ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೌಂದರ್ಯ ಹೆಚ್ಚಿಸುವ ಮೇಕಪ್ ಬ್ರಷ್ಗಳು ಇಂದು ನಾನಾ ಶೈಲಿಯಲ್ಲಿ ದೊರೆಯುತ್ತಿವೆ. ಸಾವಿರಾರು ರೂ. ಗಳ ಬ್ರಾಂಡೆಡ್ ಕಂಪನಿಯ ಬ್ರಷ್ಗಳಿಂದ ಹಿಡಿದು ನೂರು ರೂ.ಗಳ ತನಕ ಸಾಮಾನ್ಯ ಮೇಕಪ್ ಬ್ರಷ್ಗಳು ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿವೆ. ಅವುಗಳಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಬ್ರಷ್ಗಳೆಂದರೇ ಸ್ಟಿಪ್ಲಿಂಗ್ ಬ್ರಷ್, ಕನ್ಸೀಲರ್ ಬ್ರಷ್, ಪೌಡರ್, ಕಾಂಟೌರ್, ಬ್ರಾಂಝಾರ್, ಹೈಲೈಟ್ ಬ್ರಷ್ಗಳು.
ಕಣ್ಣಿನ ಶೇಡ್ನಿಂದ ಹಿಡಿದು ಕೆನ್ನೆಯ ಸೌಂದರ್ಯವನ್ನು ಹೆಚ್ಚಿಸುವ ಈ ಬ್ರಷ್ಗಳು ನಿಮ್ಮ ಡ್ರೆಸ್ಸಿಂಗ್ ಟೇಬಲ್ ಹಾಗೂ ನಿಮ್ಮನ್ನು ಅಲಂಕರಿಸಿದರಷ್ಟೇ ಸಾಲದು. ಅವುಗಳನ್ನು ಸ್ವಚ್ಛವಾಗಿರಿಸುವುದು ನಿಮ್ಮ ಆದ್ಯತೆಯಾಗಬೇಕು ಎನ್ನುವ ಮೇಕಪ್ ತಜ್ಞೆ ದೀಪಾ, ತ್ವಚೆಗೆ ಬಳಸುವ ಈ ಬ್ರಷ್ಗಳನ್ನು ಸ್ವಚ್ಛವಾಗಿರಿಸಲು ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
- ನೋಡಲು ಒಂದೇ ತರಹದ್ದಾಗಿ ಕಂಡರೂ, ಒಂದೊಂದು ಬ್ರಷ್ಗಳು ಒಂದೊಂದು ಬಗೆಯಲ್ಲಿರುತ್ತವೆ. ಮೊದಲಿಗೆ ನೀವು ಪಾಲಿಸಬೇಕಾದ ನಿಯಮ ಏನೆಂದರೆ, ನೀವು ಬಳಸುವ ಬ್ರಷ್ಗಳನ್ನು ಬಳಸಲು ಬೇರೆಯವರಿಗೆ ನೀಡಕೂಡದು. ಮುಖದ ಮೇಲೆ ಅಲರ್ಜಿ ಅಥವಾ ಮೊಡವೆಗಳು ಮೂಡಲು ಇತರರು ಬಳಸಿದ ಬ್ರಷ್ಗಳನ್ನು ಬಳಸುವುದು ಒಂದು ಕಾರಣ ಎಂಬುದು ತಿಳಿದಿರಲಿ.
- ಮೇಕಪ್ ಬ್ರಷ್ಗಳನ್ನು ಆದಷ್ಟೂ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಉತ್ತಮ. ಬೇಬಿ ಶ್ಯಾಂಪೂ ಇಲ್ಲವೇ ಯಾವುದಾರೂ ಮೈಲ್ಡ್ ಶ್ಯಾಂಪೂ ಕೂಡ ಬಳಸಬಹುದು. ಬ್ರಷ್ಗಳನ್ನು ವಾಶ್ ಮಾಡಲು ಮಾರುಕಟ್ಟೆಯಲ್ಲಿ ಲಿಕ್ವಿಡ್ ಕೂಡ ದೊರೆಯುತ್ತದೆ.
- ಮೊದಲಿಗೆ ಬ್ರಷ್ಗಳನ್ನು ವರ್ಗೀಕರಿಸಿ. ಪ್ರತ್ಯೇಕವಾಗಿ ವಾಶ್ ಮಾಡಿ. ಇಲ್ಲವಾದಲ್ಲಿ ಕೊಳೆ ಒಂದಕ್ಕೊಂದು ಅಂಟುವ ಸಾಧ್ಯತೆ ಇರುತ್ತದೆ. ಬ್ರಷ್ಗಳನ್ನು ಒಂದರ ಮೇಲೊಂದು ಇರಿಸಬೇಡಿ. ಇರಿಸಿದಲ್ಲಿ ಅವುಗಳ ಕಲೆಗಳು ಮತ್ತೊಂದರ ಮೇಲೆ ಅಂಟುತ್ತದೆ. ಆದಷ್ಟೂ ಪಕ್ಕಕ್ಕೆ ಇರಿಸಿ. ಸ್ವಚ್ಛಗೊಳಿಸಿ.
- ಮೇಕಪ್ ಬ್ರಷ್ಗಳನ್ನು ಸಾಬೂನು ಅಥವಾ ಶ್ಯಾಂಪೂ ನೀರಿನಲ್ಲಿ ಹೆಚ್ಚು ಹೊತ್ತು ನೆನೆ ಹಾಕಬೇಡಿ. ಬ್ರಷ್ ಕಿತ್ತು ಬರುವ ಸಾಧ್ಯತೆ ಇರುತ್ತದೆ.
- ಮೇಕಪ್ ಬ್ರಷ್ಗಳನ್ನು ತೊಳೆದ ತಕ್ಷಣ ಬಳಸಬಾರದು. ಫ್ಯಾನ್ ಗಾಳಿಯಲ್ಲಿ ಒಣಗಿಸಿ. ಯಾವುದೇ ಬ್ರಷ್ಗಳನ್ನು ಎಕ್ಸ್ಪೋಸ್ ಮಾಡಿ ಇರಿಸಬೇಡಿ. ಬಳಸಿದ ನಂತರ ಒಂದು ಬಾಕ್ಸ್ನಲ್ಲಿಡುವುದು ಉತ್ತಮ. ಯಾವುದೇ ಧೂಳು ಸೇರುವುದಿಲ್ಲ. ಅತಿ ಹೆಚ್ಚಾಗಿ ಮೇಕಪ್ ಬ್ರಷ್ ಬಳಸಿದಲ್ಲಿ ಮಾತ್ರ ಆಗಾಗ್ಗೆ ಕ್ಲೀನ್ ಮಾಡುವುದು ಓಕೆ. ಅಪರೂಪಕ್ಕೆ ಬಳಸಿದಲ್ಲಿ ಪದೇ ಪದೇ ಸ್ವಚ್ಛಗೊಳಿಸುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: Online Beauty Trend: ವೈರಲ್ ಆದ ಹೇರ್ ಕಲರ್ ಸ್ಟೈಲ್