ಬೆಂಗಳೂರು: ಹಾಲನ್ನು (Cow Milk)ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇದು ಎಲ್ಲಾ ವಿಧದ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಿಂದಾಗಿ ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಮತ್ತು ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.
ಹಾಲನ್ನು ಪ್ರಪಂಚದಾದ್ಯಂತ ಹೆಚ್ಚಿನ ಜನರು ಬಳಸುತ್ತಾರೆ. ಇದನ್ನು ವಿವಿಧ ಸಿಹಿ ತಿಂಡಿಗಳ ತಯಾರಿಕೆಯಲ್ಲಿ, ಜ್ಯೂಸ್ ತಯಾರಿಕೆಯಲ್ಲಿ ಬಳಸುತ್ತಾರೆ. ಯಾಕೆಂದರೆ ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.ಆದರೆ ಕೆಲವರಿಗೆ ಹಾಲು ಎಂದರೆ ಅಲರ್ಜಿ. ಹಾಲಿನ ಬದಲು ಈಗ ಬಾದಾಮಿ ಹಾಲು, ಸೋಯಾಹಾಲು ಎಂದು ಕುಡಿಯುತ್ತಾರೆ. ಆದರೆ ಹಸುವಿನ ಹಾಲಿನ ಮುಂದೆ ಇವು ಯಾವುದು ಸಮವಲ್ಲ ಎಂದರೆ ತಪ್ಪಾಗಲಾರದು!
ಮಾರುಕಟ್ಟೆಯಲ್ಲಿ ಹಸುವಿನ ಹಾಲು ಮಾತ್ರವಲ್ಲ ಮೇಕೆ, ಎಮ್ಮೆ, ಒಂಟೆ, ಕುರಿ, ಮುಂತಾದವುಗಳ ಹಾಲು ಲಭ್ಯವಿರುತ್ತದೆ. ಅಲ್ಲದೇ ಬಾದಾಮಿ, ಗೋಡಂಬಿ, ಸೋಯಾ, ಓಟ್ ಮೀಲ್ ಹಾಲು ಸಿಗುತ್ತದೆ. ಈ ಹಾಲನ್ನು ಹಸುವಿನ ಹಾಲಿಗೆ ಹೋಲಿಸಲಾಗುತ್ತದೆ. ಆದರೆ ಹಸುವಿನ ಹಾಲು ವಿಶೇಷವಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ಅದನ್ನು ಇತರ ಹಾಲುಗಳ ಜೊತೆ ಹೋಲಿಸಲಾಗುವುದಿಲ್ಲ. ಇಂತಹ ಅದ್ಭುತವಾದ ಹಾಲನ್ನು ಕುಡಿಯುವುದರಿಂದ ನಿಮಗೆ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.
ಹಾಲಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ಇದನ್ನು ಸೇವಿಸಿದರೆ ನಿಮ್ಮ ಶಕ್ತಿ ಹೆಚ್ಚಾಗುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಇದರಲ್ಲಿರುವ ಅಮೈನೋ ಆಮ್ಲ ಹಾನಿಗೊಳಗಾದ ಜೀವಕೋಶಗಳನ್ನು ಮತ್ತು ಅಂಗಾಂಶಗಳನ್ನು ಸರಿಪಡಿಸುತ್ತದೆ.
ಅಲ್ಲದೇ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವ ಕಾರಣ ಇದು ಮೂಳೆಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಹಸುವಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೀಲು ನೋವು , ಸಂಧಿವಾತ ಸಮಸ್ಯೆ ಕಾಡುವುದಿಲ್ಲ. ಇದರಲ್ಲಿ ವಿಟಮಿನ್ ಡಿ, ರಂಜಕ, ಮೆಗ್ನೀಶಿಯಂ ಇರುವುದರಿಂದ ಇದು ದೇಹದ ಒಟ್ಟಾರೆ ಬೆಳವಣಿಗೆಗೆ ಉತ್ತಮ.
ಹಾಲು ಮೆದುಳಿನ ಆರೋಗ್ಯಕ್ಕೂ ತುಂಬಾ ಉತ್ತಮ. ಇದರಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ. ಇದು ಮೆದುಳಿನ ನರಗಳನ್ನು ಶಾಂತಗೊಳಿಸಿ ನಿದ್ರೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ12 ಮೆಮೊರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಹಾಲನ್ನು ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡಿ. ಇದರಿಂದ ಅವರು ತಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ.
ಹಸುವಿನ ಹಾಲು ತೂಕ ನಷ್ಟಕ್ಕೂ ಸಹಕಾರಿಯಾಗಿದೆಯಂತೆ, ಇದರಲ್ಲಿ ಉತ್ತಮ ಕೊಬ್ಬಿನಾಂಶವಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ. ಆಗ ನೀವು ಅತಯಾಗಿ ತಿನ್ನುವುದನ್ನು ತಪ್ಪಿಸಬಹುದು. ಮತ್ತು ಕೆಟ್ಟ ಕೊಬ್ಬಿನಾಂಶವನ್ನು ನಿವಾರಿಸುತ್ತದೆ. ಮತ್ತು ಇದು ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು.
ಹಾಲಿನಲ್ಲಿ ಕೊಬ್ಬು, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಂ ಸಮೃದ್ಧವಾಗಿದ್ದು, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಸುವಿನ ಹಾಲಿನಲ್ಲಿ ಲಿನೋಲಿಕ್ ಆಮ್ಲವನ್ನು ಹೊಂದಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ.
ಇದನ್ನೂ ಓದಿ:Watch Video: ಕಾರು ಪಾರ್ಕ್ ಮಾಡುವಾಗ ಹುಷಾರ್! ಈ ಮಗುವಿನಂತೆ ಮತ್ತೊಂದು ಮಗುವಿಗೆ ಆಗದಿರಲಿ
ಹಾಗಾದ್ರೆ ಇನ್ನು ತಡಮಾಡಬೇಡಿ, ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಉಗುರು ಬೆಚ್ಚಗಿನ ಹಾಲನ್ನು ಕುಡಿದು ಮಲಗಿ. ಇದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.