Site icon Vistara News

Celebrity Fashion Corner: ಸಿಂಪಲ್ಲಾಗಿರಲಿ ಫಿಟ್ನೆಸ್‌ ಫ್ಯಾಷನ್‌

Celebrity Fashion Corner

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫಿಟ್ನೆಸ್‌ ಹಾಗೂ ಫ್ಯಾಷನ್‌ ನಾಣ್ಯದ ಎರಡು ಮುಖಗಳಿದ್ದಂತೆ ಎನ್ನುತ್ತಾರೆ ಫ್ಯಾಷನ್‌ ಹಾಗೂ ಫಿಟ್ನೆಸ್‌ ದಿವಾ ವನಿತಾ ಅಶೋಕ್‌. ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಫಿಟ್ನೆಸ್‌ ಪ್ರಿಯರು ತಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅಳವಡಿಸಿಕೊಳ್ಳಬೇಕು ಎಂದಿರುವ ವನಿತಾ ಅಶೋಕ್‌ ಅವರು ಫಿಟ್ನೆಸ್‌ ಫ್ಯಾಷನ್‌ ಬಗ್ಗೆ ವಿಸ್ತಾರದೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವಿಸ್ತಾರ: ನೀವು ಪಾಲಿಸುವ ಫ್ಯಾಷನ್‌ ಬಗ್ಗೆ ಸಂಕ್ಷೀಪ್ತವಾಗಿ ಹೇಳುತ್ತೀರಾ?

ವನಿತಾ ಅಶೋಕ್‌: ನಾನು ಫಿಟ್ನೆಸ್‌ ದಿವಾ ಮಾತ್ರವಲ್ಲ, ಬಹುತೇಕರಿಗೆ ರೋಲ್‌ ಮಾಡೆಲ್‌. ಹಾಗಾಗಿ, ನನ್ನ ಫ್ಯಾಷನ್‌ ಸ್ಟೇಟ್‌ಮೆಂಟ್‌ ಸದಾ ಇನ್ನೊಬ್ಬರಿಗೆ ಸ್ಫೂರ್ತಿಯಾಗಿರುವಂತೆ ಇರುತ್ತದೆ. ನನ್ನ ಬಾಡಿ ಮಾಸ್‌ ಇಂಡೆಕ್ಸ್‌ಗೆ ಸೂಟ್‌ ಆಗುವ ಫಿಟ್ಟಿಂಗ್‌ ಡಿಸೈನರ್‌ವೇರ್‌ ಧರಿಸುತ್ತೇನೆ. ನನ್ನ ಆಲ್‌ಟೈಮ್‌ ಫೇವರೆಟ್‌ ಲಿಸ್ಟ್‌ನಲ್ಲಿರುವ ಸ್ಟೇಟ್‌ಮೆಂಟ್‌ ಡ್ರೆಸ್‌ಗಳು, ಸ್ಟೇಟ್‌ಮೆಂಟ್‌ ಜುವೆಲ್ಸ್‌ ನನ್ನ ಪ್ರೊಫೆಷನನ್ನು ಹೈಲೈಟ್‌ ಮಾಡುತ್ತದೆ. ಧರಿಸುವ ಉಡುಪು ನನ್ನ ಫಿಟ್ನೆಸ್‌ಗೆ ಸಾಕ್ಷಿ ಎಂಬುದನ್ನು ಎಂದಿಗೂ ಮರೆಯುವುದಿಲ್ಲ. ನೋಡಲು ಎಲಿಗೆಂಟ್‌ ಲುಕ್‌ ನೀಡುವ ಡ್ರೆಸ್‌ಗಳು ನನ್ನ ಫ್ಯಾಷನ್‌ನಲ್ಲಿವೆ. ಅಂದಹಾಗೆ, ನಾನು ಸೆಲ್ಫ್‌ ಡಿಸೈನರ್‌ ಕೂಡ.

ವಿಸ್ತಾರ : ನಿಮ್ಮ ಫಿಟ್ನೆಸ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ವಿವರಿಸಿ.

ವನಿತಾ ಅಶೋಕ್‌ : ಫ್ಯಾಷನ್‌ಗೆ ತಕ್ಕಂತೆ ಮ್ಯಾಚ್‌ ಆಗುವ ಸ್ಟೈಲ್‌ ಸ್ಟೇಟ್‌ಮೆಂಟ್‌ ನನ್ನದು. ನನ್ನ ಬಾಡಿ ಟೈಪ್‌ಗೆ ಸೂಟ್‌ ಆಗುವಂತದ್ದನ್ನು ಧರಿಸುತ್ತೇನೆ. ವಾಕಿಂಗ್‌ಸ್ಟೈಲ್‌ನಿಂದಿಡಿದು ramp ವಾಕ್‌ವರೆಗೂ ನನ್ನದು ಯೂನಿಕ್‌ ಸ್ಟೈಲ್‌ ಎನ್ನಬಹುದು.

ವಿಸ್ತಾರ : ಫಿಟ್ನೆಸ್‌ ಪ್ರಿಯರಿಗೆ ನೀವು ಯಾವ ಬಗೆಯ ಸ್ಟೈಲಿಂಗ್‌ ಬಗ್ಗೆ ಸಲಹೆ ನೀಡಲು ಬಯಸುತ್ತೀರಾ?

ವನಿತಾ ಅಶೋಕ್‌ : ಫಿಟ್ನೆಸ್‌ ಫ್ರೀಕ್‌ಗಳು ಆದಷ್ಟೂ ತಂತಮ್ಮ ಬಾಡಿ ಮಾಸ್‌ ಇಂಡೆಕ್ಸ್‌ಗೆ ಸೂಟ್‌ ಆಗುವಂತಹ ಉಡುಪನ್ನು ಧರಿಸಬೇಕು. ಈಗಷ್ಟೇ ವಕೌಟ್‌ ಸ್ಟಾರ್ಟ್ ಮಾಡಿದ್ದಲ್ಲಿ ದೇಹ ಧಡೂತಿಯಾಗಿದ್ದಲ್ಲಿ. ತೀರಾ ಫಿಟ್ಟಿಂಗ್‌ ಉಡುಪನ್ನು ಧರಿಸಕೂಡದು. ನೋಡಲು ಇದು ಮುಜುಗರ ಉಂಟು ಮಾಡಬಹುದು. ಫಿಟ್ನೆಸ್‌ ಪ್ರಿಯರಿಗೆಂದೇ ಮಾರುಕಟ್ಟೆಯಲ್ಲಿ ಇಂದು ನಾನಾ ಬಗೆಯ ಉಡುಪುಗಳು ಬಂದಿವೆ. ಝಿರೋ ಸೈಝ್‌ನಿಂದಿಡಿದು ಪ್ಲಸ್‌ ಸೈಝ್‌ಗಳವರೆಗೂ ವೆರೈಟಿ ಡಿಸೈನ್‌ನ ಫಿಟ್ನೆಸ್‌ವೇರ್‌ಗಳು ದೊರೆಯುತ್ತವೆ. ಬ್ರಾಂಡೆಡ್‌ ಮಾತ್ರವಲ್ಲ, ಕೈಗೆಟಕುವ ಬೆಲೆಗಳಲ್ಲೂ ಇವು ಲಭ್ಯ.

ವಿಸ್ತಾರ : ಜಿಮ್‌ ಹಾಗೂ ಎರೋಬಿಕ್ಸ್‌ ಡ್ರೆಸ್ಸಿಂಗ್‌ ಸೆನ್ಸ್‌ ಬಗ್ಗೆ ಒಂದಿಷ್ಟು ಟಿಪ್ಸ್‌ ನೀಡುತ್ತೀರಾ?

ವನಿತಾ ಅಶೋಕ್‌ : ಖಂಡಿತಾ. ಬಹಳಷ್ಟು ಮಂದಿ ಜಿಮ್‌ ಹಾಗೂ ಎರೋಬಿಕ್ಸ್‌ ಮಾಡುವಾಗ ಸಲ್ವಾರ್‌ ಕಮೀಝ್‌ ಹಾಗೂ ಉದ್ದನೆಯ ಔಟ್‌ಫಿಟ್‌ಗಳನ್ನು ಧರಿಸುತ್ತಾರೆ. ಇದು ನಾಟ್‌ ಓಕೆ. ಇಂದು ಆಯಾ ವಯೋಮಾನಕ್ಕೆ ಮ್ಯಾಚ್‌ ಆಗುವಂತಹ ಜಿಮ್‌ ಔಟ್‌ಫಿಟ್‌ಗಳು ಲಭ್ಯ ಇವನ್ನು ಧರಿಸಬಹುದು. ಉದಾಹರಣೆಗೆ., ಫಿಟ್ಟಿಂಗ್‌ವೇರ್‌ ಧರಿಸಲು ಸಾಧ್ಯವಿಲ್ಲದಿದ್ದಲ್ಲಿ ಲಾಂಗ್‌ ಟೀಶರ್ಟ್, ಫುಲ್‌ ಜಾಗರ್‌ ಪ್ಯಾಂಟ್ನಂತವನ್ನು ಧರಿಸಬಹುದು. ಎಂದಿಗೂ ಜಿಮ್‌ಮಾಡುವಾಗ ಭಾರಿ ಜುವೆಲರಿಗಳನ್ನು ಧರಿಸಕೂಡದು. ಹೇರ್‌ಸ್ಟೈಲ್‌ ಕೂಡ ಸಿಂಪಲ್‌ ಆಗಿರಬೇಕು.

ವಿಸ್ತಾರ : ಕೋವಿಡ್‌ ದಿನಗಳ ನಂತರ ಫಿಟ್ನೆಸ್‌ ಕ್ಷೇತ್ರದ ಬೆಳವಣಿಗೆ ಬಗ್ಗೆ ಹೇಳಿ.

ವನಿತಾ ಅಶೋಕ್‌ : ಫಿಟ್ನೆಸ್‌ ಜೀವನದ ಒಂದು ಭಾಗ ಎಂಬುದು ಎಲ್ಲರಿಗೂ ಅರಿವಾಗಿದೆ. ಪರಿಣಾಮ, ಫಿಟ್ನೆಸ್‌ ಕ್ಷೇತ್ರ ಮತ್ತೊಮ್ಮೆ ತನ್ನ ವಿಸ್ತಾರವನ್ನು ವ್ಯಾಪಿಸಿಕೊಳ್ಳುತ್ತಿದೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Gown Fashion: ಮನಮೋಹಕ ಜಾರ್ಜೆಟ್‌ ಗೌನ್ ಜಾದೂ

Exit mobile version