ಮಗಳು ಮಾಲತಿ ಮೇರಿ ಚೋಪ್ರಾ ಜೋನಸ್ ಜತೆ ಮೊದಲ ದೀಪಾವಳಿಯನ್ನು ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ ಅದ್ಧೂರಿಯಾಗಿ ಆಚರಿಸಿದ್ದಾರೆ.
ಜನವರಿಯಲ್ಲಿ ಮಗಳು ಮಾಲತಿ ಮೇರಿಯನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದ ಪ್ರಿಯಾಂಕಾ ಹಾಗೂ ನಿಕ್ ದಂಪತಿ, ಈ ಬಾರಿಯ ದೀಪಾವಳಿಯನ್ನು ಅವಳೊಂದಿಗೆ ಆಚರಿಸಿದ್ದಾರೆ. ಹಬ್ಬದ ಫೋಟೊಗಳನ್ನು ನಿಕ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಗಳ ಬಗ್ಗೆ ಅತ್ಯಧಿಕ ಕಾಳಜಿ ತೋರಿಸುತ್ತಿರುವ ಜೋಡಿ, ಇದುವರೆಗೂ ಎಲ್ಲಿಯೂ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಈಗ ಪೋಸ್ಟ್ ಮಾಡಿರುವ ಫೋಟೊಗಳಲ್ಲೂ ಮಗಳ ಮುಖವನ್ನು ಹಾರ್ಟ್ ಇಮೋಜಿಯಿಂದ ಮರೆಮಾಡಿದ್ದಾರೆ.
ಹಬ್ಬದ ಸಂಭ್ರಮದ ಎರಡು ಫೋಟೊಗಳನ್ನು ನಿಕ್ ಹಂಚಿಕೊಂಡಿದ್ದಾರೆ. ಮೊದಲ ಫೋಟೊದಲ್ಲಿ ಪತ್ನಿ ಹಾಗೂ ಮಗಳೊಂದಿಗೆ ಪೋಸ್ ಕೊಟ್ಟಿರುವ ನಿಕ್, ಎರಡನೆಯ ಫೋಟೊದಲ್ಲಿ ಪೂಜೆ ಮಾಡುತ್ತಿರುವ ದೃಶ್ಯ ಇದೆ. ಅಭಿಮಾನಿಗಳು ಕೂಡ ಈ ಪೋಸ್ಟ್‌ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಿಯಾಂಕಾ ಹಾಗೂ ಮಾಲತಿ ಮೇರಿ ಬಿಳಿ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದರೆ, ನಿಕ್ ಅದೇ ಬಣ್ಣದ ಶೇರ್ವಾನಿ ಧರಿಸಿದ್ದಾರೆ.
ಇದನ್ನೂ ಓದಿ : ಜನುಮದಿನದ ಸಂಭ್ರಮದಲ್ಲಿ Desi Girl Priyanka Chopra