ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟೀವ್ ಸೀಸನ್ ಸೆಲೆಬ್ರೇಷನ್ಗೆ (Christmas trend) ಸಾಥ್ ನೀಡುವ ವೈವಿಧ್ಯಮಯ ಡಿಸೈನ್ನ ಕಲರ್ಫುಲ್ ಕುಕ್ಕೀಸ್ಗಳು ಎಂಟ್ರಿ ನೀಡಿವೆ. ಹಬ್ಬದ ಖುಷಿ ಹೆಚ್ಚಿಸುವ ತಿನಿಸುಗಳಲ್ಲಿ, ಈ ಸೀಸನ್ಗೆ ಹೊಂದುವಂತಹ ಚಿತ್ತಾರವನ್ನೊಳಗೊಂಡ ಕುಕ್ಕೀಸ್ಗಳು ಮಾರುಕಟ್ಟೆಯ ಬೇಕರಿಗಳಲ್ಲಿ ಕಾಲಿಟ್ಟಿವೆ. ಅಷ್ಟು ಮಾತ್ರವಲ್ಲ ಆನ್ಲೈನ್ ಶಾಪ್ಗಳಲ್ಲೂ ಎಂಟ್ರಿ ನೀಡಿವೆ.
ವೈವಿಧ್ಯಮಯ ಕುಕ್ಕೀಸ್ ವೆರೈಟಿ
“ಕ್ರಿಸ್ಮಸ್ ಫೆಸ್ಟೀವ್ ಸೀಸನ್ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಕುಕ್ಕೀಸ್ಗಳು ತಯಾರಾಗುತ್ತವೆ. ಪ್ರಪಂಚದಾದ್ಯಂತ ಬಗೆಬಗೆಯ ಫ್ಲೇವರ್ಗಳಲ್ಲಿ, ಡಿಸೈನ್ಗಳಲ್ಲಿ ಸಿದ್ಧಗೊಳ್ಳುತ್ತವೆ. ಈಗಾಗಲೇ ಕೆಲವು ಪ್ಯಾಕೆಟ್ಗಳಲ್ಲೂ ಬಿಡುಗಡೆಗೊಂಡಿವೆ. ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಅಮದು ಹಾಗೂ ರಫ್ತುಗೊಳ್ಳುತ್ತವೆ. ಸಾಮಾನ್ಯ ಕೆಫೆಯಿಂದಿಡಿದು ದೊಡ್ಡ ಪಂಚ ತಾರಾ ಹೋಟೆಲ್ಗಳಲ್ಲೂ ಇವು ಈ ಸೀಸನ್ನಲ್ಲಿ ಲಭ್ಯವಿರುತ್ತವೆ. ಕ್ರಿಸ್ಮಸ್ ಆಚರಿಸುವ ಪ್ರತಿ ಮನೆಗಳಲ್ಲೂ ಸಿದ್ಧಗೊಳ್ಳುತ್ತವೆ. ವರ್ಷ ಕಳೆದಂತೆ ಶೆಫ್ಗಳು ಕೂಡ ಹೊಸ ಬಗೆಯ ಪ್ರಯೋಗಾತ್ಮಕ ಕುಕ್ಕೀಸ್ಗಳನ್ನು ಸಿದ್ಧಪಡಿಸತೊಡಗಿದ್ದಾರೆ” ಎನ್ನುತ್ತಾರೆ ಕುಕ್ಕೀಸ್ ಸ್ಪೆಷಲಿಸ್ಟ್ ಜಾನ್ ಹಾಗೂ ರೋಸ್.
ಕ್ರಿಸ್ಮಸ್ ಕುಕ್ಕೀಸ್ ವೆರೈಟಿ
ಸ್ನೋಬಾಲ್ ಕುಕ್ಕೀಸ್, ಸ್ಪ್ರಿಟ್ಜ್ ಕುಕ್ಕೀಸ್, ಕೆನೆಡಿಯನ್ ಬಟರ್ ಟಾಟ್ರ್ಸ್, ಟಾಫಿ ಅಲ್ಮಂಡ್ ಸ್ಯಾಂಡೀಸ್, ಚಾಕೋಲೇಟ್ ಚಿಪ್ ಮೆರೈಗ್ನೂಸ್, ಕ್ರಿಸ್ಮಸ್ ವ್ರೆಥ್ ಕುಕ್ಕೀಸ್, ಕ್ರಿಂಕಲ್ ಕುಕ್ಕೀಸ್, ಪೀನಟ್ ಬಟರ್, ಶುಗರ್ ಕುಕ್ಕೀಸ್, ಸ್ಕಾಟೀಶ್, ಲಿನ್ಜರ್ ಕುಕ್ಕೀಸ್, ಚಾಕೋಲೇಟ್ ಚಿಪ್ ಕುಕ್ಕೀಸ್, ಜಿಂಜರ್ ಬ್ರೇಡ್, ಕಟ್ಔಟ್ ಬಟರ್ ಕುಕ್ಕೀಸ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯವು ಈ ಕ್ರಿಸ್ಮಸ್ ಫೆಸ್ಟೀವ್ ಸೀಸನ್ನಲ್ಲಿ ಲಗ್ಗೆ ಇಟ್ಟಿವೆ. ಇನ್ನು ಹೋಮ್ಮೇಡ್ ಕುಕ್ಕೀಸ್ಗಳು ಲಭ್ಯ.
ಆನ್ಲೈನ್ನಲ್ಲಿ ನಾನಾ ಚಿತ್ತಾರದ ಕುಕ್ಕೀಸ್
ಸಾಂತಾ ಕ್ಲಾಸ್, ಕ್ರಿಸ್ಮಸ್ ಟ್ರೀ, ಡೀರ್, ಡೆಕೋರೇಟಿವ್ ಐಟಂಸ್ ಸೇರಿದಂತೆ ನಾನಾ ಕಲರ್ಫುಲ್ ಕ್ರೀಮ್ ಚಿತ್ತಾರಗಳು ಈ ಬಾರಿ ಕ್ರಿಸ್ಮಸ್ ಕುಕ್ಕೀಸ್ಗಳನ್ನು ಅಲಂಕರಿಸಿವೆ. ನೋಡಲು ಆಕರ್ಷಕವಾಗಿವೆ.
ಕುಕ್ಕೀಸ್ ಸ್ಪೆಷಾಲಿಟಿ
- ಬಹಳಷ್ಟು ದಿನಗಳವರೆಗೂ ಶೇಖರಿಸಿ ಸವಿಯಬಹುದು.
- ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುತ್ತವೆ.
- ಡೆಕೋರೇಟಿವ್ ಎಡಿಬಲ್ ಕುಕ್ಕೀಸ್ ಇಂದು ಟ್ರೆಂಡ್ನಲ್ಲಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Pet Winter Wear Fashion: ಕ್ರಿಸ್ಮಸ್ ಸೀಸನ್ನಲ್ಲಿ ಶ್ವಾನಕ್ಕೂ ಬಂತು ಚಳಿಗಾಲದ ಉಡುಗೆ!