ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಫೆಸ್ಟೀವ್ ಸೀಸನ್‌ನಲ್ಲಿ ನಾನಾ ಡಿಸೈನ್‌ನ ಕ್ರಿಸ್ಮಸ್ ಥೀಮ್ ನೇಲ್ ಆರ್ಟ್ ಬಿಡುಗಡೆಗೊಂಡಿದ್ದು, ಈಗಾಗಲೇ ಫ್ಯಾಷನ್ ಪ್ರಿಯ ಯುವತಿಯರನ್ನು ಬರಸೆಳೆದಿದೆ. ಇದಕ್ಕೆ ಪೂರಕ ಎಂಬಂತೆ, ಸೋಷಿಯಲ್ ಮೀಡಿಯಾ ಹಾಗೂ ಬ್ಯೂಟಿ ಬ್ಲಾಗ್‌ಗಳಲ್ಲಿ ಅಸಂಖ್ಯ ಡಿಸೈನ್‌ಗಳು ಹಂಗಾಮ ಎಬ್ಬಿಸಿವೆ.
ಇದು ಕ್ರಿಸ್ಮಸ್ ಸೀಸನ್ ನೇಲ್ ಆರ್ಟ್
ಆಯಾ ಸೀಸನ್‌ಗೆ ತಕ್ಕಂತೆ ನೇಲ್ ಆರ್ಟ್‌ಗಳು ಬದಲಾಗುತ್ತವೆ. ಕೆಲವು ಬಾರಿ ಫೆಸ್ಟೀವ್ ಸೀಸನ್‌ಗೆ ತಕ್ಕಂತೆ ರೂಪುಗೊಳ್ಳುತ್ತವೆ. ಇದೇ ರೀತಿ ಈ ಬಾರಿಯೂ ಕ್ರಿಸ್ಮಸ್ ಸೀಸನ್‌ನಲ್ಲಿ ನಾನಾ ವಿನ್ಯಾಸದ ನೇಲ್ ಆರ್ಟ್ ಡಿಸೈನ್‌ಗಳನ್ನು ನೇಲ್ ಡಿಸೈನರ್‌ಗಳು ರೂಪಿಸಿದ್ದು, ಆನ್‌ಲೈನ್ ಹಾಗೂ ಬ್ಯೂಟಿ ಬ್ಲಾಗ್‌ಗಳಲ್ಲಿ ಬಿಡುಗಡೆಗೊಳಿಸಿದ್ದಾರೆ. ಇವು ನೋಡಲು ಒಂದಕ್ಕಿಂತ ಒಂದು ಆಕರ್ಷಕವಾಗಿದ್ದು, ಬ್ಯೂಟಿ ಪ್ರಿಯ ಯುವತಿಯರ ಕೈಗಳನ್ನು ಅಲಂಕರಿಸಲಾರಂಭಿಸಿವೆ.
ಥೀಮ್‌ನಲ್ಲಿ ಏನೇನಿದೆ?
ಕ್ರಿಸ್ಮಸ್ ಥೀಮ್ ನೇಲ್ ಆರ್ಟ್‌ನಲ್ಲಿ ಕ್ರಿಸ್ಮಸ್ ಟ್ರೀ, ಬೆಲ್ಸ್, ಡಾಲ್ಸ್, ಸಾಂತಾ ಕ್ಲಾಸ್, ಗ್ಲವ್ಸ್, ಸಾಕ್ಸ್, ರೆಡ್ ಹಾಗೂ ವೈಟ್ ಟೋಪಿ, ಗ್ಲಿಟರ್ಸ್ ಥೀಮ್‌ನ ಚಿತ್ತಾರಗಳು ಸೇರಿವೆ. ನೇಲ್ ಬಾರ್ ಹಾಗೂ ಸ್ಪಾಗಳಲ್ಲೂ ಈ ಕ್ರಿಸ್ಮಸ್ ನೇಲ್‌ಆರ್ಟ್ ಡಿಸೈನ್‌ಗಳನ್ನು ಮಾಡಲಾಗುತ್ತಿದ್ದು, ಆಯಾ ಡಿಸೈನ್‌ಗೆ ತಕ್ಕಂತೆ ಶುಲ್ಕ ನಿಗದಿಪಡಿಸಿದ್ದಾರೆ. ಸಿಂಪಲ್ ವಿನ್ಯಾಸದಿಂದ ಹಿಡಿದು ಕಾಂಪ್ಲೀಕೇಟೆಡ್ ವಿನ್ಯಾಸ ಕ್ರಿಸ್ಮಸ್ ನೇಲ್ ಆರ್ಟ್ ಡಿಸೈನ್‌ಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ಅವರವರ ಆಯ್ಕೆ ಹಾಗೂ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ಡ್ ಡಿಸೈನ್‌ಗಳನ್ನು ಕೂಡ ವಿನ್ಯಾಸಗೊಳಿಸಲಾಗುತ್ತದೆ ಎನ್ನುತ್ತಾರೆ ನೇಲ್ ಸ್ಪಾವೊಂದರ ನೇಲ್ ಡಿಸೈನರ್ ರಿಚಾ. ಅವರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಒಂದೇ ತರಹದ ನೇಲ್ ಟ್ರೆಂಡ್ ಆಗಮಿಸುವುದು ಕ್ರಿಸ್ಮಸ್ ಸೀಸನ್‌ನಲ್ಲಿ ಮಾತ್ರ. ಇನ್ನುಳಿದಂತೆ, ಆಯಾ ರಾಷ್ಟ್ರದ ಫೆಸ್ಟೀವ್ ಸೀಸನ್‌ಗೆ ಸೀಮಿತವಾಗುತ್ತದೆ.
ಮನೆಯಲ್ಲೂ ನೇಲ್ ಆರ್ಟ್
ಹೌದು. ನೀವೇ ಖುದ್ದು ಸಿಂಪಲ್ ಕ್ರಿಸ್ಮಸ್ ನೇಲ್ ಆರ್ಟ್ ಮಾಡಬಹುದು. ಇದಕ್ಕಾಗಿ ಒಂದಿಷ್ಟು ತಾಳ್ಮೆ ಬೇಕು ಹಾಗೂ ಕಲಾವಿದರ ಮನಸ್ಸಿರಬೇಕು ಎನ್ನುತ್ತಾರೆ ಸೌಂದರ್ಯ ತಜ್ಞರು. ನೇಲ್ ಆರ್ಟ್ ಬಗ್ಗೆ ಟ್ಯೂಷನ್ ನೀಡುವ ಸಾಕಷ್ಟು ಯುಟ್ಯೂಬ್ ಚಾನೆಲ್‌ಗಳಿವೆ. ಇವುಗಳಿಂದಲೂ ಕಲಿಯಬಹುದು ಎನ್ನುತ್ತಾರೆ ಅವರು.
ಕ್ರಿಸ್ಮಸ್ ನೇಲ್‌ಆರ್ಟ್ ಟಿಪ್ಸ್
ಸಿಂಪಲ್ ಡಿಸೈನ್ ಮನೆಯಲ್ಲೆ ಚಿತ್ರಿಸಬಹುದು.
ಆನ್‌ಲೈನ್‌ನಲ್ಲಿ ಸಾಕಷ್ಟು ಡಿಸೈನ್ ನೋಡಿ ಕಲಿಯಬಹುದು.
ನೇಲ್ ಆರ್ಟ್ ಮಾಡಲು ನೇಲ್ ಕಿಟ್ ಹೊಂದಿರಬೇಕು.
ನೇಲ್ ಆರ್ಟ್‌ಗೂ ಮುನ್ನ ಮೆನಿಕ್ಯೂರ್ ಮಾಡಿರುವುದು ಅಗತ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Christmas Fashion | ಸೆಲೆಬ್ರೇಷನ್‌ಗೆ ಬಂತು ವೆರೈಟಿ ಕ್ರಿಸ್ಮಸ್ ಕಿಡ್ಸ್ ವೇರ್