ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೌಂದರ್ಯಗೌಡ ಈಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಬ್ಯುಸಿಯಾಗಿರುವವರು. ಈಗಾಗಲೇ “ಮಾಂಕ್ ದಿ ಯಂಗ್” ಸಿನಿಮಾ ಮೂಲಕ ಈ ಕ್ಷೇತ್ರಕ್ಕೂ ಕಾಲಿಟ್ಟಿರುವ ಸೌಂದರ್ಯ ಮೂಲತಃ ಹಾಸನದವರು. ಮಿಸ್ ಗ್ಲೋಬ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಇವರು ಮಿಸ್ ಕರ್ನಾಟಕ, ಮಿಸ್ ಕಾಂಜಿನಿಯಾಲಿಟಿ, ಮಿಸ್ ರನ್‌ವೇ ಮಾಡೆಲ್ ಯೂನಿವರ್ಸ್ ಹೀಗೆ ನಾನಾ ಟೈಟಲ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಸೆಲೆಬ್ರಿಟಿ ಫ್ಯಾಷನ್ ಕಾರ್ನರ್‌ನಲ್ಲಿ ವಿಸ್ತಾರದೊಂದಿಗೆ ತಮ್ಮ ಫ್ಯಾಷನ್ ಜರ್ನಿ ಹಾಗೂ ಮಾಡೆಲಿಂಗ್ ಜಗತ್ತಿನ ಬಗ್ಗೆ ಮಾತನಾಡಿದ್ದಾರೆ.
*ಮಾಡೆಲಿಂಗ್ ಜಗತ್ತಿಗೆ ಬರಲು ಕಾರಣಗಳೇನು ?
ಮೊದಲಿನಿಂದಲೂ ನನಗೆ ಕ್ರಿಯೇಟಿವ್ ಇರುವ ಕ್ಷೇತ್ರದಲ್ಲಿ ಬ್ಯುಸಿಯಾಗಿರಬೇಕೆಂಬ ಆಸೆಯಿತ್ತು. ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟೆ.
*ಮಾಡೆಲ್ ಆಗಿರುವ ನೀವು ನಿಮ್ಮ ಕ್ಷೇತ್ರದಲ್ಲಿ ಯಾವ ಬಗೆಯ ಸವಾಲುಗಳನ್ನು ಎದುರಿಸಿದ್ದೀರಾ?
ನನಗೆ ಇಲ್ಲಿಯವರೆಗೆ ಯಾವುದೇ ರೀತಿಯ ಸವಾಲುಗಳು ಎದುರಾಗಿಲ್ಲ! ಎಲ್ಲವನ್ನೂ ನಾನೇ ನಿಭಾಯಿಸಿದ್ದೇನೆ. ನಾನು ಎಲ್ಲರೊಂದಿಗೂ ಬೆರೆಯುತ್ತೇನೆ. ಇದೇ ರೀತಿ ನಾನು ಸ್ಪರ್ಧೆಗೆ ಹೋದ ಕಡೆಯೂ ಕೂಡ ನನ್ನ ಕೋ ಮಾಡೆಲ್‌ಗಳೊಂದಿಗೆ ಸ್ನೇಹಿತಳಾಗಿ ಎಲ್ಲರೊಂದಿಗೂ ಇದ್ದುದ್ದರಿಂದ ನನಗೆ ಆದಷ್ಟೂ ಎಲ್ಲರಿಂದಲೂ ಬೆಂಬಲವೇ ಸಿಕ್ಕಿದೆ.
*ಪ್ರೊಫೆಷನಲ್ ಮಾಡೆಲ್ ಆಗಿರುವ ನೀವು ಮುಂಬರುವ ಮಾಡೆಲ್‌ಗಳಿಗೆ
ಯಾವ ಬಗೆಯ ಟಿಪ್ಸ್ ನೀಡುತ್ತೀರಾ?
ಯಾವುದೇ ಕಾಂಪಿಟೇಷನ್‌ನಲ್ಲಿ ಮೊದಲು ಭಾಗವಹಿಸಿ. ಸೋಲು-ಗೆಲುವಿನ ಬಗ್ಗೆ ನಂತರ ಯೋಚಿಸಿ. ಪ್ರಯತ್ನಿಸುವುದನ್ನು ಬಿಡಬೇಡಿ. ಸೌಂದರ್ಯದ ಜತೆಗೆ ಆತ್ಮವಿಶ್ವಾಸ ಇರುವುದು ಕೂಡ ಮುಖ್ಯವಾಗುತ್ತದೆ. ದುಡ್ಡು ಮಾಡಲು ಈ ಕ್ಷೇತ್ರವನ್ನು ಚೂಸ್ ಮಾಡಬೇಡಿ. ಡೌನ್ ಟು ಅರ್ತ್ ಆಗಿರಿ. ಎಲ್ಲರನ್ನೂ ಗೌರವಿಸಿ. ನಂತರ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ.
*ಸಿನಿಮಾ ಕ್ಷೇತ್ರಕ್ಕೆ ಕಾಲಿಡಲು ಮಾಡೆಲಿಂಗ್ ಚೂಸ್ ಮಾಡುವುದು ಹೆಚ್ಚಾಗಿದೆಯಾ?
ಇತ್ತೀಚೆಗೆ ಇದು ಸಾಮಾನ್ಯವಾಗುತ್ತಿದೆ. ಬಹಳಷ್ಟು ಮಾಡೆಲ್‌ಗಳು ಕೂಡ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಕೂಡ. ಬಾಲಿವುಡ್‌ನಲ್ಲಿದ್ದ ಈ ಟ್ರೆಂಡ್ ಇದೀಗ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ.
*ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಏನೇನಿದೆ?
ಮಾಡೆಲ್ ಆಗಿ ನಾನು ಎಷ್ಟೇ ಬಿಂದಾಸ್ ಉಡುಪುಗಳನ್ನು ಧರಿಸಿದರೂ ನನಗೆ ಮಾತ್ರ ಸೀರೆ ಉಡುವುದು ಇಷ್ಟ. ಅದರಲ್ಲೂ ಫೆಸ್ಟೀವ್ ಸೀಸನ್ ಬಂದರೇ ಸಾಕು ಸೀರೆಯುಟ್ಟು ಸಂಭ್ರಮಿಸುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಆಯಾ ಸಂದರ್ಭಕ್ಕೆ ಹಾಗೂ ಹಬ್ಬಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತೇನೆ. ನೋಸ್ ಪಿನ್ ಧರಿಸಲು ಇಷ್ಟ. ಹೆಚ್ಚು ಆಕ್ಸೆಸರೀಸ್ ಅಷ್ಟಾಗಿ ಇಷ್ಟಪಡುವುದಿಲ್ಲ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| London Fashion Week: ಕ್ವೀನ್ ಎಲಿಜಬೆತ್‌ಗೆ ಗೌರವಾರ್ಪಣೆ ಅರ್ಪಿಸಿ ಆರಂಭವಾದ ಲಂಡನ್ ಫ್ಯಾಷನ್ ವೀಕ್