Site icon Vistara News

Celebrity Style | ಅಭಿರುಚಿಗೆ ತಕ್ಕಂತೆ ಸ್ಟೈಲಿಂಗ್‌ ಎನ್ನುವ ಶಿಲ್ಪಾ ಹೆಗಡೆ

Celebrity Style

ಸಂದರ್ಶನ: ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸೆಲೆಬ್ರಿಟಿ ಸ್ಟೈಲಿಸ್ಟ್‌ ಶಿಲ್ಪಾ ಹೆಗಡೆ ಯಂಗ್‌ ಹಾಗೂ ಎನರ್ಜಟಿಕ್‌ ಸ್ಟೈಲಿಸ್ಟ್‌. ನೋಡಲು ಫ್ಯಾಷೆನಬಲ್‌ ಆಗಿರುವುದು ಮಾತ್ರವಲ್ಲ, ಬಹುತೇಕ ನಟ-ನಟಿಯರಿಗೆಲ್ಲಾ ಸ್ಟೈಲಿಂಗ್‌ ಮಾಡಿದ್ದಾರೆ. ಸೆಲೆಬ್ರಿಟಿಗಳ ಆಕರ್ಷಕ ಸ್ಟೈಲಿಂಗ್‌ನಲ್ಲಿ ಇವರ ಕೈಚಳಕವಿದೆ. ಈ ಬಾರಿಯ ವೀಕೆಂಡ್‌ ಸ್ಟೈಲ್‌ನಲ್ಲಿ ವಿಸ್ತಾರದೊಂದಿಗೆ ತಮ್ಮ ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ಬಗ್ಗೆ ಅವರು ಮಾತನಾಡಿದ್ದಾರೆ.

ಸೆಲೆಬ್ರಿಟಿ ಸ್ಟೈಲಿಸ್ಟ್ ಆಗಿರುವ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು?

ನನ್ನ ಫಿಟ್ನೆಸ್‌ಗೆ ಹೊಂದುವಂತಹ ಔಟ್‌ಫಿಟ್‌ ಧರಿಸುವುದು ನನ್ನ ಫ್ಯಾಷನ್‌ ಸ್ಟೇಟ್‌ಮೆಂಟ್‌. ಅದು ಯಾವುದೇ ಡಿಸೈನರ್‌ವೇರ್‌ ಆಗಬಹುದು ನನ್ನ ಪ್ರಕಾರ ನಮ್ಮ ಲುಕ್‌ಗೆ ಸಾಥ್‌ ನೀಡಬೇಕು ಹಾಗೂ ನೋಡಲು ಆಕರ್ಷಕವಾಗಿ ಕಾಣಬೇಕು.

ನಿಮ್ಮ ಸ್ಟೈಲ್‌ಸ್ಟೇಟ್‌ಮೆಂಟ್‌ ಬಗ್ಗೆ ವಿವರಿಸಿ?

ನನ್ನ ಪರ್ಸನಾಲಿಟಿಯನ್ನು ರಿಫ್ಲೆಕ್ಟ್‌ ಮಾಡುವ ಸ್ಟೈಲ್‌ಸ್ಟೇಟ್‌ಮೆಂಟನ್ನು ಪ್ರಿಫರ್‌ ಮಾಡುತ್ತೇನೆ. ಇನ್ನು ಕೆಲವೊಮ್ಮೆ ನನ್ನ ಮೂಡ್‌ ಕೂಡ ಡಿಪೆಂಡ್‌ ಆಗುತ್ತದೆ. ಅಷ್ಟು ಮಾತ್ರವಲ್ಲ, ಪ್ರೊಫೆಷನ್‌ಗೆ ಸೂಟ್‌ ಆಗುವಂತದ್ದು ನನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಸೇರಿದೆ.

ನಿಮ್ಮ ವೀಕೆಂಡ್‌ ಸ್ಟೈಲ್‌ನಲ್ಲಿ ಏನಿದೆ? ಓದುಗರಿಗೆ ಯಾವ ಬಗೆಯ ಸ್ಟೈಲಿಂಗ್‌ ಟಿಪ್ಸ್‌ ನೀಡುತ್ತೀರಾ?

ನಾನಂತೂ ವೀಕೆಂಡ್‌ ಸ್ಟೈಲ್‌ಗೆ ಲಾಂಜ್‌ವೇರ್‌ ಧರಿಸಲು ಇಷ್ಟಪಡುತ್ತೇನೆ. ಇನ್ನು ಸೆಲೆಬ್ರಿಟಿ ಸ್ಟೈಲಿಸ್ಟ್‌ ಆಗಿರುವ ನಾನು ಓದುಗರಿಗೆ ಹೇಳುವುದಿಷ್ಟೇ! ನಿಮ್ಮ ಪರ್ಸನಾಲಿಟಿಗೆ ಸೂಟ್‌ ಆಗುವಂತಹ ವೆಸ್ಟರ್ನ್ವೇರ್‌ ಧರಿಸಿ. ಅದು ವೀಕೆಂಡ್‌ನಲ್ಲಿ ರಿಲ್ಯಾಕ್ಸಿಂಗ್‌ ಎಂದನಿಸಬೇಕು.

ಸೆಲೆಬ್ರಿಟಿಗಳಿಗೆ ಯಾವ ಆಧಾರದ ಮೇಲೆ ಸ್ಟೈಲಿಂಗ್‌ ಮಾಡುತ್ತೀರಾ?

ಸೆಲೆಬ್ರೆಟಿಗಳ ಅಭಿರುಚಿ ಹಾಗೂ ಅವರು ಭಾಗವಹಿಸುವ ಪ್ರೋಗ್ರಾಂಗೆ ಅನುಗುಣವಾಗಿ ಸ್ಟೈಲಿಂಗ್‌ ಪ್ಲಾನ್‌ ಮಾಡುತ್ತೇನೆ. ಅವರ ಅಭಿಲಾಷೆಗೆ ತಕ್ಕಂತೆ ಯೋಚಿಸುತ್ತೇನೆ. ಸ್ಟೈಲಿಂಗ್‌ ಮಾಡುತ್ತೇನೆ. ಇದು ಯಶಸ್ವಿಯಾಗುತ್ತದೆ ಕೂಡ.

ಇದನ್ನೂ ಓದಿ| Star Style | ಟ್ರೆಂಡ್‌ ಸೆಟ್‌ ಮಾಡಿದ ಅಲಿಯಾ ಪ್ರೆಗ್ನೆನ್ಸಿ ಫ್ಯಾಷನ್‌

Exit mobile version