ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನ ಫೆಬ್ರುವರಿ ೯ ಚಾಕೊಲೇಟ್ ಡೇ (Chocolate Day 2023 Date). ಈ ದಿನಕ್ಕೆ ಪೂರಕವಾಗುವಂತೆ ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್‌ನ ಬಗೆ ಬಗೆಯ ಚಾಕೊಲೇಟ್ ಗಿಫ್ಟ್ ಬಾಕ್ಸ್‌ಗಳು ಆಗಮಿಸಿದ್ದು, ಅವುಗಳಲ್ಲಿ ಹಾರ್ಟ್ ಶೇಡ್ ಇರುವಂತಹ ಚಾಕೊಲೇಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ನೋಡಲು ಆಕರ್ಷಕ ವ್ರಾಪರ್ ಜೊತೆಗೆ ಸಿಹಿಯಾದ ಚಾಕೊಲೇಟ್ ಹೊಂದಿರುವ ಈ ಗಿಫ್ಟ್ ಬಾಕ್ಸ್‌ಗಳು ಕೇವಲ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ಲಭ್ಯವಿದೆ. ಈ ಬಗ್ಗೆ ಇಲ್ಲಿದೆ ವರದಿ.
ಚಾಕೊಲೇಟ್ ಲವ್‌ನ ದ್ಯೋತಕ
ಪ್ರೇಮಿಗಳ ವಾರದ ಸಮಯದಲ್ಲಿ ಚಾಕೊಲೇಟನ್ನು ಗಿಫ್ಟ್ ಕೊಡುವ ರಿವಾಜು ಹುಟ್ಟಿಕೊಂಡಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಚಾಕೊಲೇಟ್ ಎಕ್ಸ್‌ಪಟ್ರ್ಸ್ ಹೇಳುವುದು ಹೀಗೆ (Chocolate Day History). ೧೮೬೧ರಲ್ಲಿ ಕ್ಯಾಂಡಿ ಮೇಕರ್‌ಗಳಾದ ರಿಚರ್ಡ್ ಬ್ರದರ್‌ಗಳು ವ್ಯಾಲೆಂಟೈನ್ಸ್ ಡೇಗೆಂದು ವಿಶೇಷವಾಗಿ ಹಾರ್ಟ್ ಶೇಪ್ ಬಾಕ್ಸ್ ಸಿದ್ಧಪಡಿಸಿ ಗುಲಾಬಿಗಳಿಂದ ಸಿಂಗರಿಸಿ ಮಾರಾಟಕ್ಕೆ ಇಡುವುದರ ಮೂಲಕ ಚಾಕೊಲೇಟ್ ಗಿಫ್ಟ್ ನೀಡುವ ಟ್ರೆಂಡ್ಗೆ ಆಗಲೇ ನಾಂದಿ ಹಾಡಿದ್ದರಂತೆ. ಸುಮಾರು ೨ ದಶಕಗಳಿಗೂ ಹೆಚ್ಚು ಇತಿಹಾಸವಿರುವ ಈ ಚಾಕೊಲೇಟ್ ಗಿಫ್ಟ್ಗಳು ಬರಬರುತ್ತಾ ನಾನಾ ಬ್ರಾಂಡ್‌ಗಳಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡವು. ಅವುಗಳಲ್ಲಿ ಎಲ್ಲರಿಗೂ ತಿಳಿದಿರುವಂತೆ, ಹ್ಯಾರಿ ಮತ್ತು ಡೇವಿಡ್, ಗೊಡ್ವಿವಾ, ಚಾಕೊಲಾವಾ, ಸಾಕ್ಸಾನ್, ಕ್ಯಾಡ್ಬರಿ ಸೇರಿದಂತೆ ನಾನಾ ಬ್ರಾಂಡ್‌ಗಳವು ಪಾಪುಲರ್ ಆದವು. ಇದೀಗ ಮತ್ತಷ್ಟು ಹೊಸ ಬ್ರಾಂಡ್‌ಗಳು ಈ ಲಿಸ್ಟ್‌ಗೆ ಸೇರಿವೆ. ಸಮೀಕ್ಷೆಯೊಂದರ ಪ್ರಕಾರ, ಪ್ರತಿವರ್ಷ ಪ್ರಪಂಚಾದಾದ್ಯಂತ ಸರಿ ಸುಮಾರು ೩.೬ ಕೋಟಿಗೂ ಹೆಚ್ಚು ಚಾಕೊಲೇಟ್ ಬಾಕ್ಸ್‌ಗಳು ಪ್ರತಿ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಮಾರಾಟವಾಗುತ್ತವಂತೆ.
ಮೂಡ್ ಬದಲಿಸುವ ಚಾಕೊಲೇಟ್
ಚಾಕೊಲೇಟ್‌ಗೆ ಸವಿಯುವುದರಿಂದ ಮೂಡ್ ಕೂಡ ಬದಲಾಗುತ್ತದಂತೆ. ಸವಿದವರ ಎನರ್ಜಿ ಹೆಚ್ಚುವುದರೊಂದಿಗೆ ಚಾಕೊಲೇಟ್‌ನಲ್ಲಿನ ಸವಿರುಚಿ ಖುಷಿಯ ವಾತಾವಾರಣ ನಿರ್ಮಿಸಲು ಸಹಕರಿಸುತ್ತದಂತೆ.
ಪ್ರೀತಿಯ ಹಂಚುವ ಹಾರ್ಟ್ ಶೇಪ್ ಚಾಕೊಲೇಟ್ ಗಿಫ್ಟ್ ಬಾಕ್ಸ್
ಚಿಕ್ಕ ಹಾರ್ಟ್ ಶೇಪ್ ಬಾಕ್ಸ್‌ನಿಂದಿಡಿದು ದೊಡ್ಡ ಸೈಜ್‌ನ ಹಾರ್ಟ್ ಶೇಪ್‌ನ ಗಿಫ್ಟ್‌ಬಾಕ್ಸ್‌ಗಳು ಇಂದು ಲಭ್ಯ. ಈ ಗಿಫ್ಟ್ ಬಾಕ್ಸ್‌ನೊಂದಿಗೆ ಜೊತೆಗೆ ಬರುವ ಟೆಡ್ಡಿಬೇರ್, ನೈಜ ಹೂಗಳು, ಇನ್ನಿತರ ಕ್ಯೂಟ್ ಆಕ್ಸೆಸರೀಸ್‌ಗಳು ಪ್ರೇಮಿಗಳ ಮನಸೆಳೆಯುವಂತೆ ವಿನ್ಯಾಸ ಮಾಡಲಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರಾದ ಜಾನ್. ಇದೀಗ ಕಸ್ಟಮೈಸ್ಡ್ ಚಾಕೊಲೇಟ್ ಬೊಕ್ಕೆ ಕೂಡ ಲಭ್ಯ. ಹಾರ್ಟ್ ಶೇಪ್ ಮಾತ್ರವಲ್ಲ, ರೋಸ್ ಬೊಕ್ಕೆ, ಸ್ವಿಟ್ ಬೊಕ್ಕೆ, ಕೋನ್ ಬೊಕ್ಕೆ, ಕಾಂಬೋ ಸ್ಟೈಲ್ ಚಾಕೊಲೇಟ್ ಬೊಕ್ಕೆಗಳು ಮಿಕ್ಸ್ ಮ್ಯಾಚ್ ಮಾಡಿದ ಅಪ್ಷನ್‌ನಲ್ಲಿ ದೊರೆಯುತ್ತಿವೆ.
ಹಾರ್ಟ್ ಶೇಪ್ ಚಾಕೊಲೇಟ್ ಖರೀದಿಗೂ ಮುನ್ನ
ಆನ್‌ಲೈನ್‌ನಲ್ಲೂ ವೆರೈಟಿ ಡಿಸೈನ್‌ನವು ಲಭ್ಯ. ಚೆಕ್ ಮಾಡಿ ನೋಡಿ.
ಇದರೊಂದಿಗೆ ದೊರೆಯುವ ಆಫರ್‌ಗಳನ್ನು ಉಪಯೋಗಿಸಿಕೊಳ್ಳಿ.
ಸಿದ್ಧಪಡಿಸಿದ ಡೇಟ್ ಗಮನಿಸಿ ಖರೀದಿಸಿ.
ಕಸ್ಟಮೈಸ್ಡ್ ವಿನ್ಯಾಸದವು ಲಭ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Rose day Fashion: ವ್ಯಾಲೆಂಟೈನ್ಸ್ ವೀಕ್‌ನ ಆರಂಭದಲ್ಲೆ ಲಗ್ಗೆಯಿಟ್ಟ ರೋಸ್ ಪ್ರಿಂಟೆಡ್ ಡಿಸೈನರ್‌ವೇರ್ಸ್
FAQʼs
1. ಚಾಕಲೇಟ್ ಡೇ ಹಿಸ್ಟರಿ ಏನು?
Ans: 1861 ರಲ್ಲಿ ಕ್ಯಾಂಡಿ ಮೇಕರ್‌ಗಳಾದ ರಿಚರ್ಡ್ ಬ್ರದರ್‌ಗಳು ವ್ಯಾಲೆಂಟೈನ್ಸ್ ಡೇಗೆಂದು ವಿಶೇಷವಾಗಿ ಹಾರ್ಟ್ ಶೇಪ್ ಬಾಕ್ಸ್ ಸಿದ್ಧಪಡಿಸಿ ಗುಲಾಬಿಗಳಿಂದ ಸಿಂಗರಿಸಿ ಮಾರಾಟಕ್ಕೆ ಇಡುವುದರ ಮೂಲಕ ಚಾಕೊಲೇಟ್ ಗಿಫ್ಟ್ ನೀಡುವ ಟ್ರೆಂಡ್ಗೆ ಆಗಲೇ ನಾಂದಿ ಹಾಡಿದ್ದರಂತೆ. ಸುಮಾರು ೨ ದಶಕಗಳಿಗೂ ಹೆಚ್ಚು ಇತಿಹಾಸವಿರುವ ಈ ಚಾಕೊಲೇಟ್ ಗಿಫ್ಟ್ಗಳು ಬರಬರುತ್ತಾ ನಾನಾ ಬ್ರಾಂಡ್‌ಗಳಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡವು.
2. ಪ್ರೇಮಿಗಳ ದಿನದಂದು ಚಾಕೊಲೇಟ್ ಏಕೆ ಮುಖ್ಯ?
Ans: ಅಜ್ಟೆಕ್ ಕಾಲದಿಂದಲೂ ಚಾಕೊಲೇಟ್ ಅನ್ನು ಕಾಮೋತ್ತೇಜಕ ಆಹಾರವೆಂದು ಪರಿಗಣಿಸಲಾಗಿದೆ. ಚಾಕೊಲೇಟ್ ಬಯಕೆಯನ್ನು ಉರಿಯುವ ಮತ್ತು ಪ್ರೀತಿಪಾತ್ರರನ್ನು ಪ್ರಣಯಕ್ಕೆ ಹೆಚ್ಚು ತೆರೆದುಕೊಳ್ಳುವ ವಸ್ತುವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.
3. ಚಾಕೊಲೇಟ್ ಪ್ರೀತಿಯ ಸಂಕೇತವೇ?
Ans: ಹೃದಯದ ಆಕಾರದ ಚಾಕೊಲೇಟ್ ಬಾಕ್ಸ್ ಪ್ರೀತಿಯ ಸಂಕೇತವಾಗಿದೆ, ಪ್ರಣಯದ ಸಂಕೇತವಾಗಿದೆ ಮತ್ತು ಪ್ರೇಮಿಗಳ ದಿನದ ಆಂತರಿಕ ಭಾಗವಾಗಿದೆ.