ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಗೋಣಿಚೀಲಕ್ಕೂ ಬ್ಯೂಟಿಫುಲ್ ಗೌನ್ ರೂಪ ಸಿಕ್ಕಿದೆ. ಹೌದು. ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ಬ್ರಾಂಡ್‌ನಲ್ಲಿ ಬಿಡುಗಡೆಯಾಗಿರುವ ಸೆಣಬು (Jute Fabric) ಗೋಣಿಚೀಲದ ಫ್ಯಾಬ್ರಿಕ್‌ನಲ್ಲಿ ಹರಿದಂತಿರುವ ಡ್ರೆಸ್, ಪ್ಯಾಂಟ್ ನೋಡಿರುತ್ತೀರಿ! ಆದರೆ, ಗೋಣಿ ಚೀಲದಲ್ಲಿ ಆಕರ್ಷಕ ಹಾಗೂ ಸುಂದರವಾದ ಗೌನ್ ರೂಪ ನೀಡಿರುವ ಸುಂದರವಾದ ಡಿಸೈನರ್‌ವೇರ್ ಕಂಡಿದ್ದೀರಾ? ಕಂಡಿದ್ದಲ್ಲಿ, ಅದು ಉದ್ಯಾನನಗರಿಯ ಡಿಸೈನರ್ ಭುವಿ ಕಲ್ಪಾಡಿಯವರ ಕ್ರಿಯೇಟಿವಿಟಿಯಲ್ಲಿ ಮೂಡಿಬಂದ ಗೌನ್ ಡಿಸೈನರ್‌ವೇರ್ ಆಗಿರುತ್ತದೆ. ಹೌದು. ಡಿಸೈನರ್ ಭುವಿಯವರು ಎಲ್ಲರೂ ಹೀಗೆಳೆಯುವ ಗೋಣಿಚೀಲವನ್ನು ಸುಂದರವಾಗಿಸಿದ್ದಾರೆ. ಎಲ್ಲರೂ ಮೆಚ್ಚುವಂತಹ ಗೌನ್ ರೂಪ ನೀಡಿದ್ದಾರೆ. ಅದರ ಸೃಷ್ಠಿ ಹೇಗಾಯಿತು ಎಂಬುದರ ಬಗ್ಗೆ ವಿಸ್ತಾರದ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.
ವಿಸ್ತಾರ: ಎಲ್ಲರೂ ಹೀಗೆಳೆಯುವ ಗೋಣಿಚೀಲ ಸೇರಿಸಿ ಸುಂದರ ಗೌನ್ ಮಾಡುವ ಕಾನ್ಸೆಪ್ಟ್ ಹೊಳೆದದ್ದು ಹೇಗೆ?
ಎಲ್ಲರಿಗಿಂತ ಭಿನ್ನವಾಗಿರಬೇಕು. ಅದರಲ್ಲೂ ಸುಂದರವಾಗಿರಬೇಕು. ನೋಡಿದಾಗ ಅಚ್ಚರಿ ಮೂಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಎಲ್ಲರ ಗಮನ ಸೆಳೆಯಬೇಕು ಎಂದು ಯೋಚಿಸಿದಾಗ ಗೋಣಿಚೀಲದಲ್ಲಿ ಗೌನ್ ಮಾಡುವ ಐಡಿಯಾ ಬಂತು.
ವಿಸ್ತಾರ: ಗೋಣಿಚೀಲದ ಡಿಸೈನರ್ ಗೌನ್‌ಗಾಗಿ ಏನೆಲ್ಲ ಬಳಸಿದ್ದೀರಾ?
ನಿಮಗೆ ಗೊತ್ತಿರುವಂತೆ ಗೋಣಿಚೀಲವನ್ನು ಹೆಚ್ಚಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಸಮಯದಲ್ಲಿ ಬಳಸುತ್ತಾರೆ. ಗೋಣಿಚೀಲದಲ್ಲೆ ನಾನಾ ಬಗೆಯವು ದೊರೆಯುತ್ತವೆ. ಅವುಗಳಲ್ಲಿ ದಪ್ಪ ಹಾಗೂ ತೆಳುವಾದ ಮೆಟೀರಿಯಲ್‌ನದ್ದನ್ನು ಆಯ್ಕೆ ಮಾಡಿಕೊಂಡು ಗೌನ್ ಸಿದ್ಧಪಡಿಸಿದ್ದೇನೆ. ನ್ಯಾಚುರಲ್ ಅರ್ತ್ ಶೇಡ್ ಹೊಂದಿರುವ ಈ ಫ್ಯಾಬ್ರಿಕ್ ಮೇಲೆ ಅಳಿದುಳಿದ ಕ್ಲಾತ್ ಫ್ಯಾಬ್ರಿಕ್ ಬಳಸಿ ಸುಂದರವಾದ ಫ್ಲವರ್‌ಗಳನ್ನು ವಿನ್ಯಾಸಗೊಳಿಸಿ, ಮತ್ತಷ್ಟು ಮೆರಗು ತುಂಬಿದ್ದೇನೆ.
ವಿಸ್ತಾರ: ನೀವು ಧರಿಸಿದ ಗೋಣಿಚೀಲದ ವೇಸ್‌ಕೋಟ್ ಕೂಡ ಇದೀಗ ಸುದ್ದಿಯಲ್ಲಿದೆ, ಈ ಬಗ್ಗೆ ಏನು ಹೇಳುತ್ತೀರಾ?
ಹೌದಾ, ಕ್ರಿಯೇಟಿವಿಟಿ ಇದ್ದಲ್ಲಿ ಎಂತಹ ಬಿಸಾಡುವ ವಸ್ತುವನ್ನು ಆಕರ್ಷಕವಾಗಿಸಬಹುದು. ಇದಕ್ಕೆ ನಾನು ಡಿಸೈನ್ ಮಾಡಿರುವ ಗೌನ್ ಹಾಗೂ ಈ ವೇಸ್‌ಕೋಟ್ ಸಾಕ್ಷಿ. ಸುಮಾರು ೨೦ ವರ್ಷಗಳಿಂದ ಟ್ರೆಡಿಷನಲ್ ಔಟ್‌ಫಿಟ್ಸ್ ಡಿಸೈನ್ ಮಾಡುತ್ತಾ ಬಂದಿದ್ದೇನೆ. ಇದೇ ಮೊದಲ ಬಾರಿಗೆ ಗೋಣಿಚೀಲದ ಡಿಸೈನರ್‌ವೇರ್ ಡಿಸೈನ್ ಮಾಡಿದ್ದೇನೆ. ಇದು ಸುದ್ದಿಯಲ್ಲಿರುವುದು ನನಗೆ ಖುಷಿ ತಂದಿದೆ.
ವಿಸ್ತಾರ: ಗೋಣಿಚೀಲದ ಔಟ್‌ಫಿಟ್ ಎಂದರೇ ನಗುತ್ತಿದ್ದ ಜನರು ಇದೀಗ ವಾವ್ ಎನ್ನುವ ಮಟ್ಟಿಗೆ ಡಿಸೈನ್ ಮಾಡಿದ್ದೀರಾ! ಈ ಬಗ್ಗೆ ಏನನ್ನು ಹೇಳಲು ಬಯಸುವಿರಿ?
ಸಂತಸವಾಗುತ್ತದೆ. ನಾನ್‌ವೇರಬಲ್ ಔಟ್‌ಫಿಟ್‌ಗಿಂತ ವೇರಬಲ್ ಗೋಣಿಚೀಲದ ಉಡುಗೆ ಡಿಸೈನ್ ಮಾಡಿರುವುದು ಸಂತಸವನ್ನು ದುಪಟ್ಟು ಮಾಡಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ಸ್ಯಾಂಡಲ್‌ವುಡ್ ನಟಿ ಸಂಯಕ್ತಾ ಹೆಗ್ಡೆ ಲೈಫ್‌ಸ್ಟೈಲ್‌ಗೆ ತಕ್ಕಂತೆ ಬದಲಾಗುವ ಫ್ಯಾಷನ್