Site icon Vistara News

Deepawali party outfits | ದೀಪಾವಳಿ ಪಾರ್ಟಿಯ ರಂಗೇರಿಸಿದ ಸೆಲೆಬ್ರಿಟಿಗಳ ಡಿಸೈನರ್‌ವೇರ್ಸ್

Deepawali party outfits

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟ್ರೆಂಡಿ ಶಿಮ್ಮರಿಂಗ್‌ ಎಥ್ನಿಕ್‌ ಔಟ್‌ಫಿಟ್ಸ್‌ನಲ್ಲಿ ಪಾಲ್ಗೊಂಡ ಬಾಲಿವುಡ್‌ ತಾರೆಯರು ದೀಪಾವಳಿ ಪಾರ್ಟಿಯ ರಂಗೇರಿಸಿದ್ದಾರೆ.

ವಿಕ್ಕಿ ಕೌಶಲ್‌-ಕತ್ರೀನಾ ಕೈಫ್‌

ಪ್ರತಿ ವರ್ಷದಂತೆ ಈ ವರ್ಷವೂ ನಡೆದ ದೀಪಾವಳಿ ಬ್ಯಾಶ್‌ ಹೆಸರಿನ ನಾನಾ ಫೆಸ್ಟೀವ್‌ ಪಾರ್ಟಿಯಲ್ಲಿ ಪಾಲ್ಗೊಂಡ ಬಾಲಿವುಡ್‌ ತಾರೆಯರು ಟ್ರೆಂಡಿ ಡಿಸೈನರ್‌ವೇರ್‌ಗಳಲ್ಲಿ ಪಾಲ್ಗೊಂಡು ಮಿಂಚಿದ್ದಾರೆ. ಸದಾ ಗ್ಲಾಮರಸ್‌ ಹಾಗೂ ವೆಸ್ಟರ್ನ್ ಔಟ್‌ಫಿಟ್ಸ್‌ನಲ್ಲಿ ಕಾಣಿಸಿಕೊಳ್ಳುವ ತಾರೆಯರು ದೀಪಾವಳಿಯ ಪಾರ್ಟಿಗಳಲ್ಲಿ ಮಾತ್ರ ಕಂಪ್ಲೀಟ್‌ ಎಥ್ನಿಕ್‌ ಲುಕ್‌ಗೆ ಸೈ ಎಂದಿದ್ದಾರೆ.

ಪತ್ನಿಯೊಂದಿಗೆ ನೀಲ್‌ ನಿತೀನ್‌ ಮುಖೇಶ್‌

ಬಾಲಿವುಡ್‌ನ ಆಯುಷ್ಮಾನ್‌ ಖುರಾನಾ, ರಮೇಶ್‌ ತೌರಾನಿ, ಕೃತಿ ಸನೂನ್‌ ಸೇರಿದಂತೆ ನಾನಾ ಸೆಲೆಬ್ರಿಟಿಗಳು ಏರ್ಪಡಿಸಿದ್ದ ದೀಪಾವಳಿ ಪಾರ್ಟಿ ಹಾಗೂ ಬ್ಯಾಶ್ ಕಾರ್ಯಕ್ರಮಗಳು ತಾರೆಯರ ಸಂಗಮಕ್ಕೆ ಕಾರಣವಾಗಿತ್ತು. ದೀಪಾವಳಿ ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ತಾರೆಯರು ಕೂಡ ತಂತಮ್ಮ ಯೂನಿಕ್‌ ಎಕ್ಸ್‌ಕ್ಲೂಸೀವ್‌ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡು ಸೆಲೆಬ್ರೇಟ್‌ ಮಾಡಿದರು.

ರಕುಲ್‌ ಪ್ರೀತ್‌ ಸಿಂಗ್‌

ಗ್ರ್ಯಾಂಡ್‌ ಲುಕ್‌ನಲ್ಲಿ ತಾರಾ ದಂಪತಿಗಳು

ವಿಕ್ಕಿ ಕೌಶಲ್‌- ಕತ್ರೀನಾ ಕೈಫ್‌, ರಕುಲ್‌ ಪ್ರೀತ್‌ ಸಿಂಗ್‌, ಜಾಕಿ ಬಗ್ನಾನಿ, ಕೃತಿ ಕರಬಂದಾ, ಪುಲ್ಕಿತ್‌ ಸಾಮ್ರಾಟ್‌, ರಾಜ್‌ ಕುಮಾರ್‌ ಯಾದವ್‌, ಕುನಾಲ್‌ ಕೇಮು-ಸೋಹಾ ಅಲಿ ಖಾನ್‌, ಜೆನಿಲಿಯಾ-ರಿತೇಶ್‌ ದೇಶ್‌ಮುಖ್‌, ಮಿನಿ ಮಾಥೂರ್‌ ಸೇರಿದಂತೆ ಸ್ಟಾರ್‌ ದಂಪತಿಗಳು ಕಂಪ್ಲೀಟ್‌ ಗ್ರ್ಯಾಂಡ್‌ ಎಥ್ನಿಕ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಒಬ್ಬರಿಗಿಂತ ಒಬ್ಬರ ಉಡುಪು ಕಂಪ್ಲೀಟ್‌ ಡಿಫರೆಂಟ್‌ ಆಗಿತ್ತು. ಇನ್ನು ನಟಿಯರಲ್ಲಿ ಕೆಲವರು ಸೀರೆಯಲ್ಲಿ ಕಂಗೊಳಿಸಿದರೆ, ನಟರು ಡಿಸೈನರ್‌ ಕುರ್ತಾ ಪೈಜಾಮಗಳಲ್ಲಿ ಕಾಣಿಸಿಕೊಂಡರು.

ಕುನಾಲ್‌ ಕೇಮು-ಸೋಹಾ

ಡೈಸಿ ಶಾ, ಹುಮಾ ಖುರೇಶಿ, ಶಿಲ್ಪಾ ಶೆಟ್ಟಿ, ಕರಣ್‌ ಜೋಹರ್‌, ಆದಿತ್ಯಾ ರಾಯ್‌ ಕಪೂರ್‌, ಅನನ್ಯಾ ಪಾಂಡೇ, ನುಸ್ರತ್‌ ಬರೋಚಾ, ಶಾರ್ವರಿ ಸೇರಿದಂತೆ ಹಲವರು ಶಿಮ್ಮರಿಂಗ್‌ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರು. ಮಿಕ್ಸ್‌ ಹಾಗೂ ಮ್ಯಾಚ್‌ ಇಂಡೋ-ವೆಸ್ಟರ್ನ್ ಶೈಲಿಯ ಡಿಸೈನರ್‌ವೇರ್‌ಗಳಲ್ಲಿ ಮಿನುಗಿದರು.

ಶಿಲ್ಪಾ ಶೆಟ್ಟಿ

ಎಥ್ನಿಕ್‌ ಡ್ರೆಸ್ಕೋಡ್‌ಗೆ ಆದ್ಯತೆ

ಪ್ರತಿ ವರ್ಷ ಕೆಲವು ಬಾಲಿವುಡ್‌ನ ನಟ-ನಟಿಯರ ಮನೆಗಳಲ್ಲಿ ನಡೆಯುವ ದೀಪಾವಳಿ ಪಾರ್ಟಿ ಹಬ್ಬಕ್ಕೂ ಮುನ್ನವೇ ಆರಂಭವಾಗುತ್ತದೆ. ಹಬ್ಬದ ರಂಗು ಏರಿಸುವ ಡ್ರೆಸ್‌ಕೋಡ್‌ಗೆ ಇಲ್ಲಿ ಪ್ರಾಧಾನ್ಯತೆ. ವೆಸ್ಟರ್ನ್ ಔಟ್‌ಫಿಟ್‌ಗೆ ತಾತ್ಕಾಲಿಕವಾಗಿ ವಿರಾಮ ಹಾಕಲಾಗುತ್ತದೆ. ಕೆಲವು ಪಾರ್ಟಿಗಳಲ್ಲಿ ಹಿರಿಯ ಸೆಲೆಬ್ರೆಟಿಗಳು ಡಿಸೈನರ್‌ ಸೀರೆಯಲ್ಲಿ ಕಂಡರೆ, ಮತ್ತೆ ಕೆಲವರು ಲೆಹೆಂಗಾ, ಗಾಗ್ರಾ ಹಾಗೂ ಇನ್ನಿತರೆ ಔಟ್‌ಫಿಟ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಜನರೇಷನ್‌ನವರು ಇಂಡೋ-ವೆಸ್ಟರ್ನ್ ಕಾನ್ಸೆಪ್ಟ್‌ನಲ್ಲಿ ಮಿಂಚುತ್ತಾರೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ ಜೀವಿತಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Deepawali Festive Fashion | ದೀಪಾವಳಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಕ್ರಾಪ್‌ ಟಾಪ್‌ ಲೆಹೆಂಗಾ

Exit mobile version