ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇದೀಗ ಜಗದೇಕ ಸುಂದರಿಯರ ಟಾಪ್ ೧೦ ಲಿಸ್ಟ್‌ಗೆ ಸೇರಿದ್ದಾರೆ.
ಹೌದು. ಇದರಲ್ಲೇನು ವಿಶೇಷ ಎನ್ನುತ್ತೀರಾ! ಖಂಡಿತಾ ವಿಶೇಷವಿದೆ. ಜಾಗತಿಕ ಮಟ್ಟದಲ್ಲಿ ಕೈಗೊಳ್ಳಲಾಗುವ ಈ ಅಧ್ಯಯನವನ್ನು ಲಂಡನ್ ಮೂಲದ ಪ್ಲಾಸ್ಟಿಕ್ ಸರ್ಜನ್ ಡಾ. ಜೂಲಿಯನ್ ಡಿಸಿಲ್ವಾ ನಡೆಸಿದ್ದು, ಅವರು ಕೈಗೊಂಡ ಫೇಸ್ ಮ್ಯಾಪಿಂಗ್ ಟೆಕ್ನಿಕ್ ಮಾದರಿಯ ಟೆಸ್ಟ್‌ನಲ್ಲಿ ಮ್ಯಾಚ್ ಆಗಿ ಸೈ ಏನಿಸಿಕೊಂಡ ಕೆಲವೇ ನಟಿಯರಲ್ಲಿ ಭಾರತದ ನಟಿ ದೀಪಿಕಾ ಪಡುಕೋಣೆ ಅವರೂ ಸೇರಿದ್ದಾರೆ.
ಫೇಸ್ ಮ್ಯಾಪಿಂಗ್ ಟೆಕ್ನಿಕ್
ಅಂದಹಾಗೆ, ಡಾ. ಜೂಲಿಯನ್ ಡಿ. ಸಿಲ್ವಾ ಅವರು ತಮ್ಮ ಪ್ರೊಫೆಷನ್‌ಗೆ ಅನುಗುಣವಾಗಿ ಕೈಗೊಂಡ ವೈಜ್ಞಾನಿಕ ತಂತ್ರಜ್ಞಾನವನ್ನೊಳಗೊಂಡ ಈ ಟೆಸ್ಟ್ ಮುಖ, ಮೂಗು, ತುಟಿ, ಕೆನ್ನೆ, ಐಬ್ರೋ ಹೀಗೆ ೧೨ ಕೀ ಪಾಯಿಂಟ್ ಪರೀಕ್ಷೆ ಒಳಗೊಂಡಿತ್ತು. ಇಲ್ಲಿ ಕೇವಲ ಮುಖದ ಆಕಾರ ಮಾತ್ರವಲ್ಲ, ತ್ವಚೆಯ ಟೆಕ್ಸ್ಚರ್ ನಿಂದಿಡಿದು, ಮುಖದ ಒಂದೊಂದು ಚಿಕ್ಕ ಪುಟ್ಟ ಸ್ಟ್ರಕ್ಚರನ್ನು ಇವು ಪರಿಗಣಿಸುತ್ತವೆ. ಇವುಗಳ ಆಧಾರದ ಮೇಲೆ ಪರ್ಫೆಕ್ಟ್ ಜಾಗತಿಕ ಮಟ್ಟದಲ್ಲಿ ಸುಂದರಿಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಅಧ್ಯಯನವನ್ನೊಳಗೊಂಡ ಟೆಸ್ಟ್‌ಗೆ ಜಗತ್ತಿನ ನಾನಾ ರಾಷ್ಟ್ರದ ನಟಿಯರು ಹಾಗೂ ಮಾಡೆಲ್‌ಗಳನ್ನು ಪರಿಗಣಿಸಲಾಗಿರುತ್ತದೆ. ಇಲ್ಲಿ ಆಯ್ಕೆಯಾಗುವ ಸುಂದರಿಯರನ್ನು ಅವರ ಒಂದೊಂದು ಬ್ಯೂಟಿ ಟೆಕ್ನಿಕಲ್ ಟೆಸ್ಟ್‌ಗಳ ಆಧಾರದ ಮೇಲೆ ಟಾಪ್ ೧೦ನಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ. ಇಂತಹ ಎಲ್ಲಾ ಟೆಸ್ಟ್‌ಗಳಲ್ಲೂ ಸೈ ಎನಿಸಿಕೊಂಡು ಟಾಪ್ ೧೦ ಲಿಸ್ಟ್‌ಗೆ ನಟಿ ದೀಪಿಕಾ ಪಡುಕೋಣೆ ಸೇರಿದ್ದಾರೆ. ವಿಶೇಷವೆಂದರೆ, ನಮ್ಮ ರಾಷ್ಟ್ರದ ನಟಿಯರು ಇಲ್ಲವೇ ಮಾಡೆಲ್‌ಗಳಲ್ಲಿ ಆಯ್ಕೆಯಾದವರಲ್ಲಿ ದೀಪಿಕಾ ಮಾತ್ರ ಎನ್ನುತ್ತಾರೆ ಬ್ಯೂಟಿ ತಜ್ಞೆ ಮಂಗಲಾ ಭಾನಸುಧೆ. ಪ್ರಾಚೀನ ಗ್ರೀಕ್ ಬ್ಯೂಟಿ ಕಾನ್ಸೆಪ್ಟ್ ಪ್ರೊಪೋಷನ್ ಬಳಸಿ ಇದನ್ನು ಕೈಗೊಳಲಾಗುತ್ತದೆನ್ನಲಾಗಿದೆ.
ದೀಪಿಕಾಗೆ ಗೋಲ್ಡನ್ ಸ್ಥಾನ
ಡಾ. ಜೂಲಿಯನ್ ಡಿ. ಸಿಲ್ವಾ ಅವರು ಕೈಗೊಂಡ ಅಧ್ಯಯನವನ್ನೊಳಗೊಂಡ ಈ ಬ್ಯೂಟಿ ಟೆಕ್ನಾಲಜಿ ಟೆಸ್ಟ್‌ನಲ್ಲಿ ನಟಿ ದೀಪಿಕಾಗೆ ಶೇ ೯೧.೨೨ರ ಅನುಪಾತದಷ್ಟು ಮಾರ್ಕ್ಸ್ ದೊರೆತಿವೆ. ಇನ್ನು ಹಾಲಿವುಡ್ ನಟಿ ಜೂಡಿ ಕೋಮರ್ ಶೇ ೯೪.೫೨ ರಷ್ಟು ಅಂಕ ಗಳಿಸಿದ್ದು, ವಿಶ್ವದ ಅತಿ ಸುಂದರ ಮಹಿಳೆಯರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಯಶಸ್ವಿ ಮಾಡೆಲ್ ಆಗಿದ್ದ ದೀಪಿಕಾ
ಅಂದಹಾಗೆ, ದೀಪಿಕಾ ಬಾಲಿವುಡ್ ನಟಿಯಾಗುವ ಮುನ್ನ ಯಶಸ್ವಿ ಮಾಡೆಲ್ ಕೂಡ ಆಗಿದ್ದರು ಎಂಬುದನ್ನು ಮರೆಯುವ ಆಗಿಲ್ಲ. ಅವರ ಒಂದೊಂದು ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಕೂಡ ಇಂಟರ್‌ನ್ಯಾಷನಲ್ ಮಾಡೆಲ್‌ಗಳನ್ನು ಮೀರಿಸುವಂತಿದ್ದವು. ನಟಿಯಾದ ನಂತರವಂತೂ ಹಾಲಿವುಡ್ ರೇಂಜಿಗೆ ಬದಲಾದವು ಎನ್ನುತ್ತಾರೆ ಸ್ಟೈಲಿಸ್ಟ್ ಅಮಿತ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Festive Fashion | ಎಥ್ನಿಕ್ ಗ್ರ್ಯಾಂಡ್ ಡಿಸೈನರ್‌ವೇರ್‌ನಲ್ಲಿ ಕರ್ವಾಚೌತ್ ಆಚರಿಸಿದ ಬಾಲಿವುಡ್ ತಾರೆಯರು