ್‌ನಲ್ಲಿ ಜೆ ಡಿ ಇನ್‍ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಡಿಸೈನರ್‌ಗಳು ಸಿದ್ಧಪಡಿಸಿದ್ದ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್ ಮೇಲೆ ಬಿಂದಾಸ್ ಆಗಿ ವಾಕ್ ಮಾಡಿದರು.
ಯುಜ್ ಫೌಂಡೇಷನ್ ಹಾಗೂ ಸುಮಿ ಗುಪ್ತಾ ಅವರ ಸಂಯುಕ್ತಾಶ್ರಯದಲ್ಲಿ ನಡೆದ ವೈಟ್ ಫೀಲ್ಡ್ ಆರ್ಟ್ ಕಲೆಕ್ಟಿವ್ ೬ನೇ ಎಡಿಷನ್‌ನ ಕಾರ್ಯಕ್ರಮದಲ್ಲಿ ಈ ರ್ಯಾಂಪ್ ಶೋ ಹಮ್ಮಿಕೊಳ್ಳಲಾಗಿತ್ತು.
ಇಮ್ಯಾಜಿನೇಷನ್ ಥೀಮ್‌ಗೆ ತಕ್ಕ ರ್ಯಾಂಪ್ ವಾಕ್
ನೋಡಲು ಫಾರ್ಮಲ್ ಲುಕ್‌ನಲ್ಲಿ ಕಾಣಿಸುತ್ತಿದ್ದ ಮಾಡೆಲ್‌ಗಳು ಖಾಕಿ ಹಾಗೂ ಮಿಲಿಟರಿ ಗ್ರೀನ್ ಶೇಡ್‌ನ ೩ ಪೀಸ್ ಉಡುಪನ್ನು ಧರಿಸಿದ್ದರು. ಕ್ರಾಪ್ ಟಾಪ್, ಬಿಲೋ ವೇಸ್ಟ್ ಪ್ಯಾಂಟ್ ಹಾಗೂ ಲಾಂಗ್ ಕಾರ್ಡಿಗಾನ್, ಪಫ್ ಜಾಕೆಟ್ ಶೈಲಿಯ ಕೋಟನ್ನು ಧರಿಸಿದ್ದರು. ಇನ್ನು ಹೈ ಪೋನಿಟೇಲ್‌ನಲ್ಲಿ ಕಾಣಿಸಿಕೊಂಡ ಎಲ್ಲರೂ ಟೆಕ್ನಾಲಜಿಯ ಇಮ್ಯಾಜಿನೇಷನ್ ಥೀಮ್ ಆರ್ಟ್‌ಗೆ ಮ್ಯಾಚ್ ಆಗುವಂತೆ ರ್ಯಾಂಪ್ ವಾಕ್ ಮಾಡಿದ್ದು, ನೆರೆದಿದ್ದ ಸಾರ್ವಜನಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಕುತೂಹಲ ಮೂಡಿಸಿದ ವಾಕ್
ವಿಶೇಷವೆಂದರೆ, ಎಲ್ಲಾ ಮಾಡೆಲ್‌ಗಳು ಥೀಮ್‌ಗೆ ತಕ್ಕಂತೆ ಕಣ್ಣಿಗೆ ಅಡ್ಡನಾಗಿ ಕ್ಲೋಸ್ ಆಗಿರುವಂತಹ ಸನ್‌ಗ್ಲಾಸ್ ಧರಿಸಿ ವಾಕ್ ಮಾಡಿದರು. ಇದು ಎಲ್ಲರಲ್ಲೂ ಕೊಂಚ ಕುತೂಹಲ ಮೂಡಿಸಲು ಸಹಕಾರಿಯಾಯಿತು.
ಮುಂದಿನ ಪೀಳಿಗೆಯ ಇಮ್ಯಾಜೀನೇಷನ್‌ಗೆ ತಕ್ಕ ಆರ್ಟ್ ಎಂಬುದನ್ನು ಪ್ರತಿಪಾದಿಸುವುದು ಈ ಕಾಸ್ಟ್ಯೂಮ್ಸ್ ಹಾಗೂ ವಾಕ್‌ನ ಸಾರಂಶವಾಗಿತ್ತು.
ಈ ಇಡೀ ರ್ಯಾಂಪ್ ವಾಕನ್ನು ಶೋ ಡೈರೆಕ್ಟರ್ ಸುಮಾ ಆಕರ್ಷವಾಗಿಸುವಲ್ಲಿ ಯಶಸ್ವಿಯಾದರು. ರಾಜೇಶ್ ಮೆನೀಝ್ ಶೋ ಇವೆಂಟ್‌ನ ಉಸ್ತುವಾರಿ ವಹಿಸಿಕೊಂಡಿದ್ದರು.
ಅಂದಹಾಗೆ, ಇಲ್ಲಿ ಫ್ಯಾಷನ್ ಶೋ ಮಾತ್ರವಲ್ಲ, ಫೈನ್ ಆರ್ಟ್‌ನ ಗ್ಯಾಲರಿ ಪ್ರದರ್ಶನ ಏರ್ಪಡಿಸಲಾಗಿತ್ತು. ಯುವ ಕಲಾವಿದರಿಗೆ ಅವಕಾಶ ಕಲ್ಪಿಸುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ಮಾರ್ಚ್‌ನಲ್ಲಿ ಆರ್ಟ್ ಸಿನಿಮಾ ಹಾಗೂ ಆರ್ಟ್ ಬಜಾರ್‌ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Bangalore Fashion News: ಹೈ ಫ್ಯಾಷನ್ ಮೆಟ್ ಗಾಲಾ, ವಿಭಿನ್ನ ಡಿಸೈನರ್‌ವೇರ್‌ಗಳಲ್ಲಿ ವಾಕ್ ಮಾಡಿದ ಮಾಡೆಲ್‌ಗಳು