ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಫೆಸ್ಟೀವ್ ಸೀಸನ್‌ನಲ್ಲಿ ಕ್ರಿಸ್ಮಸ್ ಬ್ಯೂಟಿ ಮೇಕೋವರ್ ಪ್ಯಾಕೇಜ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಫೆಸ್ಟೀವ್ ಸೀಸನ್ ಸೆಲೆಬ್ರೇಷನ್ ಮಾಡುವವರನ್ನು ಗಮನದಲ್ಲಿಟ್ಟುಕೊಂಡಿರುವ ಸ್ಪಾ ಹಾಗೂ ಬ್ಯೂಟಿ ಪಾರ್ಲರ್‌ಗಳು ಈ ಸೀಸನ್‌ನಲ್ಲಿ ಸ್ಪೆಷಲ್ ಬ್ಯೂಟಿ ಪ್ಯಾಕೇಜ್‌ಗಳನ್ನು ಬಿಡುಗಡೆಗೊಳಿಸಿವೆ. ಅವುಗಳಲ್ಲಿ ಕಸ್ಟಮೈಸ್ ಹಾಗೂ ಪ್ರತ್ಯೇಕ ಮೇಕೋವರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಆಫರ್‌ಗಳ ಮಹಾಪೂರ
ಸಿಂಪಲ್ ಫೇಸ್ ಪ್ಯಾಕ್‌ನಿಂದ ಹಿಡಿದು ಬಾಡಿ ಪಾಲಿಶಿಂಗ್‌ವರೆಗೂ ನಾನಾ ಬಗೆಯ ಬ್ಯೂಟಿ ಪ್ಯಾಕೇಜ್‌ಗಳು ಕ್ರಿಸ್ಮಸ್ ಸೀಸನ್‌ನಲ್ಲಿ ಸೇರಿವೆ. ಸಿಂಪಲ್ ಐಬ್ರೋ, ಫೇಸ್ ಪ್ಯಾಕ್, ಸ್ಕ್ರಬ್ ಸೇರಿದಂತೆ ಹಲವು ಸರ್ವಿಸ್‌ಗಳನ್ನು ಇವುಗಳೊಂದಿಗೆ ಉಚಿತವಾಗಿ ಇಲ್ಲವೇ ಆಫರ್ ರೀತಿಯಲ್ಲಿ ನೀಡಲಾಗುತ್ತಿದೆ. ಕೆಲವೆಡೆ ಫ್ರೀ ಮೆಂಬರ್‌ಶಿಪ್ ಹಾಗೂ ಆಫರ್‌ಗಳನ್ನು ಕಲ್ಪಿಸುತ್ತಿರುವುದು ಪ್ಯಾಕೇಜ್‌ಗಳ ಡಿಮ್ಯಾಂಡ್‌ಗೆ ಕಾರಣವಾಗಿದೆ. ಇದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನುತ್ತಾರೆ ಸೌಂದರ್ಯ ತಜ್ಞರು.
ಬಗೆಬಗೆಯ ಕ್ರಿಸ್ಮಸ್ ಮೇಕೋವರ್ಸ್
ನೇಲ್‌ಆರ್ಟ್, ಹೇರ್‌ಕಟ್, ಹೇರ್‌ಸ್ಟೈಲ್, ಬಾಡಿ ಪಾಲಿಶಿಂಗ್, ಫೇಸ್‌ಗ್ಲೋ ಮಾಡುವಂತಹ ಸೌಂದರ್ಯ ವರ್ಧಕ ಚಿಕಿತ್ಸೆಗಳು ಸೇರಿದಂತೆ ನಾನಾ ಮೇಕೋವರ್‌ಗಳು ಈ ಸೀಸನ್‌ನಲ್ಲಿ ಹೆಚ್ಚು ಮಹಿಳೆಯರನ್ನು ಸೆಳೆದಿವೆ. ಕೇವಲ ಕ್ರಿಸ್ಮಸ್ ಸೆಲೆಬ್ರೇಟ್ ಮಾಡುವವರು ಮಾತ್ರವಲ್ಲ, ಇತರೇ ಕಾರ್ಪೋರೇಟ್ ವರ್ಗದ ಮಹಿಳೆಯರು ಕೂಡ ಈ ಸೌಲಭ್ಯ ಹಾಗೂ ಆಫರ್‌ಗಳನ್ನು ಬಳಸಿಕೊಳ್ಳತೊಡಗಿದ್ದಾರೆ.
ಹೇರ್‌ಸ್ಟೈಲ್ ಬದಲಾವಣೆ
ಇನ್ನು ಈ ಸೀಸನ್‌ನಲ್ಲಿ ಹೇರ್‌ಸ್ಟೈಲ್ ಬದಲಾವಣೆ ಹಾಗೂ ಹೇರ್ ಕಲರ್ ಮಾಡಿಕೊಳ್ಳುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ಅದರಲ್ಲೂ ಫಂಕಿ ಹೇರ್‌ಸ್ಟೈಲ್ ಹಾಗೂ ಕಲರ್‌ಗಳನ್ನು ಹಾಕಿಸಿಕೊಳ್ಳುವವರು ಸಾಮಾನ್ಯವಾಗತೊಡಗಿದ್ದಾರೆ. ಇನ್ನು ಇದರೊಂದಿಗೆ ತಮ್ಮ ಕ್ರೇಜ್‌ಗೊಸ್ಕರ ಕ್ರಿಸ್ಮಸ್ ಐ ಮೇಕಪ್ ಹಾಗೂ ವೆಸ್ಟರ್ನ್ ಲುಕ್ ನೀಡುವ ಪಾರ್ಟಿ ಮೇಕಪ್‌ಗಳನ್ನು ಮಾಡಿಸಿಕೊಳ್ಳುವವರು ಫೆಸ್ಟೀವ್ ಸೀಸನ್ ಸಮೀಪಿಸುತ್ತಿದ್ದಂತೆ ಅಧಿಕವಾಗತೊಡಗಿದ್ದಾರೆ ಎನ್ನುತ್ತಾರೆ ಸ್ಪಾ ಮಾಲೀಕರು.
ಮೇಕೋವರ್ ಪ್ರಿಯರು ಗಮನಿಸಬೇಕಾದದ್ದೇನು?
ನ್ಯೂ ಇಯರ್‌ವರೆಗೂ ಆಫರ್‌ಗಳು ಮುಂದುವರಿದಿವೆ.
ನ್ಯೂ ಹೇರ್ ಕಲರ್‌ಗಳು ಈ ಸೀಸನ್ ಮುಗಿದರೂ ನಿಮಗೆ ಹೊಂದುವಂತಿರಬೇಕು.
ಯಾವುದೇ ಮೇಕೋವರ್‌ಗೂ ಮುನ್ನ ಅದರ ಬಗ್ಗೆ ವಿವರ ತಿಳಿದು ಮುಂದುವರಿಯಿರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion Show | ಮೈಸೂರಿನಲ್ಲಿ ಸೌತ್ ಇಂಡಿಯಾ-2022 ಫ್ಯಾಷನ್ ಶೋ, ಮೋಹಕ ನಡಿಗೆಯಿಂದ ಮನಗೆದ್ದ ಸುಂದರಿಯರು