ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಧುವಿನ ಹಣೆಯನ್ನು ಸಿಂಗರಿಸುವ ಬಿಂದಿ ನೋಡಲು ಆಕರ್ಷಕವಾಗಿ ಕಾಣಬೇಕು. ಅಷ್ಟು ಮಾತ್ರವಲ್ಲ, ಧರಿಸಿದ ಸೀರೆ ಹಾಗೂ ಉಡುಪಿಗೂ ಮ್ಯಾಚ್ ಆಗಬೇಕು. ಹೇಗೆಲ್ಲಾ ಬಿಂದಿಯನ್ನು ಮ್ಯಾಚ್ ಮಾಡಬಹುದು ಎಂಬುದರ ಬಗ್ಗೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ ಐದು ಐಡಿಯಾ ನೀಡಿದ್ದಾರೆ.
೧. ಅಗಲವಾಗಿರಲಿ ಬಿಂದಿ
ವಧುವಿನ ಹಣೆಯ ಅಗಲಕ್ಕೆ ಅನುಗುಣವಾಗಿ ಬಿಂದಿ ಹಚ್ಚಿಕೊಳ್ಳುವುದು ಸೂಕ್ತ. ಉದಾಹರಣೆಗೆ ಚಿಕ್ಕ ಹಣೆಗೆ ತುಂಬಾ ಅಗಲವಾದ ಬಿಂದಿ ಸೂಟ್ ಆಗದು. ನೋಡಲು ಬಿಂದಿ ಮಾತ್ರ ಕಾಣುತ್ತದೆ. ಹಾಗೆಯೇ ಅಗಲವಾದ ಹಣೆಗೆ ಚುಕ್ಕಿಯಂತಹ ಬಿಂದಿ ನಾಟ್ ಓಕೆ. ಸೋ ಹಣೆಗೆ ತಕ್ಕಂತೆ ಬಿಂದಿ ಆಯ್ಕೆ ಮಾಡುವುದು ಸೂಕ್ತ.
೨. ಸೀರೆ ಹಾಗೂ ಉಡುಪಿಗೆ ತಕ್ಕಂತಿರಲಿ
ಮದುವೆಯಲ್ಲಿ ವಧುವಿನ ಸೀರೆ ಹಾಗೂ ಉಡುಪುಗಳನ್ನು ಪರಿಗಣನೆಗೆ ತೆಗೆದುಕೊಂಡು ಬಿಂದಿ ಆಯ್ಕೆ ಮಾಡುವುದು ಸೂಕ್ತ. ಸೀರೆ ಡಿಸೈನರ್ ಬಿಂದಿಗಿಂತ ಸಾದಾ ಬಿಂದಿ ಚೆನ್ನಾಗಿ ಕಾಣುತ್ತದೆ. ಇನ್ನು ಲೆಹೆಂಗಾಗಳಿಗೆ ಡಿಸೈನರ್ ಬಿಂದಿ ಸೂಕ್ತ.
೩. ಮ್ಯಾಚಿಂಗ್ ಮಾಡಿ ನೋಡಿ
ಮದುವೆಯಲ್ಲಿ ವಧು ಬಹುತೇಕ ಡಾರ್ಕ್ ಶೇಡ್‌ನ ಸೀರೆ ಧರಿಸುವುದು ಹೆಚ್ಚು. ಅದಕ್ಕೆ ಹೊಂದುವಂಥದ್ದನ್ನು ಧರಿಸಬಹುದು. ಕಾಂಟ್ರಾಸ್ಟ್ ವರ್ಣದ ಬಿಂದಿ ಇರಿಸಬಹುದು. ಹಾಗೆಂದು ಬಿಳಿ ವರ್ಣದ ಆಯ್ಕೆ ಬೇಡ. ಫಂಕಿ ಲುಕ್ ನೀಡುತ್ತದೆ.
೪. ಸಾದಾ ಬೆಂಗಾಲಿ ಬಿಂದಿ
ಟ್ರೆಡಿಷನಲ್ ಲುಕ್ ನೀಡಲು ವಧು ತಮಗಿಷ್ಟವಾದ ಬೆಂಗಾಲಿ ಬಿಂದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನೋಡಲು ಲಕ್ಷಣವಾಗಿಯೂ ಕಾಣುತ್ತದೆ. ಮದುವೆಯ ಫೋಟೋಗಳಲ್ಲೂ ಚೆನ್ನಾಗಿ ಕಾಣುತ್ತದೆ.
೫. ವಧುವಿಗೆ ಕೆಂಪು ಬಿಂದಿ
ವಧುವಿನ ಉಡುಪಿಗೆ ತಕ್ಕಂತೆ ಬಿಂದಿಗಳನ್ನು ಬಳಸಬಹುದಾದರೂ ಮುಖ್ಯ ಕಾರ್ಯಕ್ರಮಕ್ಕೆ ಮಾತ್ರ ಆದಷ್ಟೂ ಕೆಂಪು, ಮರೂನ್ ವರ್ಣದ ಬಿಂದಿಗಳನ್ನು ಬಳಸಲಾಗುತ್ತದೆ. ಇದು ನಮ್ಮ ಸಂಪ್ರದಾಯ. ಕಪ್ಪು ಬಿಂದಿಯನ್ನು ಮದುವೆ ಸಂದರ್ಭದಲ್ಲಿ ಬಳಸುವುದಿಲ್ಲ. ಕೆಂಪು ಬಿಂದಿ ಶುಭ ಶಕುನವೆನ್ನಲಾಗುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Season Fashion: ಸಿಂಪಲ್ ಕುರ್ತಾಗಳಿಗೆ ಹೆಚ್ಚಿದ ಬೇಡಿಕೆ