ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟೀವ್ ಸೀಸನ್ ಸಂಭ್ರಮ ಹೆಚ್ಚಿಸುವ ಕ್ರಿಸ್ಮಸ್ ಕಿಡ್ಸ್‌ವೇರ್‌ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಫೆಸ್ಟೀವ್ ಥೀಮ್ ಆಧಾರದ ಮೇಲೆ ನಾನಾ ವಿನ್ಯಾಸದ ಸಾಂತಾ ಕ್ಲಾಸ್ ಉಡುಗೆ-ತೊಡುಗೆಗಳು ಎಂಟ್ರಿ ನೀಡಿವೆ.
ಮಿನಿ ಸಾಂತಾ ಉಡುಗೆ-ತೊಡುಗೆಗಳಿಗೆ ಬೇಡಿಕೆ
ಅಂದಹಾಗೆ, ಈ ಫೆಸ್ಟೀವ್ ಸೀಸನ್‌ನಲ್ಲಿ ಮಿನಿ ಸಾಂತಾ ಉಡುಗೆ-ತೊಡುಗೆಗಳಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ. ಚಿಣ್ಣರ ಹಾಗೂ ಮಕ್ಕಳ ನಾನಾ ವಿನ್ಯಾಸದ ಸಾಂತಾ ಉಡುಪುಗಳು ಮಾರುಕಟ್ಟೆಗೆ ಬಂದಿದ್ದು, ಈಗಾಗಲೇ ಕ್ರಿಸ್ಮಸ್ ಸೆಲೆಬ್ರೇಷನ್ ಮಾಡುವವರು ಖರೀದಿಗೆ ತೊಡಗಿದ್ದಾರೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಚಿಕ್ಕ ಪುಟ್ಟ ಅಂಗಡಿಗಳಲ್ಲಿ, ಶೋರೂಮ್‌ಗಳಲ್ಲಿ ಮಾರಾಟ ಹೆಚ್ಚಾಗಿದೆ. “ಮೊದಲೆಲ್ಲಾ ದೊಡ್ಡವರ ಸೈಜ್‌ನ ಸಾಂತಾ ಉಡುಗೆ ತೊಡುಗೆಗಳು ಹೆಚ್ಚು ಮಾರಾಟವಾಗುತ್ತಿದ್ದವು. ಇದೀಗ ಮಕ್ಕಳ ಸೈಜ್‌ನ ಉಡುಗೆ ತೊಡಗೆಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ, ಸಾಂತಾ ಉಡುಪಿನಲ್ಲಿ ಮಕ್ಕಳನ್ನು ಸಿಂಗರಿಸುವುದು. ಕ್ರಿಸ್ಮಸ್ ಪಾರ್ಟಿ ಹಾಗೂ ಸೆಲೆಬ್ರೇಟ್ ಮಾಡುವುದು. ಹಾಗಾಗಿ ಈ ವರ್ಷ ಇವುಗಳ ಖರೀದಿ ಹೆಚ್ಚಾಗಿದೆ” ಎನ್ನುತ್ತಾರೆ ಮಾರಾಟಗಾರರಾದ ಶ್ರೀ ಕಿಶನ್.
ಫೋಟೋಶೂಟ್‌ಗಾಗಿ ಖರೀದಿ
ಸಾಕಷ್ಟು ಮಂದಿ ಫೋಟೋಶೂಟ್‌ಗಾಗಿ ಮಿನಿ ಸಾಂತಾ ಉಡುಪುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ಮಕ್ಕಳನ್ನು ಸಾಂತಾ ಶೈಲಿಯಲ್ಲಿ ರೆಡಿ ಮಾಡಿ ಫೋಟೋ ಶೂಟ್ ಮಾಡುವುದು ಕಾಮನ್ ಆಗುತ್ತಿದೆ. ಪರಿಣಾಮ, ಮಿನಿ ಸಾಂತಾ ಕ್ಲಾಸ್ ಉಡುಪುಗಳ ಡಿಮ್ಯಾಂಡ್ ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು.
ಹೆಣ್ಣುಮಕ್ಕಳಿಗೂ ಸಾಂತಾ ಫ್ರಾಕ್
ಪುಟ್ಟ ಹೆಣ್ಣು ಮಕ್ಕಳಿಗೆ ಮಿನಿ ಸಾಂತಾ ಫ್ರಾಕ್‌ಗಳು ದೊರೆಯುತ್ತಿವೆ. ಫರ್ ಕಾಲರ್ ಹಾಗೂ ಲೈನಿಂಗ್ ಹೊಂದಿರುವಂತವು ಹಾಗೂ ಸಾಂತಾ ಕಾರ್ಟೂನ್ ಇರುವಂತವು ಲಭ್ಯ. ಇವು ಧರಿಸಿದಾಗ ನೋಡಲು ಕ್ಯೂಟ್ ಆಗಿ ಕಾಣುತ್ತವೆ.
ಕ್ಯೂಟ್ ಆಗಿರುವ ಸಾಂತಾ ಟೋಪಿ
ಇನ್ನು ಮಕ್ಕಳಿಗೆ ಕ್ಯೂಟ್ ಆಗಿ ಕಾಣಿಸುವ ಸಾಂತಾ ಟೋಪಿಗಳು ನಾನಾ ಸೈಝ್‌ನಲ್ಲಿ ಲಭ್ಯ. ಸ್ನೋ ವೈಟ್ ಫರ್ ಬಾರ್ಡರ್ ಇರುವಂತವು ಆಕರ್ಷಕವಾಗಿ ಕಾಣುವಂತಹ ರೆಡ್ ಹಾಗೂ ವೈಟ್ ಮಿಕ್ಸ್ ಮ್ಯಾಚ್ ಇರುವ ಟೋಪಿಗಳು ಆಗಮಿಸಿವೆ.
ಚಿಣ್ಣರಿಗೆ ಸಾಂತಾ ಡ್ರೆಸ್ ಹಾಕುವಾಗ ಗಮನವಿರಲಿ…
ತೀರಾ ದೊಗಳೆಯಾಗಿರುವುದನ್ನು ಖರೀದಿಸಬೇಡಿ.
ಸಾಂತಾ ಉಡುಪಿಗೆ ಬೆಲ್ಟ್‌ಗಳು ಆಕರ್ಷಕವಾಗಿ ಕಾಣುತ್ತವೆ.
ಆಕ್ಸೆಸರೀಸ್ ಬಳಕೆ ಮಾಡುವುದು ಬೇಡ.
ಹೇರ್‌ಸ್ಟೈಲ್ ಉಡುಪಿಗೆ ಸೂಟ್ ಆಗುವಂತಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Winter Fashion | ವಿಂಟರ್ ಫ್ಯಾಷನ್‌ನಲ್ಲಿ ಕಲರ್ ಪ್ಯಾಂಟ್ಸ್‌ಗೆ ಹೆಚ್ಚಿದ ಕ್ರೇಜ್