ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲಿ ನೋಡಿದರೂ ಕ್ರಿಸ್ಮಸ್ ಶಾಪಿಂಗ್ ಮೇನಿಯಾ! ಫೆಸ್ಟೀವ್ ಸೀಸನ್ (Christmas Shopping) ಸಮೀಪಿಸುತ್ತಿದ್ದಂತೆ, ಜನರು ಈಗಿನಿಂದಲೇ ಖರೀದಿ ಶುರು ಮಾಡಿದ್ದಾರೆ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಮಾತ್ರವಲ್ಲ, ನಾನಾ ಸ್ಟ್ರೀಟ್‌ಗಳಲ್ಲಿ, ಶಾಪಿಂಗ್ ಸೆಂಟರ್‌ಗಳಲ್ಲಿ ಖರೀದಿಗೆ ಜನ ಮುಗಿಬೀಳತೊಡಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಈ ಸೀಸನ್‌ನಲ್ಲಿ ನಾನಾ ಬಗೆಯ ಹೊಸ ಡಿಸೈನರ್‌ವೇರ್‌ಗಳು, ಡೆಕೋರ್ ಐಟಂಗಳು ಬಿಡುಗಡೆಗೊಂಡಿವೆ.\
ಸೀಸನ್ ಸ್ಪೆಷಲ್ ಉಡುಪುಗಳು
ಈ ಸೀಸನ್‌ನಲ್ಲಿ ಕಂಪ್ಲೀಟ್ ವೆಸ್ಟರ್ನ್ ಕಾನ್ಸೆಪ್ಟ್‌ಗೆ ಹೊಂದುವ ಉಡುಪುಗಳು ಬಿಡುಗಡೆಗೊಂಡಿವೆ. ಹಿರಿಯರಿಂದಿಡಿದು, ಯಂಗ್‌ಸ್ಟರ್ಸ್ ಹಾಗೂ ಚಿಣ್ಣರಿಗೂ ನಾನಾ ಬಗೆಯ ವೈವಿಧ್ಯಮಯ ಉಡುಗೆ ತೊಡುಗೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ ಎನ್ನುತ್ತಾರೆ ಮಾರಾಟಗಾರರು.
ಕ್ರಿಸ್ಮಸ್ ಡೆಕೋರೇಟಿವ್ ಐಟಂಗಳು
ಕ್ರಿಸ್ಮಸ್ ಸೆಲೆಬ್ರೇಷನ್‌ಗೆ ಬೇಕಾಗುವ ಎಲ್ಲಾ ಬಗೆಯ ನಾನಾ ಹೋಮ್ ಡೆಕೋರೇಟಿವ್ ಪ್ರಾಡಕ್ಟ್‌ಗಳು ಹೆಚ್ಚೆಚ್ಚು ಮಾರಾಟಗೊಳ್ಳುತ್ತಿವೆ. ಕೆಲವೆಡೆ ಕ್ರಿಸ್ಮಸ್ ಡಿಸ್ಕೌಂಟ್ಸ್, ಆಫರ್ಸ್ ಕೂಡ ಲಭ್ಯ. ಟ್ರೀ ಬೆಲ್, ಟ್ರೀ ಹ್ಯಾಂಗಿಂಗ್ಸ್, ಅರ್ನಾಮೆಂಟಲ್ ಸ್ಟಾರ್ಸ್, ಸ್ನೋ ಮ್ಯಾನ್, ಲ್ಯಾಂಟೆರ್ನ್, ಶೈನಿಂಗ್ ಸ್ಪಾರ್ಕಲ್ಸ್‌ನಲ್ಲಿ ನಾನಾ ಬಗೆಯ ಅಲಂಕಾರಿಕ ವಸ್ತುಗಳು ಎಂಟ್ರಿ ನೀಡಿವೆ. ಇನ್ನು ಗೋಡೆಗಳಿಗೆ ತಗುಲಿ ಹಾಕುವ ಬಣ್ಣ ಬಣ್ಣದ ಲೈಟಿಂಗ್ಸ್ ನಾನಾ ಡಿಸೈನ್‌ನಲ್ಲಿ ದೊರೆಯುತ್ತಿವೆ.
ವೆರೈಟಿ ಕ್ರಿಸ್ಮಸ್ ಟ್ರೀ ಮಾರಾಟ
ಎಲ್ಲದಕ್ಕಿಂತ ಅತಿ ಹೆಚ್ಚಾಗಿ ಬೇಡಿಕೆ ಕುದುರಿಸಿಕೊಂಡಿರುವುದು ಕ್ರಿಸ್‌ಮಸ್ ಟ್ರೀ ಹಾಗೂ ಅದರ ಡೆಕೋರೇಷನ್ ಐಟಂಗಳು ಎನ್ನುತ್ತಾರೆ ಮಾರಾಟಗಾರರಾದ ಸೈಯದ್. ಅರ್ಧ ಅಡಿಯ ಕೃತಕ ಕ್ರಿಸ್ಮಸ್ ಟ್ರೀಯಿಂದಿಡಿದು ಐದಡಿಯ ಕ್ರಿಸ್ಮಸ್ ಟ್ರೀಗಳು ಇಂದು ವಿತ್ ಡೆಕೋರ್ ವಿತ್ ಔಟ್ ಡೆಕೋರ್ ಆರ್ಡರ್ ಮೇರೆಗೆ ಲಭ್ಯ ಎನ್ನುತ್ತಾರೆ.
ಪಾರ್ಟಿ ಡೆಕೋರೇಷನ್ ಸಾಮಗ್ರಿಗಳಿಗೆ ಡಿಮ್ಯಾಂಡ್
ಕ್ರಿಸ್ಮಸ್ ಹಾಗೂ ನ್ಯೂ ಯಿಯರ್‌ಗೂ ಸೂಟ್ ಆಗಬಹುದಾದಂತಹ ಪಾರ್ಟಿ ಅಲಂಕಾರಿಕ ಸಾಮಗ್ರಿಗಳು ಶಾಪಿಂಗ್ ಸೆಂಟರ್‌ಗಳನ್ನು ಅಲಂಕರಿಸಿವೆ. ಸಿಂಪಲ್ ಆಗಿ ಮನೆಯಲ್ಲೂಪಾರ್ಟಿ ಡೆಕೋರೇಷನ್ ಮಾಡಬಹುದಾದಂತಹ ವಾಲ್ ಡೆಕೋರೇಷನ್, ಶೈನಿಂಗ್ ಹ್ಯಾಂಗಿಂಗ್ಸ್, ಸಾಂತ ಹಾಗೂ ಸ್ನೋ ಮ್ಯಾನ್ ತೋರಣಗಳಿಗೂ ಬೇಡಿಕೆ ಕಂಡು ಬಂದಿದೆ ಎನ್ನುತ್ತಾರೆ ಮಾರಾಟಗಾರರಾದ ಜಾನ್.
ಕೇಕ್/ಫುಡ್ ಅಲಂಕಾರಿಕ ವಸ್ತುಗಳಿಗೂ ಬೇಡಿಕೆ :
ಇದರೊಂದಿಗೆ ಕೇಕ್ ಹಾಗೂ ಇತರೇ ಫುಡ್ ಡೆಕೋರ್ ಮಾಡುವಂತಹ ನಾನಾ ಎಡಿಬಲ್ ಡೆಕೋರೇಷನ್ ಐಟಂಗಳು ಹೆಚ್ಚೆಚ್ಚು ಮಾರಾಟವಾಗುತ್ತಿವೆ.
‘ನಾವು ಕ್ರಿಸ್ಮಸ್ ಆಚರಣೆ ಮಾಡದಿದ್ದರೂ ಕೂಡ ಪ್ರತಿವರ್ಷ ಈ ಸೀಸನ್‌ನಲ್ಲಿಸಾಕಷ್ಟು ಶಾಪಿಂಗ್ ಮಾಡುತ್ತೇವೆ. ಕಾರಣ, ವೆರೈಟಿ ವಿನ್ಯಾಸದ ಡೆಕೋರೇಟಿವ್ ಐಟಂಗಳು ಈ ಸೀಸನ್‌ನಲ್ಲಿದೊರಕುತ್ತವೆ’ ಎನ್ನುತ್ತಾರೆ ಶಾಪಿಂಗ್ ಪ್ರಿಯರಾದ ರಜನಿ ಹಾಗೂ ಧಿರಜ್.
ಕ್ರಿಸ್ಮಸ್ ಶಾಪಿಂಗ್‌ಗೂ ಮುನ್ನ
- ಟ್ರೆಂಡಿ ಡೆಕೋರ್ ಐಟಂಗಳಿಗೆ ಡಿಸ್ಕೌಂಟ್ ಇರುವುದಿಲ್ಲ.
- ಸೇಲ್ನಲ್ಲಿಸಿಗುವಂತವು ಕ್ವಾಲಿಟಿ ಇರುವುದಿಲ್ಲ.
- ಸ್ಟ್ರೀಟ್ ಶಾಪಿಂಗ್ ಮಾಡಿದಲ್ಲಿ ಚೌಕಾಸಿ ಮಾಡಬಹುದು.
- ಟ್ರೆಂಡಿಯಾಗಿರುವುದಕ್ಕೆ ದುಬಾರಿ ಬೆಲೆಯಿರಬಹುದು
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Winter Shopping Ideas | ವೀಕೆಂಡ್ ವಿಂಟರ್ ಶಾಪಿಂಗ್‌ನಲ್ಲಿ ಗಮನದಲ್ಲಿಡಬೇಕಾದ 5 ಸಂಗತಿಗಳಿವು