ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಕ್ರಿಸ್ಮಸ್ ಸೀಸನ್‌ನಲ್ಲಿ ನಿಮ್ಮ ಮನೆಗೆ ನ್ಯೂ ಲುಕ್ ನೀಡಿ, ಸಾಂತಾ ಕ್ಲಾಸ್ ಬರಮಾಡಿಕೊಳ್ಳಿ ಎನ್ನುತ್ತಾರೆ ಎಕ್ಸ್‌ಪಟ್ರ್ಸ್. ಈಗಾಗಲೇ ಮಾರುಕಟ್ಟೆಯಲ್ಲಿ ಇದಕ್ಕೆ ಪೂರಕವಾಗುವಂತೆ ನಾನಾ ಬಗೆಯ ಕ್ರಿಸ್ಮಸ್ ಡೆಕೋರೇಷನ್ ಪ್ರಾಡಕ್ಟ್‌ಗಳು ಲಭ್ಯವಿದ್ದು, ಮನೆಯ ಒಳಾಂಗಣವನ್ನು ಸಿಂಗರಿಸಲು ಲೆಕ್ಕವಿಲ್ಲದಷ್ಟು ಬಗೆಯ ಮಿರಮಿರ ಮಿನುಗುವ ಡೆಕೋರೇಟಿವ್ ಆಕ್ಸೆಸರೀಸ್‌ಗಳು ದೊರೆಯುತ್ತಿವೆ. ಇವುಗಳನ್ನು ಬಳಸಿ ಹೇಗೆಲ್ಲಾ ಅಲಂಕಾರ ಮಾಡಬಹುದು ಎಂಬುದರ ಬಗ್ಗೆ ಇಂಟಿರೀಯರ್ ಡಿಸೈನರ್ಸ್ ೫ ಸಿಂಪಲ್ ಐಡಿಯಾಗಳನ್ನು ಇಲ್ಲಿ ನೀಡಿದ್ದಾರೆ.
೧. ಸೆಲೆಬ್ರೇಷನ್ ಕಾನ್ಸೆಪ್ಟ್‌ಗೆ ತಕ್ಕಂತಿರಲಿ
ನಿಮ್ಮ ಮನೆಯ ಕಾನ್ಸೆಪ್ಟ್‌ಗೆ ತಕ್ಕಂತೆ ಶಾಪಿಂಗ್ ಮಾಡಿ. ಇಂಟೀರಿಯರ್ ಡಿಸೈನರ್ ರಚಿತಾ ಹೇಳುವಂತೆ, ಕ್ರಿಸ್ಮಸ್ ಡೆಕೋರೇಷನ್‌ನಲ್ಲಿ ಆದಷ್ಟು ಲೈಟಿಂಗ್ಸ್, ಗ್ಲಿಟ್ಟರಿಂಗ್, ಕೃತಕ ಕ್ರಿಸ್ಮಸ್ ಟ್ರೀಗಳಿಗೆ ಆದ್ಯತೆ ಹೆಚ್ಚು. ಹಾಗಾಗಿ ಅವುಗಳನ್ನು ನಿಮ್ಮ ಮನೆಯ ಒಳಾಂಗಣಕ್ಕೆ ಸೂಟ್ ಆಗುವಂತೆ ಸೆಲೆಕ್ಟ್ ಮಾಡಿ.
೨. ಕಲರ್‌ಫುಲ್ ಮಿನಿ ಲೈಟಿಂಗ್ಸ್
ಗೋಡೆ ಹಾಗೂ ಟ್ರೀ ಅಲಂಕಾರಕ್ಕೆ ಕಲರ್‌ಫುಲ್ ಮಿನಿ ಲೈಟಿಂಗ್ಸ್ ಕೊಳ್ಳಿ. ಸ್ಟಾರ್, ಮೂನ್ ಸೇರಿದಂತೆ ನಾನಾ ಶೇಪ್‌ಗಳನ್ನು ಆಯ್ಕೆ ಮಾಡಿ. ಆದರೆ, ಲೈಟಿಂಗ್ಸ್ ಸುರಕ್ಷಿತವಾಗಿ ಮಾಡಬೇಕು. ಮಕ್ಕಳ ಕೈಗಳಿಗೆ ಲೈಟಿಂಗ್‌ಗಳು ಸಿಗುವಂತಿರಬಾರದು. ಮನೆಯೊಳಗಿನ ಶೃಂಗಾರ ಜಾಗಕ್ಕೆ ತಕ್ಕುದಾಗಿರಬೇಕು.
೩. ಕ್ರಿಸ್ಮಸ್ ಸ್ಕೈ ಲ್ಯಾಂಟೆನ್ರ್ಸ್
ನಿಮ್ಮ ಮನೆಯ ಬಾಲ್ಕನಿ ಅಥವಾ ಹೊರಾಂಗಣಕ್ಕೆ ಹೊಂದುವಂತಹ ಕ್ರಿಸ್ಮಸ್ ಆಕಾಶ ದೀಪಗಳನ್ನು ಆಯ್ಕೆ ಮಾಡಿ. ಇದೀಗ ನಾನಾ ಬಗೆಯ ಲ್ಯಾಂಟೆರ್ನ್‌ಗಳು ಲಭ್ಯ. ಪ್ಯಾರಾಚೂಟ್ ಶೈಲಿಯವು ಎಂದಿನಂತೆ ಇಂದಿಗೂ ಟ್ರೆಂಡ್‌ನಲ್ಲಿವೆ. ವರ್ಣಮಯ ಸ್ಕೈ ಲ್ಯಾಟೆರ್ನ್‌ಗಳು ಹೊರಾಂಗಣ ಡೆಕೋರೇಷನ್‌ಗೆ ಹೊಸ ಲುಕ್ ನೀಡುತ್ತವೆ.
೪. ಕ್ರಿಸ್ಮಸ್ ಟ್ರೀ ಸುತ್ತಮುತ್ತ
ಮನೆಯ ಕಾರ್ನರ್ ಅಥವಾ ಲಿವಿಂಗ್ ರೂಮ್‌ನಲ್ಲಿ ಕ್ರಿಸ್ಮಸ್ ಟ್ರೀ ಇರಿಸಿ. ಕಾರ್ಪೆಟ್ ಹೊಂದುವಂಥದ್ದನ್ನು ಹಾಕಿ. ಕಲರ್‌ಫುಲ್ ಲೈಟ್ಸ್, ಬೆಲ್ಸ್, ಮಿನಿ ಸಾಂತಾ ಡಾಲ್ಸ್ ಸೇರಿದಂತೆ ನಾನಾ ಡೆಕೋರೇಟಿವ್ ಐಟಂಗಳಿಂದ ಟ್ರೀ ಅಲಂಕರಿಸಿ. ಗೋಡೆಯ ಬಣ್ಣಕ್ಕೆ ಈ ಅಲಂಕಾರ ಹೊಂದಬೇಕು. ಒಟ್ಟಿನಲ್ಲಿ ಅಲಂಕಾರ ಸುರಕ್ಷಿತವಾಗಿರಬೇಕು.
೫. ಶೈನಿಂಗ್ ಕಾನ್ಸೆಪ್ಟ್
ಕ್ರಿಸ್ಮಸ್ ಡೆಕೋರೆಷನ್ ವೆಸ್ಟರ್ನ್ ಕಾನ್ಸೆಪ್ಟ್‌ಗಳನ್ನು ಹೆಚ್ಚು ಹೊಂದಿರುತ್ತದೆ. ಹಾಗಾಗಿ ಆದಷ್ಟು ಲೈಟಿಂಗ್ಸ್, ಗ್ಲಿಟ್ಟರಿಂಗ್, ಕೃತಕ ಕ್ರಿಸ್‌ಮಸ್ ಟ್ರೀಗಳನ್ನು ನಿಮ್ಮ ಮನೆಯ ಒಳಾಂಗಣಕ್ಕೆ ಸೂಟ್ ಆಗುವಂತೆ ಸೆಲೆಕ್ಟ್ ಮಾಡಿ. ಆದಷ್ಟೂ ಲೈಟ್‌ವೇಟ್‌ನದ್ದು ಆಯ್ಕೆ ಮಾಡಿಕೊಳ್ಳಿ. ನೋಡಲು ಆಕರ್ಷಕವಾಗಿ ಕಾಣುತ್ತದೆ.
ನೀವು ಮಾಡುವ ಕ್ರಿಸ್ಮಸ್ ಅಲಂಕಾರ ಡಲ್ ಫಿನಿಶಿಂಗ್ ಇರಕೂಡದು. ಆದಷ್ಟೂ ಅಲಂಕಾರಕ್ಕೆ ಗ್ಲಿಟ್ಟರ್ ಇರುವಂತಹ ಆಕ್ಸೆಸರೀಸ್‌ಗಳನ್ನು ಬಳಸಿ. ಶೈನಿಂಗ್ ತೋರಣಗಳನ್ನು ಬಳಸಿ. ಅಲಂಕಾರ ಮನಸ್ಸಿಗೆ ಮುದ ನೀಡುವಂತಿರಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion Show | ಮೈಸೂರಿನಲ್ಲಿ ಸೌತ್ ಇಂಡಿಯಾ-2022 ಫ್ಯಾಷನ್ ಶೋ, ಮೋಹಕ ನಡಿಗೆಯಿಂದ ಮನಗೆದ್ದ ಸುಂದರಿಯರು