ಮದುವೆ ಸೀಜನ್ ಎಲ್ಲ ಕಡೆ ಇರುವಾಗ, ಕಣ್ಣಿಗೆ ಮೊದಲು ನಾಟುವುದು ಚೆಂದದ ಡ್ರೆಸ್‌ಗಳು, ಲೆಹೆಂಗಗಳು. ಮದುಮಗಳನ್ನ ಲೆಹೆಂಗದಲ್ಲಿ ನೋಡುವಾಗ ತಕ್ಷಣ ಕಣ್ಣಿಗೆ ಬೀಳುವುದು ಡಿಸೈನ್ಸ್ ಹಾಗೂ ಬಣ್ಣಗಳು. ಸಾಕಷ್ಟು ತರಹದ ಲೆಹೆಂಗಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಡಿಫರೆಂಟ್ ಲುಕ್ ಲೆಹೆಂಗಾವನ್ನೇ ಖರೀದಿಸುವುದು ಸಾಮಾನ್ಯ. ಮದುಮಗಳ ಲೆಹೆಂಗ ಖರೀದಿ ಮಾಡೋ ಮೊದಲು ಯಾವೆಲ್ಲ ಟಿಪ್ಸ್ ಇದೆ ಇಲ್ಲಿ ನೋಡಬಹುದು.
ಡಿಸೈನನ್ನು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿ
ಆನ್‌ಲೈನ್ ಶಾಪಿಂಗ್ ಇಷ್ಟಪಡದವರು ಯಾರಿದ್ದಾರೆ ಹೇಳಿ. ಆನ್‌ಲೈನ್‌ನಲ್ಲಿ ಸಾಕಷ್ಟು ಚಾಯ್ಸಸ್ ಬಟ್ಟೆಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಲೆಹೆಂಗ ಖರೀದಿಸುವ ಮುನ್ನ ಒಮ್ಮೆ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ, ಡಿಸೈನ್ಸ್ ಮತ್ತು ಕಲರ್, ಎಲ್ಲ ತರಹದ ಎಂಬ್ರಾಯ್‌ಡರಿ ವರ್ಕ್ಸ್‌ಗಳನ್ನು ನೋಡಬಹುದು. ಇದರಿಂದ ಒಂದು ಐಡಿಯಾ ಸಿಗುತ್ತದೆ ಮತ್ತು ಖರೀದಿ ಮಾಡಲೂ ತುಂಬಾನೆ ಸುಲಭ.
ಬಜೆಟ್ ಫಿಕ್ಸ್ ಮಾಡಿಕೊಳ್ಳಿ
ಪ್ರತಿ ಮದುಮಗಳ ಲೆಹೆಂಗಗಳ ಬಜೆಟ್ ವಿಭಿನ್ನವಾಗಿರುತ್ತದೆ. ಕೊಳ್ಳುವ ಮುನ್ನ ಬಜೆಟ್ ಫಿಕ್ಸ್ ಮಾಡಿಕೊಳ್ಳಬೇಕು. ಒಂದು ವೇಳೆ ಬಜೆಟ್ ಫಿಕ್ಸ್ ಆಗಿದ್ದರೆ, ಆಯಾ ಬೆಲೆಗೆ ಅನುಗುಣವಾಗಿ ನಾವು ಲೆಹೆಂಗಾ ಸೆಲೆಕ್ಷನ್ ಮಾಡಿಕೊಳ್ಳಬಹುದು.
ಸಮಯವನ್ನು ನಿಗದಿಪಡಿಸಿಕೊಳ್ಳಿ
ಮದುಮಗಳ ಲೆಹೆಂಗಾ ಖರೀದಿ ಮಾಡಲು ಸಮಯವು ಬೇಕೇ ಬೇಕಾಗುತ್ತದೆ. ಮದುವೆಗೆ ಆರು ತಿಂಗಳು ಇರುವಾಗಲೇ ಸೆಲೆಕ್ಷನ್ ಮಾಡಿಕೊಂಡು ತಯಾರಿ ಮಾಡಿಕೊಳ್ಳುವುದು ಬಹಳ ಒಳ್ಳೆಯದು. ಮತ್ತು ಖರೀದಿ ಮಾಡುವಾಗಲೂ ಹಲವಾರು ಡಿಸೈನ್ಸ್ ಮತ್ತು ಚೆಂದವಾಗಿ ಕಾಣಿಸುವ, ಕಮ್ಫರ್ಟೆಬಲ್ ಡ್ರೆಸ್‌ಗಳನ್ನು ಹುಡುಕಿಕೊಂಡು ಖರೀದಿ ಮಾಡಿದರೆ ಇನ್ನೂ ಉತ್ತಮ.
ಇದನ್ನೂ ಓದಿ | ಕೆಜಿಎಫ್ ಸ್ಟಾರ್ ಯಶ್ ಲಕ್ಷುರಿ ಲೈಫ್‌ಸ್ಟೈಲ್ ಹೇಗಿದೆ ನಿಮಗೆ ಗೊತ್ತೆ?
ಕಂಫರ್ಟೇಬಲ್ ಫ್ಯಾಬ್ರಿಕ್ ಹುಡುಕಿಕೊಳ್ಳಿ :
ಮದುವೆಯ ದಿನ ಚೆಂದವಾಗಿ ಕಾಣಿಸುವುದು ಮುಖ್ಯ. ಹೆಚ್ಚು ಅವಧಿಗೆ ಈ ಡ್ರೆಸ್ ಧರಿಸಬೇಕಿರುವುದರಿಂದ, ಮೊದಲು ಧರಿಸುವವರ ಕಮ್ಫರ್ಟೆಬಲ್ ತುಂಬಾ ಮುಖ್ಯ. ಫ್ಯಾಬ್ರಿಕ್‌ಗಳು ಮತ್ತು ಔಟ್‌ಫಿಟ್ ಮೊದಲು ಮದುಮಗಳಿಗೆ ಇಷ್ಟ ಆಗಬೇಕು. ಅದಾಗ ಮಾತ್ರ ಸಂಭ್ರಮಪಡಲು ಸಾಧ್ಯ.
ಹವಾಮಾನಕ್ಕೆ ಅನುಗುಣವಾಗಿ ಖರೀದಿಸಿ
ಫ್ಯಾಬ್ರಿಕ್ ಅನ್ನು ಯಾವ ವೆದರ್‌ನಲ್ಲಿ ಧರಿಸುತ್ತೀರಿ ಎನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಒಂದು ವೇಳೆ ಬೇಸಿಗೆಯಲ್ಲಿ ಫಂಕ್ಷನ್ ಇದ್ದರೆ ಹಗುರವಾದ ಲೆಹೆಂಗ ಮತ್ತು ತುಂಬಾ ಸಿಂಪಲ್ ಆಗಿ ಗ್ರ್ಯಾಂಡ್ ಆಗಿ ಕಾಣುವ ಲೆಹೆಂಗವನ್ನು ಧರಿಸಿ.
ಬಟ್ಟೆಗೆ ಗಮನ ಕೊಡಿ
ಲೆಹೆಂಗ ಡಿಸೈನ್ ಮತ್ತು ಬ್ಲೌಸ್, ದುಪ್ಪಟ್ಟಾ, ಹಾಗೂ ಅದಕ್ಕೆ ಸೂಕ್ತವಾದ ಒಡವೆಗಳು ತುಂಬಾ ಮುಖ್ಯವಾಗಿರುತ್ತದೆ. ಲೆಹೆಂಗ ಖರೀದಿಸುವ ಮುನ್ನ ದುಪ್ಪಟ್ಟಾ ಗ್ರ್ಯಾಂಡ್ ಆಗಿ ಇದೆಯಾ ಎಂಬುದು ನೋಡಿಕೊಳ್ಳಿ. ಹಾಗೂ ದುಪ್ಪಟ್ಟ ಎಂಬ್ರಾಡರಿ ವರ್ಕ್ಸ್ ಚೆನ್ನಾಗಿ ಕಾಣಿಸುತ್ತಿದ್ದೆಯಾ ಎಂಬುದು ಗಮನಹರಿಸಿ. ಕಟ್ ಟೈಪ್ ಬರುವಂತಹ ಬ್ಲೌಸ್ ಕೂಡ ಲೆಹಂಗಾಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಹಾಗೂ ಧರಿಸುವ ಮುನ್ನ ಒಂದು ಸಲ ಟ್ರಯಲ್ ಮಾಡಿ ನಿರ್ಧರಿಸಿ.
ಅಲ್‌ಟ್ರೇಷನ್ ಮಾಡಿಸಲು ಸಮಯ ಇಟುಕೊಳ್ಳಿ
ಮದುವೆ ಹತ್ತಿರ ಬಂದಾಗ ಲೆಹಂಗ ಅಲ್‌ಟ್ರೇಷನ್ ಮಾಡಲು ಮುಂದಾಗಬೇಡಿ. ಅದಕ್ಕೆ ಅಂತಲೇ ಪ್ರತ್ಯೇಕ ಸಮಯ ಇಟ್ಟುಕೊಳ್ಳಿ. ಔಟ್‌ಫಿಟ್, ಸ್ಟಿಚಿಂಗ್ ಅನ್ನು ಸರಿಯಾಗಿ ಅಲ್‌ಟ್ರೇಟ್ ಮಾಡಿಕೊಳ್ಳಿ. ಸುಂದರವಾದ ಕಸೂತಿ ಹಾಗೂ ಭಿನ್ನ ಬಗೆಯ ಆಕರ್ಷಕ ಬಟ್ಟೆಗಳಿಂದ ಸಿದ್ಧಗೊಳಿಸಲಾದ ಲೆಹೆಂಗಗಳು ಕ್ಲಾಸಿ ಲುಕ್ ನೀಡುತ್ತವೆ.
ಇದನ್ನೂ ಓದಿ | Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು