ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಯರ್ಡ್ ಮೇಕಪ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳು ಹಾಲೋವೀನ್ ಪಾರ್ಟಿಯಲ್ಲಿ ಪಾಲ್ಗೊಂಡು ಸೆಲೆಬ್ರೇಟ್ ಮಾಡಿದರು. ನೋಡಲು ಬೆಚ್ಚಿ ಬೀಳಿಸುವಂತಹ ತೀರಾ ಭಯಾನಕ ಮೇಕಪ್ ಅಲ್ಲದಿದ್ದರೂ ನೋಡುಗರಿಗೆ ವಿಯರ್ಡ್ ಎಂದೆನಿಸುವ ಪಾರ್ಟಿ ಮೇಕಪ್‌ನಲ್ಲಿ ಬಾಲಿವುಡ್‌ನ ಇ- ಜನರೇಷನ್ ಸೆಲೆಬ್ರಿಟಿಗಳು ಕಾಣಿಸಿಕೊಂಡರು.
ಮುಂಬಯಿಯಲ್ಲಿ ನಡೆದ ಹಾಲೋವೀನ್ ಪಾರ್ಟಿಯಲ್ಲಿ ಕೆಲವು ಸೆಲೆಬ್ರಿಟಿಗಳನ್ನು ಹೊರತುಪಡಿಸಿದರೆ ಇತರರು ಕೊಂಚ ಬೆಚ್ಚಿ ಬೀಳುವಂತಹ ಕಾಸ್ಟ್ಯೂಮ್ ಹಾಗೂ ಸ್ಪೂಕಿ ಲುಕ್ ನೀಡುವ ವಿಯರ್ಡ್ ಮೇಕಪ್ ಮಾಡಿದ್ದರು. ಪಾರ್ಟಿಯಲ್ಲಿ ನೆರೆದಿದ್ದ ಬಹುತೇಕರೆಲ್ಲರೂ ಸ್ಪೂಕಿ ಲುಕ್‌ಗೆ ಶರಣಾಗಿದ್ದರು. ಗೆಸ್ಟ್ ಲಿಸ್ಟ್‌ನಲ್ಲಿ ಆಗಮಿಸಿದ್ದ, ಬಾಲಿವುಡ್ ತಾರೆಯರು ಮಾತ್ರ ನಾರ್ಮಲ್ ಮೇಕಪ್‌ನಲ್ಲಿ ಕೊಂಚ ಬದಲಾವಣೆ ಮಾಡಿದ್ದರು.
ಜಾಹ್ನವಿ -ಅನನ್ಯಾ-ಸಾರಾ ಹಾಲೋವೀನ್ ಲುಕ್
ನಟಿ ಜಾಹ್ನವಿ ಕಪೂರ್ ಮೇಕಪ್ ಲುಕ್ ಎಂದಿಗಿಂತ ಕಂಪ್ಲೀಟ್ ಡಿಫರೆಂಟ್ ಆಗಿತ್ತು. ಡಾರ್ಕ್ ಲಿಪ್‌ಸ್ಟಿಕ್, ಡಾರ್ಕ್ ಐ ಶ್ಯಾಡೋ, ಸ್ಲೋಪಿ ಸ್ಟ್ರೇಟ್ ಹೇರ್‌ಸ್ಟೈಲ್ ಹಾಗೂ ಬ್ಲಾಕ್ ಬಾಡಿಕಾನ್ ಫ್ರಾಕ್ ಹಾಲಿವುಡ್ ಸ್ಟಾರ್‌ಗಳ ಲುಕ್ಕನ್ನು ಇಮಿಟೇಟ್ ಮಾಡಿದಂತಿತ್ತು ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್ನಿ.
ಇನ್ನು, ಅನನ್ಯಾ ಪಾಂಡೆ ಲುಕ್ ಮಾತ್ರ ಇನ್ನು ಬಬ್ಲಿ ಬೇಬಿಯಂತಿತ್ತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಕಭಿ ಖುಷಿ ಕಭಿ ಗಮ್ ಚಿತ್ರದಲ್ಲಿ ಕರೀನಾ ಕಪೂರ್ ಧರಿಸಿದ್ದ ಟೂ ಪೀಸ್ ಸಿಕ್ವೀನ್ ಕ್ರಾಪ್ ಟಾಪ್ ಹಾಗೂ ಅಸ್ಸೆಮ್ಮಿಟ್ರಿಕಲ್ ಮಿನಿ ಸ್ಕರ್ಟ್‌ನಲ್ಲಿ ಸಾಫ್ಟ್ ಲುಕ್‌ನಲ್ಲಿ ಅನನ್ಯಾ ಕಾಣಿಸಿಕೊಂಡರು.
ಸಾರಾ ಅಲಿ ಖಾನ್, ಜಾಹ್ನವಿ ಕಪೂರ್‌ರಷ್ಟು ವಿಯರ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ, ಸ್ನೇಹಿತೆಯರಿಗೆ ಸಾಥ್ ನೀಡುವ ಸಲುವಾಗಿ ಡಾರ್ಕ್ ಕಾಜಲ್, ಡಾರ್ಕ್ ಮೇಕಪ್ ಹಾಗೂ ಬ್ಲಾಕ್ ಡ್ರೆಸ್‌ನಲ್ಲಿದ್ದರು. ಇದು ಪ್ಲೆಸೆಂಟ್ ಲುಕ್ ನೀಡಿತ್ತು ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ನಟಿ ಗಾರ್ಜಿಯಾ ಕೂಡ ಹಾಲೋವೀನ್ ಪಾರ್ಟಿಯಲ್ಲಿ ಗ್ಲಾಮರಸ್ ಆಗಿ ಪಾಲ್ಗೊಂಡಿದ್ದರು. ವಿಯರ್ಡ್ ಲುಕ್ ಬದಲು ಶೋಲ್ಡರ್ ಲೆಸ್ ಕಾರ್ಪಸ್ ಬ್ಲಾಕ್‌ಟಾಪ್ ಹಾಗೂ ಪ್ಯಾಂಟ್‌ನಲ್ಲಿ ಅವರು ಸೆಕ್ಸಿ ರ್ಯಾಪರ್ ಲುಕ್‌ನಲ್ಲಿ ನೆರೆದಿದ್ದವರ ಹುಬ್ಬೇರಿಸಿದ್ದರು.
ಕಣ್ಣಿಗೆ ಕಾಜಲ್ ಹಚ್ಚಿದ್ದ ಆಯಾನ್ ಖಾನ್
ಇನ್ನು ಬಾಲಿವುಡ್ ಬಾದ್‌ಶಾ ಕಿಂಗ್ ಖಾನ್ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಕೂಡ ಸಿಂಪಲ್ ಹಾಲೋವೀನ್ ಲುಕ್‌ನಲ್ಲಿ ಕಾಣಿಸಿಕೊಂಡರು. ಕಣ್ಣಿಗೆ ಡೀಪ್ ಕಾಜಲ್ ಹಚ್ಚಿದ್ದ ಅವರು, ಕುತ್ತಿಗೆ ಮೇಲೆ ಗಾಯದ ಕಲೆಗಳ ಮೇಕಪ್ ಮಾಡಿದ್ದರು.
ಮಕ್ಕಳ ಜತೆ ನೇಹಾ ದೂಪಿಯಾ ಪಾರ್ಟಿ
ನಟಿ ನೇಹಾ ದುಪಿಯಾ ಹಾಗೂ ಪತಿ ಅಂಗದ್ ಬೇಡಿ ಮಕ್ಕಳೊಂದಿಗೆ ಹಾಲೋವೀನ್ ಕ್ಯೂಟ್-ಹಾರರ್ ಮಿಕ್ಸ್ ಲುಕ್‌ನಲ್ಲಿ ಕಾಣಿಸಿಕೊಂಡು ಮನೆಯಲ್ಲೆ ಪಾರ್ಟಿ ಮಾಡಿ, ಎಂಜಾಯ್ ಮಾಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Halloween dressing tips | ದೆವ್ವ, ಭೂತದ ಫ್ಯಾಷನ್‌ಗೆ ಮುನ್ನ 5 ವಿಷಯ ಗಮನದಲ್ಲಿರಲಿ