– ಶೀಲಾ ಸಿ. ಶೆಟ್ಟಿ, ಬೆಂಗಳೂರು
ತುಟಿಯ ರಂಗು ಹೆಚ್ಚಿಸಲು ನಾನಾ ವರ್ಣದ ಲಿಪ್ ಪೆನ್ಸಿಲ್‌ಗಳು ಕಾಸ್ಮೆಟಿಕ್ ಲೋಕಕ್ಕೆ ಕಾಲಿಟ್ಟಿವೆ.
ತುಟಿಯ ಅಂಚನ್ನು ಹೈಲೈಟ್ ಮಾಡುವ ಲಿಪ್ ಲೈನರ್ಸ್ ಅಥವಾ ಪೆನ್ಸಿಲ್‌ಗಳು ಇದೀಗ ಮ್ಯಾಟ್ ಶೇಡ್‌ನಲ್ಲಿ ಮಾತ್ರವಲ್ಲ, ಗ್ಲಾಸಿ ಟೆಕ್ಷ್ಚರ್ನ್‌ನಲ್ಲೂ ಬಂದಿವೆ. ಇವು ತುಟಿಗಳ ಅಂಚನ್ನು ಹೈಲೈಟ್ ಮಾಡುತ್ತವೆ. ಸಾಮಾನ್ಯ ವರ್ಣಗಳಾದ ಪಿಂಕ್ ಮಿಕ್ಸ್ ರೆಡ್, ವಯ್ಲೆಟ್ ಮಿಕ್ಸ್ ಡಾರ್ಕ್ ಶೇಡ್ಡ್ಸ್, ವೆರೈಟಿ ಪಿಂಕ್ ಶೇಡ್‌ಗಳು ಈ ಬಾರಿ ಶಿಮ್ಮರ್ ಶೇಡ್‌ನಲ್ಲೂ ಬಿಡುಗಡೆಯಾಗಿವೆ. ಇದು ಫೆಸ್ಟಿವ್ ಲುಕ್ ನೀಡಲು ಸಹಕಾರಿಯಾಗುತ್ತದೆ. ಇನ್ನು ಟ್ರೆಡಿಷನಲ್ ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಹ ಕಲರ್‌ಫುಲ್ ಲಿಪ್ ಪೆನ್ಸಿಲ್‌ಗಳು ಮೊದಲಿಗಿಂತ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ ಅಹಲ್ಯಾ.
ವಿಭಿನ್ನ ಶೇಡ್‌ನ ಲಿಪ್ ಲೈನರ್ಸ್
ಕೆಲವು ಲಿಪ್ ಪೆನ್ಸಿಲ್‌ಗಳು ಡಬ್ಬಲ್ ಶೇಡ್‌ನಲ್ಲಿರುತ್ತವೆ. ಮಿಕ್ಸ್ ಅಂಡ್ ಮ್ಯಾಚ್ ಗ್ಲಾಮರಸ್ ಶೇಡ್‌ನ ಈ ಲಿಪ್ ಲೈನರ್‌ಗಳು ತುಟಿಗಳ ಅಂದ ಹೆಚ್ಚಿಸಲು ಕಾರಣವಾಗುತ್ತವೆ. ಇದರೊಂದಿಗೆ ಬಂದಿರುವ ಪಿಂಕ್ ಹಾಗೂ ಪೀಚ್ ಬಣ್ಣದವು ಟೀನೇಜ್ ಹುಡುಗಿಯರ ತುಟಿಗಳಿಗೆ ಮ್ಯಾಚ್ ಆಗುತ್ತವೆ. ಸದ್ಯಕ್ಕೆ ಈ ಸೀಸನ್‌ನಲ್ಲಿ ಡಾರ್ಕ್ ಶೇಡ್ಸ್‌ಗೆ ಬೈ ಹೇಳುವುದು ಉತ್ತಮ. ಗ್ಲಾಮರಸ್ ಲುಕ್ ನೀಡುವ ಈ ಹೊಸ ಲಿಪ್ ಲೈನರ್‌ಗಳನ್ನು ಟ್ರೈ ಮಾಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ ವಿಜೇತ.
ಲಿಪ್ ಲೈನರ್ ಪ್ರಯೋಗ
ಬಹಳಷ್ಟು ಮಂದಿ ಲಿಪ್ ಲೈನರ್ ಬಳಕೆ ಮಾಡದೇ ಲಿಪ್ ಸ್ಟಿಕ್ಸ್ ಹಚ್ಚುತ್ತಾರೆ. ಕೇವಲ ಎಕ್ಸ್‌ಪರ್ಟ್‌ಗಳು ಮಾತ್ರ ಲಿಪ್ ಲೈನರ್ ಬಳಸದೆ ಆಕರ್ಷಕವಾಗಿ ಲಿಪ್‌ಸ್ಟಿಕ್ ಹಚ್ಚುವಲ್ಲಿ ಯಶಸ್ವಿಯಾಗಬಲ್ಲರು. ಲಿಪ್‌ಸ್ಟಿಕ್‌ಗಳನ್ನು ಹಚ್ಚುವಾಗ ಮೊದಲು ಲಿಪ್ ಲೈನರ್‌ನಿಂದ ತುಟಿಯ ಬಾರ್ಡರ್ ಲೈನ್ ಎಳೆದಾಗ ಮಾತ್ರ ತುಟಿಯ ಬಣ್ಣ ಹೊರ ಹೋಗದು ಹಾಗೂ ಸ್ಮಡ್ಜ್ ಆಗದು. ಹಾಗಾಗಿ ನಿಮಗಿಷ್ಟವಾದ ಬಣ್ಣದ ಲಿಪ್ಸ್ಟಿಕ್ ಲೇಪಿಸುವ ಮುನ್ನ ಲಿಪ್ ಲೈನರ್ ಹಚ್ಚುವುದನ್ನು ಮರೆಯಬೇಡಿ. ಲೈನರ್ ಹಾಕುವುದರಿಂದ ತುಟಿಯ ಬಣ್ಣ ಹೈಲೈಟಾಗುತ್ತದೆ ಎನ್ನುತ್ತಾರೆ ಅವರು.
ಲಿಪ್ ಲೈನರ್ ಬಳಸಲು ಸಿಂಪಲ್ ಟ್ರಿಕ್ಸ್
- ಲಿಪ್ ಲೈನರ್‌ನಿಂದ ತೆಳುವಾದ ಲೈನ್ ಮಾತ್ರ ಹಾಕಬೇಕು.
- ತುಟಿಯ ಔಟ್ಲೈನ್ ಮೇಲೆ ಎಳೆಯಬೇಕು.
- ಬಾರ್ಡರ್ನಿಂದ ಲೈನ್ ಹೊರ ಬರಕೂಡದು. ಬಂದಲ್ಲಿ ಮಾಯಿಶ್ಚರೈಸರ್ನಿಂದ ಒರೆಸಿ.
- ಗಾಢವಾಗಿದ್ದಲ್ಲಿ ಪೌಡರ್ ಬಫ್ನಿಂದ ಡ್ರೈ ಮಾಡಬಹುದು.
- ಟಿಶ್ಯೂ ಪೇಪರ್ ಒತ್ತಿ ಹಿಡಿದೂ ಡ್ರೈ ಮಾಡಬಹುದು.
- ಗುಣಮಟ್ಟದ ಬ್ರಾಂಡ್ನ ಲಿಪ್ಲೈನರ್ಗಳನ್ನೇ ಬಳಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Wedding beauty trend | ಮದುವೆ ಸಂಭ್ರಮಕ್ಕಿರಲಿ ಜಡೆ ಬಿಲ್ಲೆ ಸಿಂಗಾರ