ಬೆಂಗಳೂರು: ಕ್ಯಾನ್ಸರ್ ಒಂದು ಮಾರಕವಾದ ಕಾಯಿಲೆಯಾಗಿದೆ. ಇದರಿಂದ ಬದುಕುಳಿದವರಿಗಿಂತ ಜೀವ ಕಳೆದುಕೊಂಡವರೇ ಹೆಚ್ಚು. ಹಾಗಾಗಿ ಜನರು ಕ್ಯಾನ್ಸರ್ (Breast Cancer) ಎಂದಾಗ ಬೆಚ್ಚಿ ಬೀಳುತ್ತಾರೆ. ಬಹಳ ಹಿಂದಿನ ಕಾಲದಲ್ಲಿ ಇದನ್ನು ಶ್ರೀಮಂತರ ರೋಗ ಎಂದು ಕರೆಯುತ್ತಿದ್ದರು. ಯಾಕೆಂದರೆ ಇದು ಹೆಚ್ಚು ಶ್ರೀಮಂತರಲ್ಲಿ ಕಂಡುಬರುತ್ತಿತ್ತು, ಆದರೆ ಇತ್ತೀಚಿನ ದಿಗಳಲ್ಲಿ ಕ್ಯಾನ್ಸರ್ ರೋಗ ಎಲ್ಲಾ ಜನರಲ್ಲೂ ಕಂಡುಬರುತ್ತಿದೆ.
ದೇಹದ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಶುರು ಮಾಡಿದಾಗ ಅದು ಕ್ಯಾನ್ಸರ್ ಆಗಿ ಬದಲಾಗುತ್ತದೆ. ನಂತರ ಇದು ದೇಹದ ಇತರ ಭಾಗಗಳಿಗೂ ಹರಡುತ್ತದೆ. ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ. ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಮೆದುಳು ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮುಂತಾದ ಕ್ಯಾನ್ಸರ್ ಇದೆ. ಆದರೆ ಇವುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಇದು ಜೀವವನ್ನೇ ತೆಗೆಯುತ್ತದೆ.
ಆದರೆ ಸ್ತನ ಕ್ಯಾನ್ಸರ್ ಈಗ ಜಗತ್ತಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವಂತಹ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಸಾವನಪ್ಪುತ್ತಿದ್ದಾರೆ. ಹಾಗಾಗಿ 2040ರ ವೇಳೆ ಸ್ತನ ಕ್ಯಾನ್ಸರ್ ಮಿಲಿಯನ್‌ಗಟ್ಟಲೆ ಜನರನ್ನು ಬಲಿ ತೆಗೆದುಕೊಳ್ಳಲಿದೆ ಎಂಬುದಾಗಿ ಆಯೋಗವೊಂದು ಕಂಡುಕೊಂಡಿದೆ.
ಲ್ಯಾನ್ಸೆಟ್ ಆಯೋಗದ ಪ್ರಕಾರ, 2020ರಲ್ಲಿ ಸುಮಾರು 7.8 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ, ಮತ್ತು ಸುಮಾರು 685000 ಮಹಿಳೆಯರು ಈ ಕಾಯಿಲೆಯಿಂದ ಜೀವ ಕಳೆದುಕೊಂಡಿದ್ದಾರೆ. ಹಾಗಾಗಿ ಇಡೀ ಜಗತ್ತಿನಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು 2020 ರಲ್ಲಿ 2.3 ಮಿಲಿಯನ್ ನಿಂದ 2040ರ ವೇಳೆಗೆ 3 ಮಿಲಿಯನ್ ಗಿಂತಲೂ ಹೆಚ್ಚಾಗಬಹುದು. ಹಾಗೇ 2040ರ ವೇಳೆಗೆ ಸ್ತನ ಕ್ಯಾನ್ಸರ್ ನಿಂದ ಸಾವನಪ್ಪಿದವರ ಸಂಖ್ಯೆ ವರ್ಷಕ್ಕೆ 1 ಮಿಲಿಯನ್ ಆಗುತ್ತದೆ. ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದದ ದೇಶದ ಜನರು ಇದಕ್ಕೆ ಬಲಿಯಾಗಲಿದ್ದಾರೆ ಎಂಬುದಾಗಿ ತಿಳಿಸಿದೆ.
ಹಾಗಾಗಿ ಸ್ತನ ಕ್ಯಾನ್ಸರ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಆಯೋಗವು ರೋಗಿಗಳು ಮತ್ತು ಆರೋಗ್ಯ ಸಲಹೆಗಾರರ ನಡುವೆ ಉತ್ತಮ ಸಂವಹನ ನಡೆಸಲು ನಿರ್ಣಯಿಸಿದೆ. ಆ ಮೂಲಕ ರೋಗ ಲಕ್ಷಣಗಳು, ಚಿಕಿತ್ಸೆ ಮತ್ತು ಉತ್ತಮ ಜೀವನಶೈಲಿಯನ್ನು ಅನುಸರಿಸುವುದರ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.
ಅದಕ್ಕಾಗಿ ಪ್ರತಿಯೊಬ್ಬ ಆರೋಗ್ಯ ಸಲಹೆಗಾರರು ಕೆಲವು ರೀತಿಯ ಸಂವಹನ ಕೌಶಲ್ಯಗಳ ತರಬೇತಿಯನ್ನು ಪಡೆಯಬೇಕು. ಇದರಿಂದ ರೋಗಗಳು ಮತ್ತು ಆರೋಗ್ಯ ಸಲಹೆಗಾರರ ನಡುವಿನ ಸಂವಹನದ ಗುಣಮಟ್ಟದಲ್ಲಿ ಸುಧಾರಣೆ ಕಂಡುಬರುತ್ತದೆ. ಇದು ರೋಗಿಗಳ ಮೇಲೆ ಸಕರಾತ್ಮಕ ಪರಿಣಾಮ ಬೀರಬಹುದು ಎಂದು ಆಯೋಗವು ತಿಳಿಸಿದೆ.
ಇದನ್ನೂ ಓದಿ: Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್ ಆದೇಶ!
ಹಾಗೇ ಮಹಿಳೆಯರಿಗೆ ಹೆಚ್ಚು ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಮತ್ತು ಅವರು ತಮ್ಮ ಆರೈಕೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ನಿರ್ಧಾರ ಮಾಡಬೇಕು ಎಂದು ತಿಳಿಸಲಾಗಿದೆ.