ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಂಗಳನ್ನು ಹೈಲೈಟ್ ಮಾಡುವ ಅಕ್ವಾ ಐ ಮೇಕಪ್ ಇದೀಗ ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಗಿದೆ.
ನೀಲಿ ವರ್ಣದ ನಾನಾ ಶೇಡ್‌ಗಳು ಕಂಗಳ ರೆಪ್ಪೆಗಳನ್ನು ಅಲಂಕರಿಸುತ್ತಿವೆ.
ಅಂದಹಾಗೆ, ಅಕ್ವಾ ಐ ಮೇಕಪ್ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಹಾಲಿಡೇ, ವೀಕೆಂಡ್, ಬೀಚ್ ಪಾರ್ಟಿ, ಬ್ರಂಚ್-ಲಂಚ್ ಪಾರ್ಟಿಗಳಲ್ಲಿ ಈ ಮೇಕಪ್ ಯುವತಿಯರ ಕ್ರೇಝ್‌ಗಳಲ್ಲಿ ಒಂದಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಮಾನ್ಯ ಯುವತಿಯರನ್ನು ಸೆಳೆಯುತ್ತಿದೆ. ನೋಡಲು ವಿಭಿನ್ನವಾಗಿ ಹಾಗೂ ಆಕರ್ಷಕವಾಗಿ ಕಾಣುವ ಈ ಮೇಕಪ್ ಇಡೀ ವಧನವನ್ನು ಹೈಲೈಟ್ ಮಾಡುತ್ತದೆ. ಈ ಮೇಕಪ್‌ನಲ್ಲೆ ಸಾಕಷ್ಟು ಪ್ರಯೋಗಗಳು ಆಗಿರುವುದರಿಂದ ಇದನ್ನು ಕೆಲವು ಮೇಕಪ್ ತಜ್ಞರು ಫಂಕಿ ಮೇಕಪ್‌ನಲ್ಲಿ ಪರಿಗಣಿಸುತ್ತಾರೆ.
ರ‍್ಯಾಂಪ್‌ಗಳಲ್ಲಿ ಹೆಚ್ಚು
ಅಕ್ವಾ ಐ ಮೇಕಪ್ ಅತಿ ಹೆಚ್ಚು ಬಳಕೆಯಾಗಿರುವುದು ರ್ಯಾಂಪ್‌ನಲ್ಲಿ. ಇನ್ನು ಮಾಡೆಲ್‌ಗಳ ಫೋಟೋಶೂಟ್ ಮೇಕಪ್‌ಗಳಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ರ್ಯಾಂಪ್‌ನಲ್ಲಿ ವಾತಾವರಣ ಲೈವ್ಲಿಯಾಗಿರಿಸಲು ಹಾಗೂ ಮುಖವನ್ನು ಹೈಲೈಟ್ ಮಾಡಲು ಈ ಮೇಕಪ್ ಅನ್ನು ಹೆಚ್ಚು ಹೈ ಲೈಟ್ ಮಾಡಲಾಗುತ್ತದೆ. ಅಂದಹಾಗೆ, ಈ ಮೇಕಪ್ ಬಂದದ್ದೇ ವಿದೇಶಿ ರ್ಯಾಂಪ್‌ಗಳಿಂದ. ಮಿಲಾನ್, ನ್ಯೂಯಾರ್ಕ್ ಹಾಗೂ ಪ್ಯಾರೀಸ್ ರ್ಯಾಂಪ್ ಶೋಗಳಲ್ಲಿ ಇದರ ಬಳಕೆ ಹೆಚ್ಚಾಗಿತ್ತು. ಮೊದಮೊದಲು ವೈಬ್ರೆಂಟ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದ ಈ ಮೇಕಪ್ ಬರಬರುತ್ತಾ ಸಿನಿಮಾ ಜಗತ್ತನ್ನು ಆವರಿಸಿತು. ಆರಂಭದಲ್ಲಿ ವಿಯರ್ಡ್ ಮೇಕಪ್ ಎಂದು ಕರೆಸಿಕೊಂಡರೂ ನಿಧಾನಗತಿಯಲ್ಲಿ ಮೇಕಪ್ ವಿಧಾನ ಬದಲಾದಂತೆ ಲೈಟಾಗುತ್ತಾ ಹೋಯಿತು. ಆಕರ್ಷಕ ರೂಪ ಪಡೆದು ಪಾರ್ಟಿ ಮೇಕಪ್‌ಗಳ ಲಿಸ್ಟ್‌ನಲ್ಲಿ ಸೇರಿತು ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರೀಮಾ.
ಸೋಷಿಯಲ್ ಮೀಡಿಯಾ ಕ್ರೇಜ್
ಅಷ್ಟೇ ಏಕೆ? ಸೋಷಿಯಲ್ ಮೀಡಿಯಾದ ಬ್ಯೂಟಿ ಬ್ಲಾಗ್‌ಗಳಲ್ಲಿ ಇದೀಗ ಅಕ್ವಾ ಐ ಮೇಕಪ್ ಹಾಗೂ ಅದಕ್ಕೆ ಸೂಟ್ ಆಗುವಂತಹ ಐಡಿಯಾಗಳನ್ನು ಕ್ಲಿಕ್ಕಿಸಿ ಫೋಟೋ ಅಪ್‌ಲೋಡ್ ಮಾಡುವ ಕ್ರೇಝ್ ಕೂಡ ಹೆಚ್ಚಾಗಿದೆ. ಇದರಲ್ಲಿ ಕೆಲವರು ಅಕ್ವಾ ಐ ಮೇಕಪ್ ಅನ್ನು ಮೀನಿಗೆ ಹೋಲಿಸಿ ಫೋಟೋ ಕ್ಲಿಕ್ಕಿಸಿ ಅಪ್‌ಲೋಡ್ ಕೂಡ ಮಾಡುತ್ತಿದ್ದಾರೆ.
ನೀವೂ ಟ್ರೈ ಮಾಡಿ ನೋಡಿ
ಅಕ್ವಾ ಐ ಮೇಕಪ್‌ನಲ್ಲೆ ಲೈಟಾದಂತಹ ಶೇಡ್‌ಗಳನ್ನು ನೀವೂ ಟ್ರೈ ಮಾಡಬಹುದು. ಇದಕ್ಕಾಗಿ ಟ್ರೆಂಡಿ ಅಕ್ವಾ ಶೇಡ್ ಬಳಸಿ. ಇದಕ್ಕೆ ಸೂಟ್ ಆಗುವ ಡಿಸೈನರ್‌ವೇರ್ ಧರಿಸಿ. ಐ ಮೇಕಪ್ ಮಾಡುವ ಮುನ್ನ ಈ ಬಗ್ಗೆ ಬೇಸಿಕ್ ಜ್ಞಾನವಿರಲಿ. ನಿಮ್ಮಕಂಗಳಿಗೆ ತಕ್ಕಂತೆ ಮೇಕಪ್ ಮಾಡಬೇಕಾಗುತ್ತದೆ ಎಂದು ಸಲಹೆ ನೀಡುತ್ತಾರೆ ಮೇಕಪ್ ಆರ್ಟಿಸ್ಟ್ ಜುನೈನಾ.
ಇದನ್ನೂ ಓದಿ| Korean Beauty Trend: ಗ್ಲಾಸ್ ಸ್ಕಿನ್ ಲುಕ್ ಹಿಂದೆ ಬಿದ್ದ ಹುಡುಗಿಯರು