ಸಂದರ್ಶನ: ಶೀಲಾ ಸಿ. ಶೆಟ್ಟಿ
ಇಂದು ಫ್ಯಾಷನ್ ಪೇಜೆಂಟ್‌ಗಳು ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುತ್ತಿವೆ. ಭವಿಷ್ಯದ ಕನಸನ್ನು ಕಾಣಲು ಸಹಕರಿಸುತ್ತಿವೆ ಎನ್ನುತ್ತಾರೆ ಮಿಸೆಸ್ ಗ್ಲೋಬ್ ಇಂಡಿಯಾ ಟೈಟಲ್ ವಿಜೇತೆಯಾಗಿರುವ ವೀಣಾ ಜೈನ್. ಇದೀಗ ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ (Mrs. International Super Queen) ಪೇಜೆಂಟ್‌ನ ನ್ಯಾಷನಲ್ ಡೈರೆಕ್ಟರ್ ಕೂಡ ಆಗಿರುವ ಅವರು ಈ ಬಾರಿಯ ವಿಸ್ತಾರ ನ್ಯೂಸ್‌ನ ಸೆಲೆಬ್ರೆಟಿ ಫ್ಯಾಷನ್ ಕಾರ್ನರ್‌ನಲ್ಲಿ (Celebrity Fashion Corner) ಮಾತನಾಡಿದ್ದಾರೆ.
ಫ್ಯಾಷನ್ ಲೋಕ ಆತ್ಮವಿಶ್ವಾಸ ಮೂಡಿಸುವಲ್ಲಿ ನಿರತವಾಗಿವೆ ಎನ್ನುವ ಮಾತನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಾ?
ಹೌದು. ಖಂಡಿತ ಸಮರ್ಥಿಸಿಕೊಳ್ಳುತ್ತೇನೆ. ಯಾಕೆಂದರೆ, ಫ್ಯಾಷನ್ ಪೇಜೆಂಟ್‌ಗಳಲ್ಲಿ (Fashion pageant) ಪಾಲ್ಗೊಳ್ಳುವ ಪ್ರತಿ ಮಹಿಳೆಯು ಗೆಲ್ಲುವ ಹಾದಿಯಲ್ಲಿ ಪ್ರತಿಯೊಂದನ್ನು ಕಲಿಯುತ್ತಾಳೆ. ಕಲಿಯುವ ಭರದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾಳೆ. ಮುಂದೊಮ್ಮೆ ಈ ಕ್ಷೇತ್ರದಲ್ಲಿ ಮುಂದುವರೆಯಲಿ ಬಿಡಲಿ ಆತ್ಮವಿಶ್ವಾಸದಿಂದ ಮುನ್ನೆಡೆಯುತ್ತಾಳೆ. ಇತರರನ್ನು ಮುನ್ನೆಡೆಸುತ್ತಾಳೆ.
ಫ್ಯಾಷನ್ ಪೇಜೆಂಟ್‌ಗಳಿಂದಾಗುವ ಪ್ರಯೋಜನಗಳ್ಯಾವುವು?
ಫ್ಯಾಷನ್ ಪೇಜೆಂಟ್‌ಗಳಿಂದ (Fashion pageant) ಪ್ರಯೋಜನ ಎಂದು ಹೇಳುವುದಕ್ಕಿಂತ ಇದರಲ್ಲಿ ಭಾಗವಹಿಸಿದವರಿಗೆ ಹೊರಗಿನ ಪ್ರಪಂಚದ ಅರಿವಾಗುತ್ತದೆ. ಆಕೆಯ ಕುಟುಂಬದಲ್ಲಿ ಗೌರವ ಭಾವನೆ ಹೆಚ್ಚಾಗುತ್ತದೆ. ಎಲ್ಲರಿಗಿಂತ ಹೆಚ್ಚಾಗಿ ಐಡೆಂಟಿಟಿ ದೊರೆಯುತ್ತದೆ.
ಬಹಳಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿರುವ ನೀವು ಕಲಿತೆದ್ದೇನು?
ಫ್ಯಾಷನ್ ಕ್ಷೇತ್ರದ ಒಂದೊಂದು ಹೊಸತನವನ್ನು ತನ್ನದಾಗಿಸಿಕೊಂಡಿದ್ದೇನೆ. ಪೇಜೆಂಟ್ ಮೂಲಕ ಹೊಸತನ್ನು ನೀಡುವ ಉತ್ಸಾಹದಲ್ಲಿದ್ದೇನೆ.
ಬೆಂಗಳೂರಿನಲ್ಲಿ ಫ್ಯಾಷನ್ ಕ್ಷೇತ್ರ ಹೇಗೆ ಬೆಳೆಯುತ್ತಿದೆ?
ಉದ್ಯಾನನಗರಿಯಲ್ಲಿ ಇದೀಗ ಫ್ಯಾಷನ್ ಕ್ಷೇತ್ರ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಒಮ್ಮೊಮ್ಮೆ ಫ್ಯಾಷನ್ ಕ್ಷೇತ್ರದ ಕಡೆ ಗಮನ ಹರಿಸಿದಲ್ಲಿ ಇಲ್ಲಿನ ಯಾವುದೇ ಫ್ಯಾಷನ್ ಶೋಗಳು ವಿದೇಶಿ ಶೋಗಳಿಗಿಂತ ಕಡಿಮೆ ಇಲ್ಲ ಎಂಬಂತೆ ನಡೆಯುತ್ತವೆ.
ಫ್ಯಾಷನ್‌ವೇರ್‌ಗಳಲ್ಲಿ ನೀವು ಬಯಸುವುದೇನು?
ಕಂಫರ್ಟಬಲ್ ಆಗಿರುವುದನ್ನು ಬಯಸುತ್ತೇನೆ. ಧರಿಸಿದಾಗ ನೋಡುವುದಕ್ಕಿಂತ ಕಂಫರ್ಟಬಲ್ ಆಗುವುದನ್ನು ಆಯ್ಕೆ ಮಾಡುತ್ತೇನೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ನಟಿ ಶಿಲ್ಪಾ ಶೆಟ್ಟಿಯ ಪೆಪ್ಲಮ್ ಸೀರೆ ಬ್ಲೌಸ್ ಫ್ಯಾಷನ್‌ಗೆ ಮಾನಿನಿಯರು ಫಿದಾ!