ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಳಕಿನ ಹಬ್ಬ ದೀಪಾವಳಿ ಫ್ಯಾಷನ್‌ನಲ್ಲಿ ಈ ಬಾರಿ ಕ್ರಾಪ್ ಟಾಪ್ ಲೆಹೆಂಗಾಗಳು ಹೊಸ ವಿನ್ಯಾಸದಲ್ಲಿ ಎಂಟ್ರಿ ನೀಡಿದ್ದು, ಈಗಾಗಲೇ ಯುವತಿಯರನ್ನು ಆಕರ್ಷಿಸಿವೆ.
ಫೆಸ್ಟೀವ್ ಸೀಸನ್‌ಗೆ ಗ್ರ್ಯಾಂಡ್ ಕ್ರಾಪ್ ಟಾಪ್ ಲೆಹೆಂಗಾ
ಫೆಸ್ಟಿವ್ ಸೀಸನ್‌ನ ಟ್ರೆಂಡ್‌ಗೆ ಸೂಟ್ ಆಗುವಂತೆ ಈ ಬಾರಿ ಹೆವಿ ಡಿಸೈನ್‌ನ ಕ್ರಾಪ್ ಟಾಪ್ ಲೆಹೆಂಗಾಗಳು ಬಂದಿವೆ. ನೋಡಲು ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸದಲ್ಲಿ ಇವು ದೊರೆಯುತ್ತಿವೆ. ಧರಿಸಿದಾಗ ಅತ್ಯಾಕರ್ಷಕವಾಗಿ ಕಾಣುತ್ತವೆ. ಜೊತೆಗೆ ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಡಿಸೈನರ್ ರಕ್ಷಿತಾ. ಅವರ ಪ್ರಕಾರ, ಕ್ರಾಪ್ ಟಾಪ್ ಲೆಹೆಂಗಾದಲ್ಲಿ ಸಾಮಾನ್ಯ ಯುವತಿಯರು ಹಾಗೂ ಮಹಿಳೆಯರು ಕೂಡ ಸೆಲೆಬ್ರಿಟಿ ಲುಕ್ ಪಡೆಯಬಹುದು.
ನಾರ್ತ್ ಇಂಡಿಯನ್ಸ್ ಹೆಚ್ಚಾಗಿ ಬಳಸುತ್ತಿದ್ದ ಲೆಹೆಂಗಾಗಳಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆಗಳಾಗಿವೆ. ಮೊದಮೊದಲು ಲಾಂಗ್ ಬ್ಲೌಸ್ ಹಾಗೂ ಕಮೀಜ್ ರೀತಿಯ ಲೆಹೆಂಗಾ ಟಾಪ್‌ಗಳ ಡಿಸೈನರ್‌ವೇರ್ ಜನಪ್ರಿಯವಾಗಿದ್ದವು. ಇದೀಗ ಗ್ಲಾಮರಸ್ ಲುಕ್ ನೀಡುವ ಶಾರ್ಟ್ ಬ್ಲೌಸ್ ಅಥವಾ ಕ್ರಾಪ್ ಟಾಪ್ ಲೆಹೆಂಗಾಗಳು ಪಾಪ್ಯುಲರ್ ಆಗಿವೆ. ಇವುಗಳಲ್ಲಿ ಕಲಾಂಕಾರಿ, ಜರ್ದೋಸಿ, ಎಂಬ್ರಾಯ್ಡರಿ, ಥ್ರೆಡ್‌ವರ್ಕ್, ಮಿರರ್ ವರ್ಕ್‌ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್ ರಾಶಿ.
ನಟಿಯರ ಫೇವರೇಟ್ ಡಿಸೈನರ್‌ವೇರ್
ಅಂದಹಾಗೆ, ಮೊದಲೆಲ್ಲಾ ಸಿನಿಮಾ ಹಾಗೂ ಪೇಜ್ 3 ಸೆಲೆಬ್ರಿಟಿಗಳಿಗೆ ಮಾತ್ರ ಈ ಕ್ರಾಪ್ ಟಾಪ್ ಲೆಹೆಂಗಾಗಳು ಸೀಮಿತವಾಗಿದ್ದವು.
ನಿಜ ಹೇಳಬೇಕೆಂದರೆ, ಬಾಲಿವುಡ್ ಸಿನಿಮಾಗಳ ಮೂಲಕ ಲೆಹೆಂಗಾ ಡಿಸೈನರ್‌ವೇರ್‌ಗಳು ಸಾಮಾನ್ಯ ಯುವತಿಯರನ್ನು ತಲುಪಿದವು ಎನ್ನಬಹುದು. ದಿನ ಕಳೆದಂತೆ ಕಾಲಕ್ಕೆ ತಕ್ಕಂತೆ ಇವುಗಳಲ್ಲೆ ನಾನಾ ವಿನ್ಯಾಸದವು ಬಿಡುಗಡೆಗೊಂಡವು. ಹೀಗೆ ಆಯಾ ಪರ್ಸನಾಲಿಟಿಗೆ ತಕ್ಕಂತೆ ದೊರೆಯುವ ಕ್ರಾಪ್ ಟಾಪ್ ಲೆಹೆಂಗಾಗಳು ಇದೀಗ ಕಾಲೇಜು ಯುವತಿಯರು, ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಹಾಗೂ ಬಿಂದಾಸ್ ಹುಡುಗಿಯರಿಗೂ ಪ್ರಿಯವಾಗಿವೆ.
ಪರ್ಸನಾಲಿಟಿಗೆ ತಕ್ಕಂತೆ ಚೂಸ್ ಮಾಡಿ
ಕ್ರಾಪ್ ಟಾಪ್ ಆಯ್ಕೆ ಮಾಡುವಾಗ ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾದ ಡಿಸೈನ್ ಚೂಸ್ ಮಾಡುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ. ಇನ್ನು ತೆಳ್ಳಗೆ ಉದ್ದವಿದ್ದಲ್ಲಿ ಆದಷ್ಟೂ ಕ್ರಾಪ್ ಟಾಪ್ ಕೊಂಚ ಉದ್ದವಾಗಿರಲಿ. ಕುಳ್ಳಗಿರುವವರಿಗೆ ಹೆವ್ವಿ ಡಿಸೈನ್‌ನದ್ದು ಬೇಡ. ಗೋಲ್ಡನ್ ಡಿಸೈನ್ ಎವರ್‌ಗ್ರೀನ್ ಟ್ರೆಂಡ್. ಗ್ಲಾಮರಸ್ ಲುಕ್ ಬೇಕಿದ್ದಲ್ಲಿ ಲೆಹೆಂಗಾ ಕ್ರೇಪ್ ಇಲ್ಲವೇ ಜಾರ್ಜೆಟ್‌ನದ್ದಾಗಿರಬೇಕು. ಇದು ಫ್ಲೊಟಿಯಾಗಿ ನಿಲ್ಲುವುದು. ಪ್ಲಂಪಿಯಾಗಿರುವವರಿಗೆ ವೆಲ್ವೆಟ್ ಮೆಟಿರಿಯಲ್‌ನದ್ದು ನಾಟ್ ಓಕೆ ಎಂದು ಸಿಂಪಲ್ ಸಲಹೆ ನೀಡುತ್ತಾರೆ ಅವರು.
ಸೆಮಿ ಸ್ಟಿಚ್ಡ್ ಕ್ರಾಪ್ ಟಾಪ್ ಲೆಹೆಂಗಾ
ಇನ್ನು, ಡಿಸೈನರ್ ಕ್ರಾಪ್ ಟಾಪ್ ಲೆಹೆಂಗಾಗಳನ್ನು ಸ್ಟಿಚ್ ಮಾಡಿಸುವುದಾದಲ್ಲಿ ಕಾಂಟ್ರಾಸ್ಟ್ ವರ್ಣಗಳನ್ನು ಚೂಸ್ ಮಾಡಬಹುದು. ಸಿಲ್ಕ್ ಮೆಟಿರಿಯಲ್‌ನದ್ದು ಇದೀಗ ಹೆಚ್ಚು ಪ್ರಚಲಿತದಲ್ಲಿದೆ. ರೆಡಿಮೇಡ್‌ನದ್ದಾದಲ್ಲಿ ಟ್ರಯಲ್ ನೋಡಿ ಖರೀದಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಡಿಸೈನರ್ ದಿವಿಜಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Deepawali eco friendly crackers | ದೀಪಾವಳಿಗೆ ಬಂತು ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿ